ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಗಣೇಶ ಹಬ್ಬ ಹಾಗೂ ಈದ್‌ ಮೀಲಾದ್ – ಹಬ್ಬದ ಶಾಂತಿ ಸಭೆ.

ಮಾನ್ವಿ ಆ.22

ಪಟ್ಟಣದ ಪೊಲೀಸ್ ಠಾಣೆಯಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ನಡೆದ ಗಣೇಶ ಹಬ್ಬ ಹಾಗೂ ಈದ್‌ ಮಿಲಾದ್ ಹಬ್ಬದ ಪೂರ್ವಭಾವಿ ಶಾಂತಿ ಸಭೆಯಲ್ಲಿ ರಾಯಚೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪುಟ್ಟಮಾದಯ್ಯ ಮಾತನಾಡಿ ಪೊಲೀಸರು ಹಾಗೂ ನಾಗರಿಕರು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಪೊಲೀಸರು ಸಮವಸ್ತ್ರವನ್ನು ಹಾಕಿಕೊಂಡು ಕರ್ತವ್ಯ ನಿರ್ವಹಿಸಿದರೆ ನಾಗರಿಕರು ಸಮವಸ್ತ್ರ ಇಲ್ಲದೆಯೇ ಕರ್ತವ್ಯ ನಿರ್ವಹಿಸುತ್ತಾರೆ. ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಆ. 27 ರಿಂದ ನಡೆಯುವ ಗಣೇಶ ಹಬ್ಬ ಹಾಗೂ ಸೇ 5. ರಂದು ನಡೆಯುವ ಈದ್ ಮಿಲಾದ್ ಹಬ್ಬಗಳನ್ನು ಹಿಂದೂ ಮತ್ತು ಮುಸ್ಲಿಂ ಬಾಂಧವರು ಶಾಂತಿ ಮತ್ತು ಸೌಹಾರ್ದತೆಯಿಂದ ಆಚರಿಸಬೇಕು. ಗಣೇಶ ಹಬ್ಬವನ್ನು ಸುವ್ಯವಸ್ಥಿತವಾಗಿ ನಡೆಯುವುದಕ್ಕಾಗಿ ಪೊಲೀಸ್ ಇಲಾಖೆಯಿಂದ 28 ನಿಯಮಗಳನ್ನು ರೂಪಿಸಲಾಗಿದ್ದು ಅವುಗಳನ್ನು ಎಲ್ಲಾ ಗಣೇಶ ಮಂಡಳಿಯವರು ಕಡ್ಡಾಯವಾಗಿ ಪಾಲಿಸಬೇಕು ಹಾಗೂ ಪ್ರಕೃತಿಗೆ ಪೂರಕವಾಗಿರುವಂತೆ ಗಣೇಶ ಹಬ್ಬವನ್ನು ಆಚರಿಸುವುದಕ್ಕಾಗಿ ಮಣ್ಣಿನ ಗಣೇಶ ಮೂರ್ತಿಗಳನ್ನು ಕೂಡಿಸಿ ಹಾಗೂ ಅಲಂಕಾರಕ್ಕೆ ಪ್ಲಾಸ್ಟಿಕ್ ನಿಂದ ಮಾಡಿದ ಅಲಂಕಾರಿಕ ವಸ್ತುಗಳನ್ನು ಬಳಸಬೇಡಿ. ಗಣೇಶನನ್ನು ಕೂಡಿಸಿದ ನಂತರ ವಿಸರ್ಜನೆ ಯಾಗುವವರೆಗೂ ಭಕ್ತಿ ಭಾವದಿಂದ ಹಬ್ಬವನ್ನು ಆಚರಿಸಬೇಕು. ಜೇಸ್ಕಾ ಇಲಾಖೆಯಿಂದ ಮಾತ್ರ ಅಧಿಕೃತವಾಗಿ ವಿದ್ಯುತ್ ಸಂಪರ್ಕ ಪಡೆಯಬೇಕು. ಗಣೇಶ ಪೆಂಡಲ್ ನಲ್ಲಿ ಬೆಂಕಿ ಆಕಸ್ಮಿಕ ಸಂಭವಿಸಿದಲ್ಲಿ ನಂದಿಸುವುದಕ್ಕೆ ಅಗತ್ಯ ಸಲಕರಣೆಗಳನ್ನು ಸಂಗ್ರಹಿಸಿರ ಬೇಕು. ಮಹಿಳೆಯರಿಗೆ ಪ್ರತ್ಯೇಕವಾದ ಸಾಲಿನ ವ್ಯವಸ್ಥೆ ಮಾಡಿರಬೇಕು, ವಿಸರ್ಜನೆ ಸಮಯದಲ್ಲಿ ಪೊಲೀಸ್ ಇಲಾಖೆ ಗುರುತಿಸಿದ ಮಾರ್ಗದಲ್ಲಿಯೇ ಮೆರವಣಿಗೆ ನಡೆಸಬೇಕು. ಮೆರವಣಿಗೆ ಸಮಯದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪ್ರಮುಖ ಬೀದಿಗಳಲ್ಲಿ ಸಿ.ಸಿ ಕ್ಯಾಮರ ಅಳವಡಿಸಲಾಗುವುದು ಹಾಗೂ ಡ್ರೋನ್ ಕಾಣ್ಗಾವಲು ಹಾಕಲಾಗುವುದು. ಮೆರವಣಿಗೆ ಸಮಯದಲ್ಲಿ ಪ್ರಚೋದನೆಕಾರಿ ಭಿತ್ತಿ ಪತ್ರ ಪ್ರದರ್ಶನ, ಮಾರಕ ಆಯುಧಗಳನ್ನು ಹೊಂದುವುದು, ಡಿ.ಜೆ ಹಾಕುವುದು, ಆಶ್ಲಿಲ ಹಾಡುಗಳನ್ನು ಹಾಕುವುದು, ಅಮಲು ಪದಾರ್ಥಗಳನ್ನು ಸೇವಿಸಿ ಮೆರವಣಿಗೆಯಲ್ಲಿ ಆಶ್ಲಿಲವಾಗಿ ಕುಣಿಯುವುದನ್ನು ನಿ಼ಷೇದಿಸಲಾಗಿದೆ. ರಾತ್ರಿ 10 ರೊಳಗಾಗಿ ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಬೇಕು. ವಿಸರ್ಜನೆ ಸ್ಥಳದಲ್ಲಿ ನುರಿತ ಈಜುಗಾರರ ತಂಡದ ವ್ಯವಸ್ಥೆ ಹಾಗೂ ಕ್ರೇನ್ ವ್ಯವಸ್ಥೆ ಮಾಡಲಾಗುವುದು. ಸೇ 5. ರಂದು ಮುಸ್ಲಿಂ ಸಮುದಾಯದವರು ಈದ್ ಮೀಲಾದ್ ಹಬ್ಬವನ್ನು ಶಾಂತಿಯುತವಾಗಿ ಆಚರಿಸುವಂತೆ ತಿಳಿಸಿದರು. ಪಿ.ಐ ಸೋಮಶೇಖರ ಕೆಂಚರೆಡ್ಡಿ ಮಾತನಾಡಿ ಸಾರ್ವಜನಿಕವಾಗಿ ಗಣೇಶ ಮೂರ್ತಿಗಳನ್ನು ಕೂಡಿಸುವವರು ಕಡ್ಡಾಯವಾಗಿ ಅನುಮತಿಯನ್ನು ಪಡೆಯಬೇಕು ಅನುಮತಿ ನೀಡುವುದಕ್ಕಾಗಿ ಕಂದಾಯ ಇಲಾಖೆ, ಜೆಸ್ಕಾಂ, ಪುರಸಭೆ, ಪೊಲೀಸ್ ಇಲಾಖೆಯ ಅಧಿಕಾರಿಗಳನ್ನು ಒಳಗೊಂಡ ಏಕಗಾವಾಕ್ಷಿ ಪದ್ದತಿಯನ್ನು ಪೊಲೀಸ್ ಠಾಣೆಯ ಆವರಣದಲ್ಲಿ ವ್ಯವಸ್ಥೆ ಮಾಡಲಾಗುವುದು. ರಾತ್ರಿ 10 ರ ನಂತರ ಧ್ವನಿ ವರ್ಧಕ ಬಳಸವುದನ್ನು ನಿಷೇಧಿಸಲಾಗಿದೆ. ಮೇರವಣಿಗೆ ಸಂಧರ್ಬದಲ್ಲಿ ಧಾರ್ಮಿಕ ಸ್ಥಳ, ಆಸ್ಪತ್ರೆ ಹತ್ತಿರ ಪಟ್ಟಾಕಿ ಸಿಡಿಸುವುದು ಹಾಗೂ ಡಿ.