ಸಾತಿಹಾಳ ಡೋಣಿ ಬ್ರೀಜ್ ಗೆ ಭೇಟಿ ನೀಡಿದ – ಶಾಸಕ ರಾಜುಗೌಡ ಪಾಟೀಲ.
ದೇವರ ಹಿಪ್ಪರಗಿ ಆ.09


ಎರಡು ಮೂರು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಸಾತಿಹಾಳ ಹತ್ತಿರ ಇರುವ ಡೋಣಿ ನದಿ ಬ್ರೀಜ್ ಪ್ರವಾಹ ಬಂದು ಬ್ರೀಜ್ ಮೇಲೆ ನೀರು ಬಂದು ರಸ್ತೆ ಬಂದು ಮಾಡಿ ಬ್ರೀಜ್ ಮೇಲೆ ನೀರು ಕಡಿಮೆ ಆದಮೇಲೆ ಸಂಚಾರ ಪ್ರಾರಂಭವಾಗಿದೆ. ಡೋಣಿ ನದಿ ಪ್ರವಾಹಕ್ಕೆ ರೈತರು ಹೊಲಗಳಿಗೆ ಹಾಗೂ ಸುತ್ತಲಿನ ಗ್ರಾಮಗಳಿಗೆ ನೀರು ನುಗ್ಗಿ ಆಪಾರ ಹಾನಿಯಾಗಿದ್ಧ ಸ್ಥಳಗಳಿಗೆ ಭೇಟಿ ನೀಡಿದ ದೇವರ ಹಿಪ್ಪರಗಿ ಮತ ಕ್ಷೇತ್ರದ ಶಾಸಕರಾದ ರಾಜುಗೌಡ ಪಾಟೀಲ ಕುದರಿ ಸಾಲವಾಡಗಿ ಯವರು, ಇದೆ ಸಮಯದಲ್ಲಿ ತಹಶಿಲ್ದಾರ್ ಪ್ರಕಾಶ ಸಿಂದಗಿ ಯವರು ಹಾನಿಯಾಗಿರುವ ಬಗ್ಗೆ ಹಾಗೂ ಡೋಣಿ ನದಿ ಬ್ರೀಜ್ ಮೇಲೆ ನೀರು ನುಗ್ಗಿದ ಬಗ್ಗೆ ಶಾಸಕರಿಗೆ ಮಾಹಿತಿ ನೀಡಿದರು.

ಹಾಗೂ ಕ್ಷೇತ್ರದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ರೈತರು ಜಮೀನುಗಳಿಗೆ ನೀರು ನುಗ್ಗಿದ ಘಟನೆಯ ಬಗ್ಗೆ ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಕೃಷಿ ಅಧಿಕಾರಿಗಳು ತಂಡವು ಜಂಟ ಸರ್ವೇ ಕಾರ್ಯ ನಡೆಸಿ ಸರಕಾರಕ್ಕೆ ವರದಿ ನೀಡಬೇಕು ಎಂದು ತಿಳಿಸಿದರು. ಈ ಸಂದರ್ಭಗಳಲ್ಲಿ ಸಿದ್ದನಗೌಡ ಜಲಪೂರ ಪ್ರಕಾಶ ಗುಡಿಮನಿ ನಾಗೇಶ್ ಆವಟಿ ವಿಶ್ವನಾಥ ಆವಟಿ ಮಶಾಕ್ ಕನ್ನೊಳ್ಳಿ ಕಾಸು ಹಾಗೂ ವಿವಿಧ ಗ್ರಾಮದ ರೈತರು ಹಾಗೂ ಸಾರ್ವಜನಿಕರು ಮತ್ತು ಅಧಿಕಾರ ವರ್ಗದವರು ಉಪಸ್ಥಿತರಿದ್ದರು ಎಂದು ವರದಿಯಾಗಿದೆ.
ತಾಲೂಕು ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಭೀಮಪ್ಪ. ಹಚ್ಯಾಳ.ದೇವರ ಹಿಪ್ಪರಗಿ