ಗ್ರಾಮ ಪಂಚಾಯಿತಿಯಲ್ಲಿ ಅಂಧಾ ದರ್ಬಾರ್ ಪಿಡಿಓ ಜುಬೇರ್ ನಾಯಕನ – ಕರ್ಮಕಾಂಡ ಬಯಲು.
ಬೋಗಾವತಿ ಜು.16

ಸರಕಾರದ ಹಣ ಯಾವ ರೀತಿ ಲೂಟಿ ಮಾಡಬೇಕು ಎಂದು ಮಾನ್ವಿಗೆ ಬಂದು ಕಲಿಯಬೇಕು. ಯಾಕಂದರೆ ಮಾನ್ವಿ ತಾಲೂಕಿನ ಬೋಗಾವತಿ ಗ್ರಾಮ ಪಂಚಾಯತಿಯ ಪಿಡಿಓ ಜುಬೇರ್ ನಾಯಕ ಸದಸ್ಯರ ಅನುಮತಿ ಇಲ್ಲದೆ ಲಕ್ಷಾಂತರ ಹಣ ದುರ್ಬಳಕೆ ಮಾಡಿದ್ದು, ತನಿಖೆ ಮಾಡಬೇಕು ಎಂದು ಸದಸ್ಯರೆ ಆಗ್ರಹಿಸಿದ್ದಾರೆ.


ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕ ಅಂದರೆ ಸಾಕು ಸರಕಾರದ ಯಾವ ರೀತಿ ಲೂಟಿ ಮಾಡಲಾಗಿದೆ ಎಂದು ಬೋಗಾವತಿ ಗ್ರಾಮ ಪಂಚಾಯತಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೆ ತನಿಖೆ ಮಾಡಿದರೆ ಭಯ ಗೊಳ್ಳುವುದು ಗ್ಯಾರಂಟಿ.

ಮಾನ್ವಿ ತಾಲೂಕ ಪಂಚಾಯತಿ ಇ.ಓ ಖಾಲಿದ್ ಅಹ್ಮದ್ ಅವರಿಗೆ ದೂರು ಸಲ್ಲಿಸಿದರು ಸಹ ಪಿಡಿಓ ಜುಬೇರ್ ನಾಯಕ ಜೊತೆ ಶಾಮೀಲಾಗಿ ಹಣ ಲೂಟಿ ಮಾಡಿದ್ದಾರೆಂದು ಸದಸ್ಯರು ಆರೋಪಿಸಿದ್ದು, ಇ.ಓ ಖಾಲಿದ್ ಅಹ್ಮದ್ ಅವರು ಸರಿಯಾಗಿ ಆಡಳಿತ ನಡೆಸದ ಕಾರಣ ಮಾನ್ವಿ ತಾಲೂಕಲ್ಲಿ ದುರಾಡಳಿತ ಹೆಚ್ಚಾಗಲು ಕಾರಣವಾಗಿದೆ.
ತಾಲೂಕು ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್ ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