ಜೆ ಬಳಸುವುದನ್ನು ನಿಷೇಧಿಸಲಾಗಿದೆ. ಅದಕ್ಕೆ ಪರ್ಯಾಯವಾಗಿ ಸ್ಥಳೀಯ ಕಲಾವಿದರಿಗೆ ಅವಕಾಶ ಮಾಡಿಕೋಡಿ, ಎಲ್ಲಾ ಗಣೇಶ ಮಂಡಳಿಯವರು ಹಗಲಿನ ಸಮಯದಲ್ಲಿ ಗಣೇಶನ ವಿಸರ್ಜನೆ ಮೆರವಣಿಗೆ ಮಾಡಿದಲ್ಲಿ ಒಳ್ಳೆಯದು. ಮೆರವಣಿಗೆ ಸಮಯದಲ್ಲಿ ನಿಗಧಿತ ರಸ್ತೆಯಲ್ಲಿ ಸಂಚರಿಸಿ ವಾಹನ ಸಂಚಾರಕ್ಕೆ ಅನುಕೂಲ ಮಾಡಿ ಕೊಡಬೇಕು. ಗಣೇಶ ಮಂಡಳಿಯವರು ತಮ್ಮ ಸ್ವಯಂ ಸೇವಕರಿಗೆ ಪ್ರತ್ಯೇಕವಾದ ಗುರುತಿನ ಚೀಟಿಗಳನ್ನು ಮಾಡಿಕೋಡಿ ಗಣೇಶನನ್ನು ಕೂಡಿಸಿದ ವಾಹನವನ್ನು ರಸ್ತೆಯಲ್ಲಿ ಒಂಟಿಯಾಗಿ ಬಿಟ್ಟು ಹೋಗಬಾರದು, ಪರ್ಯಾಯ ಚಾಲಕರನ್ನು ಹೊಂದಿರಬೇಕು ಇಲಾಖೆಯ ನಿಯಮಗಳನ್ನು ಮೀರಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ತಹಸೀಲ್ದಾರ್ ಭೀಮರಾಯ.ಬಿ ರಾಮಸಮುದ್ರ, ಸಿಂಧನೂರು ಗ್ರಾಮೀಣ ಡಿ.ವೈ.ಎಸ್.ಪಿ ಬಿ.ಎಸ್ ತಳವಾರ್ ಮಾತನಾಡಿದರು. ಸಭೆಯಲ್ಲಿ ರಾಯಚೂರು ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕುಮಾರಸ್ವಾಮಿ, ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕರಾದ ದೀಪಾ, ಜೆಸ್ಕಾಂ ಇಲಾಖೆಯ ಜೆ.ಇ ಬಸವಲಿಂಗಪ್ಪ, ಹಿರಿಯ ನ್ಯಾಯಾವಾದಿಗಳಾದ ಎ.ಬಿ ಉಪಳಮಠ, ಗುಮ್ಮಬಸವರಾಜ, ಪುರಸಭೆ ಸದಸ್ಯರಾದ ರಾಜಾ ಮಹೇಂದ್ರ ನಾಯಕ ರೇವಣ ಸಿದ್ದಯ್ಯಸ್ವಾಮಿ, ಬಾಷಸಾಬ್, ಮುಖಂಡರಾದ ಕೆ.ಬಸವಂತಪ್ಪ, ರಾಜಾ ಸುಭಾಷಚಂದ್ರ ನಾಯಕ, ರೆಹಮತ್, ಅದಮ್, ಹನುಮೇಶ ನಾಯಕ ಸೇರಿದಂತೆ ತಾಲೂಕಿನ ಗಣೇಶ ಮಂಡಳಿಗಳ ಪದಾಧಿಕಾರಿಗಳು, ಪಟ್ಟಣದ ನೂರಾರು ಹಿಂದೂ ಮತ್ತು ಮುಸ್ಲಿಂ ಸಮುದಾಯಗಳ ಮುಖಂಡರು ಭಾಗವಹಿಸಿದ್ದರು.

ಬಾಕ್ಸ್ ಸುದ್ದಿ:-

ಪಟ್ಟಣದ ಪೊಲೀಸ್ ಠಾಣೆಯಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ನಡೆದ ಗಣೇಶ ಹಬ್ಬ ಹಾಗೂ ಈದ್‌ ಮಿಲಾದ್ ಹಬ್ಬದ ಪೂರ್ವಭಾವಿ ಶಾಂತಿ ಸಭೆಯಲ್ಲಿ ರಾಯಚೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪುಟ್ಟಮಾದಯ್ಯ ಮಾತನಾಡಿದರು.

ತಾಲೂಕವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button