ಭರ್ಜರಿ ಸದ್ದು ಮಾಡುತ್ತಿದೆ “ರಾಯರಿದ್ದಾರೆ” – ಆಲ್ಬಂ ಹಾಡು.

ಬೆಂಗಳೂರು ಆ.12

ಅತ್ರೇಯ ಕ್ರಿಯೇಷನ್ ಲಾಂಚನದಲ್ಲಿ ಡಾ, ಸುಮಿತಾ ಪ್ರವೀಣ್ ಹಾಗೂ ಪ್ರವೀಣ್.ಸಿ ಬಾನು ನಿರ್ಮಾಣದಲ್ಲಿ “ರಾಯರಿದ್ದಾರೆ” ಶ್ರೀ ಗುರು ರಾಘವೇಂದ್ರ ರಾಯರ ಭಕ್ತಿ ಕುರಿತಾದ ವಿಡಿಯೋ ಆಲ್ಬಂ ಸಾಂಗ್ ಭರ್ಜರಿಯಾಗೇ ಸದ್ದು ಮಾಡುತ್ತಿದೆ.ಮಂತ್ರಾಲಯದ ಶ್ರೀಗುರು ರಾಘವೇಂದ್ರ ರಾಯರ ೩೫೪ ನೇ. ಆರಾಧನೆಯ ಪ್ರಯುಕ್ತ ಮಂತ್ರಾಲಯದ ರಾಯರ ಮಠ ಹಾಗೂ ಗುಂಡ್ಲುಪೇಟೆಯ ಮೃತಿಕಾ ಬೃಂದಾವನದಲ್ಲಿ ರಾಯರ ಹಾಡಿನ ದೃಶ್ಯಗಳನ್ನು ಚಿತ್ರೀಕರಣ ಮಾಡಲಾಗಿದೆ. ಇದರಲ್ಲಿ ಪ್ರವೀಣಬಾನು, ಸುಮಿತಾ ಪ್ರವೀಣ, ಋತುಸ್ಪರ್ಶ, ರವೀಂದ್ರ ಪೈ, ವಿಶ್ವ ಮೊದಲಾದವರು ಸಹಜ ರೀತಿಯಲ್ಲಿ ಅಭಿನಯಿಸಿದ್ದಾರೆ. ಛಾಯಾಗ್ರಹಣ ಋತುಸ್ಪರ್ಶ, ಸಾಹಿತ್ಯ ಮನೋಜ, ಸಂಗೀತ ನೀತು ನೀನಾದ, ಸಂಕಲನ ಆರ್ ಅನಿಲಕುಮಾರ್, ಪತ್ರಿಕಾ ಸಂಪರ್ಕ ಚಂದ್ರಶೇಖರ, ಡಾ, ಪ್ರಭು ಗಂಜಿಹಾಳ, ಡಾ, ವೀರೇಶ ಹಂಡಿಗಿ, ಪರಿಕಲ್ಪನೆ, ಗಾಯನ ಜೊತೆಗೆ ನಿರ್ದೇಶನ ಹೊಣೆ ಡಾ, ಸುಮಿತಾ ಪ್ರವೀಣ ಅವರದ್ದಾಗಿದೆ. ಋತುಸ್ಪರ್ಶ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆ ಯಾಗಿದ್ದು ಸಮಸ್ತ ಭಕ್ತಾದಿಗಳು, ಕಲಾ ಪೋಷಕರು ವಿಡಿಯೋ ವೀಕ್ಷಿಸಿ ಪ್ರೋತ್ಸಾಹಿಸುವಂತೆ ಡಾ, ಸುಮಿತಾ ಕೋರಿದ್ದಾರೆ.

*****

– ಡಾ, ಪ್ರಭು ಗಂಜಿಹಾಳ

ಮೊ:೯೪೪೮೭೭೫೩೪೬

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button