“ಜೋಕುಮಾರನ ಕಥೆ ವ್ಯಥೆ”…..

“ಬಾಲಾನ ತಾಯಿ ಬಂದು ನಿಂತಾಳಲ್ಲೇ
ಬಾಗಲಾಗೆ
ಬಾಲಾಗೆ ಬೆಣ್ಣೆ ಕೊಡಿರಮ್ಮ”….
“ಜೋಕುಮಾರ ಹುಟ್ಟಾಲೀ ಲೋಕವೆಲ್ಲಾ
ಬೆಳೆಯಾಲಿ
ಆ ತಾಯಿ ಹಾಲು ಕರಿಯಾಲೀ”….
“ಅಡ್ಡಡ್ಡ ಮಳಿ ಬಂದು ದೊಡ್ ದೊಡ್ಡಾ
ಕೆರಿ ತುಂಬಿ
ಗೊಡ್ಡುಗಳೆಲ್ಲಾ ಹೈನಾಗಿ ಜೋಕುಮಾರ…”.
“ಹುಟ್ಟಿದ ಏಳು ದಿನಕೆ ದೊಡ್ಡೋನಾಗಿ
ಪಟ್ಟಣವ ತಿರುಗ್ಯಾನೆ
ದಿಟ ಕಾಣೆ ದೇವಿ ನಿನ ಮಗಾ ಒಕ್ಕಲ್ಯಾರ
ಕೇರಿಗೆ ಹೋಗುತಾನ”
“ಇವಗಾಕಿದ ಮಂಚ ಕಿಲಿಕಿಲಿ
ಮಾತಾಡುತಾವ
ಕೈ ಬೀಸಿ ಮಳೆಯ ಕರೆದ್ಯಾನ”…….
ಮಾಧುರ್ಯವೇ ಮೈವೆತ್ತಂತೆ ಹಾಡುತ್ತಿದ್ದ
ಜೋಕಪ್ಪನ ಮಕ್ಕಳ ಗಾಯನ, ಮನೆಯ ಕೈ

ತೋಟದ ಮೂಲೆಯಲ್ಲೆಲ್ಲೋ ಇದ್ದವಳನ್ನು ಕೈ
ಬೀಸಿ ಕರೆಯಿತು. ಪ್ರತಿ ವರ್ಷದಂತೆ ಈ
ಬಾರಿಯೂ ‘ಜೋಕಪ್ಪ’ ಮನೆಬಾಗಿಲಿಗೆ ಬಂದು
‘ಬೆಣ್ಣೆ’ಯನ್ನು ಬೇಡಿದ್ದ. ಚಳ್ಳಕೆರೆ ತಾಲ್ಲೂಕಿನ
ಮನಮೈನಹಟ್ಟಿಯ ಶಾರದಮ್ಮ, ಪುಷ್ಪ, ಗೀತ,
ಮತ್ತು ಸರೋಜ ಜೋಕುಮಾರ ಸ್ವಾಮಿಯನ್ನು
ತಲೆಯ ಮೇಲೆ ಹೊತ್ತು ಮನೆಗೆ
ಕರೆತಂದಿದ್ದರು.
ಭೂಲೋಕದವರ ಆಹ್ವಾನದ ಮೇರೆಗೆ ಗೌರಿ
ಮತ್ತು ಗಣಪ ಕೈಲಾಸದಿಂದ ಮರ್ತ್ಯಕ್ಕೆ
ಸಂಭ್ರಮ ದಿಂದ ಆಗಮಿಸುತ್ತಾರೆ. ತೌರೂರಿನ
ಸಡಗರದಲ್ಲಿ ಮಿಂದೇಳುತ್ತಾರೆ. ಅದನ್ನು ಕಂಡ
ಈರ್ಷೆ ಪಟ್ಟ ಜೋಕುಮಾರ ತಾನೂ
ಭೂಲೋಕಕ್ಕೆ ಹೋಗಿಬರುತ್ತೇನೆ,ಮೆರೆದು
ಬರುತ್ತೇನೆ ಎಂದು ಹಠಹಿಡಿದು ಅವರಿಬ್ಬರೂ
ಕೈಲಾಸಕ್ಕೆ ಮರಳಿದ ನಂತರ ಭೂಮಿಗೆ
ಆಗಮಿಸುತ್ತಾನೆ.
ಸುತ್ತಲೂ ಬೇವಿನಸೊಪ್ಪು,ಒಳಭಾಗದಲ್ಲಿ
ಸಜ್ಜೆಯಿಂದ ತುಂಬಿದ ಬಿದರ ಪುಟ್ಟಿ
