ಮಕ್ಕಳು ಓದಿನ ಜೊತೆಗೆ ಕ್ರೀಡೆಗಳಲ್ಲೂ ಪ್ರತಿಯೊಂದು – ವಿದ್ಯಾರ್ಥಿಗಳು ಭಾಗವಹಿಸ ಬೇಕು.
ಚವನಭಾವಿ ಆ.22

ವಿದ್ಯಾರ್ಥಿಯ ಸರ್ವತೋಮುಖ ಬೆಳವಣಿಗೆಯಲ್ಲಿ ಕ್ರೀಡೆಗಳು ಮಹತ್ವದ ಪಾತ್ರ ವಹಿಸುತ್ತದೆ ಎಂದು ಕ್ರೀಡಾ ಜ್ಯೋತಿಯನ್ನು ಸ್ವೀಕರಿಸಿ ಮಾತನಾಡಿದ ದೈಹಿಕ ಶಿಕ್ಷಣಾಧಿಕಾರಿ ಬಿ.ವಾಯ್ ಕವಡಿ,ಶಿಕ್ಷಣ ಸಂಯೋಜಕ ಎ.ಬಿ ಬಗಲಿ ಹೇಳಿದರು.ಜಿಲ್ಲಾ ಪಂಚಾಯತ ವಿಜಯಪುರ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಸಮನ್ವಯಧಿಕಾಗಳ ಕಾರ್ಯಾಲಯ ಮುದ್ದೇಬಿಹಾಳ ಹಾಗೂ 2025-26 ನೇ. ಸಾಲಿನ ಅಡವಿ ಸೋಮನಾಳ ಕ್ಲಸ್ಟರ್ ಮಟ್ಟದ ಕ್ರೀಡಾಕೂಟವು ತಾಲ್ಲೂಕಿನ ಚವನಭಾವಿ ಗ್ರಾಮದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ (ಜಿ.ಎಂ.ಪಿ.ಎಸ್) ಕಾರ್ಯಕ್ರಮ ಶುಕ್ರವಾರ ಹಮ್ಮಿಕೊಳ್ಳಲಾಗಿತ್ತು.

ಅವರು ಮಾತನಾಡಿದ ಕ್ರೀಡೆಯಿಂದ ದೈಹಿಕವಾಗಿ ಗಟ್ಟಿಯಾಗಿ ಆರೋಗ್ಯವಂತರಿದ್ದರೆ ಮಾತ್ರ ಉತ್ತಮ ಶಿಕ್ಷಣ, ಇತರೆ ಕೆಲಸಗಳನ್ನು ಮಾಡಲು ಸಾಧ್ಯವಿದೆ. ಆದ್ದರಿಂದ ಮಕ್ಕಳು ಓದಿನ ಜೊತೆಗೆ ಕ್ರೀಡೆಗಳಲ್ಲೂ ಹೆಚ್ಚಿನ ಸಂಖ್ಯೆ ಭಾಗವಹಿಸಬೇಕು ಸೋಲು ಗೆಲುವು ಮುಖ್ಯವಲ್ಲ ಕ್ರೀಡೆಯಲ್ಲಿ ಭಾಗವಹಿಸಿ ಕ್ರೀಡಾಕೂಟದಲ್ಲಿ ಸಾಧನೆ ಮಾಡುವುದು ಮುಖ್ಯವಾಗಿದ್ದು ಎಂದರು. ಸರಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕರ ಸಂಘದ ಸಂಘದ ಅಧ್ಯಕ್ಷ ಬಿ.ಹೆಚ್ ಮುದ್ನೂರು, ಕಾರ್ಯದರ್ಶಿ ಎನ್.ಎಸ್ ತುರಡಗಿ, ಕ್ರೀಡೆಯಲ್ಲಿ ಪ್ರತಿಯೊಬ್ಬರ ಕ್ರೀಡೆ ಭಾಗವಹಿಸಿ ಸೋಲು ಗೆಲುವು ಮುಖ್ಯವಲ್ಲ ಆದರೆ ಕ್ರೀಡೆಯಿಂದ ದೈಹಿಕ ಮಾನಸಿಕ ಬೆಳವಣಿಗೆ ಯಾಗುತ್ತೇದೆ ಎಂದರು.ಕ್ರೀಡಾಕೂಟದ ಕುರಿತು ಶಿಕ್ಷಕ ಎಂ.ಎಸ್ ಗುಡಗುಂಟಿ ಅವರು ಮಾತನಾಡಿದರು. ಬಿ.ಆರ್.ಸಿ ಎಸ್.ಎಸ್ ಬಾವಿಕಟ್ಟಿ ಪ್ರಾಸ್ತಾವಿಕವಾಗಿ ಅವರು ಮಾತನಾಡಿದರು. ಶಾಲೆಯ ಮುಖ್ಯೋಪಾಧ್ಯಾಕ ಎಸ್.ಎಂ ಜೋಗಿನ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಇದಕ್ಕೂ ಮುನ್ನ ಕ್ರೀಡೆಯ ಪ್ರತಿಜ್ಞೆ ಬೋಧನೆಯನ್ನು ಬೋಧಿಸಿದರು.ಈ ಸಂದರ್ಭದಲ್ಲಿ ಮಾಜಿ ಗ್ರಾಪಂ ಅಧ್ಯಕ್ಷ ಹಣಮಂತ ನಾಲತವಾಡ, ಅಂಬ್ರಯ್ಯ ಮಠ, ಪತ್ರಕರ್ತ ಬಸವರಾಜ ಕುಂಬಾರ, ಭರಮಣ್ಣ ಹಂಚಿನಾಳ, ಯಲ್ಲಪ್ಪ ಕಾರಕೂರ, ಅಂಬರೀಶ್ ನಾಲತವಾಡ, ವಿರೇಶ ಚಲವಾದಿ, ಹುಸನಪ್ಪ ಗೋಗಿ, ಗ್ರಾಪಂ ಸಿಬ್ಬಂದಿಗಳಾದ ಬಲವಂತ ಜೋಗಿನ, ಬಸವರಾಜ ಬಿರಾದಾರ, ಗುಡಗುಂಟಿ, ಕ್ರೀಡಾಕೂಟಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ, ಖಾಸಗಿ ಶಾಲೆಯ ಶಿಕ್ಷಕರು, ಅಡವಿ ಸೋಮನಾಳ ಕ್ಲಸ್ಟರ್ ವ್ಯಾಪ್ತಿಯಲ್ಲಿ ಬರುವ ಮುಖ್ಯ ಶಿಕ್ಷಕರು, ದೈಹಿಕ ಶಿಕ್ಷಣ ಶಿಕ್ಷಕರು, ಚವನಭಾವಿ ಗ್ರಾಮದ ಶಾಲೆಯ ಶಿಕ್ಷಕರು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ವರದಿ:ಜಿ.ಎನ್ ಬೀರಗೊಂಡ (ಮುತ್ತು) ಮುದ್ದೇಬಿಹಾಳ

