ಪೊಲೀಸ್ ಠಾಣೆಗೆ ನೂತನ ಸಿಪಿಐ ಆಗಿ ಅಧಿಕಾರ ವಹಿಸಿಕೊಂಡ ಡಿ.ದುರುಗಪ್ಪ ರವರಿಗೆ – ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಪದಾಧಿಕಾರಿಗಳಿಂದ ಗೌರವ ಸನ್ಮಾನ.
ಕೊಟ್ಟೂರು ಆ.22

ಕೊಟ್ಟೂರು ಪೊಲೀಸ್ ಠಾಣೆಗೆ ನೂತನ ಸಿ.ಪಿ.ಐ ಡಿ.ದುರುಗಪ್ಪ ಇವರು ಅಧಿಕಾರ ಸ್ವೀಕರಿಸಿದ್ದಾರೆ. ಇವರಿಗೆ ಬಸವರಾಜ್ ರಾಂಪುರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕೋಡಿಹಳ್ಳಿ ಚಂದ್ರಶೇಖರ್ ರವರ ಬಣ್ಣದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಮತ್ತಿತರರು ಶಾಲು ಹೂವಿನ ಹಾರ ಹಾಕುವುದರ ಮೂಲಕ ಸ್ವಾಗತಿಸಿದರು. ಸಿ.ಪಿ.ಐ ಡಿ.ದುರುಗಪ್ಪ ನವರು ಹಗರಿಬೊಮ್ಮನಹಳ್ಳಿ ತಾಲೂಕಿನ ಮರಬ್ಬಿಹಾಳು ಗ್ರಾಮ ದವರು 2003 ರ ಪಿ.ಎಸ್.ಐ ಆಗಿ ನಂತರ 2012 ರಲ್ಲಿ ಸಿ.ಪಿ.ಐ ಆಗಿ ಮುಂಬಡ್ತಿ ಪಡೆದು ಹೊಸಪೇಟೆ ಗ್ರಾಮಂತರ ಹರಪನಹಳ್ಳಿ, ಕಡೂರು, ಸಿಂಧನೂರು, ಪೊಲೀಸ್ ಠಾಣೆಗಳಲ್ಲಿ ಕಾರ್ಯ ನಿರ್ವಹಿಸಿರುತ್ತಾರೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರದೀಪ್.ಕುಮಾರ್.ಸಿ.ಕೊಟ್ಟೂರು