ಸತತ ಮಳೆಯಿಂದ ಬಡಪಾಯಿ ಮನೆಯ – ಗೋಡೆ ಕುಸಿತ.
ಜಕ್ಕಲಿ ಆ.22

ಗದಗ ಜಿಲ್ಲೆಯ ರೋಣ ತಾಲೂಕಿನ ಜಕ್ಕಲಿ ಗ್ರಾಮದಲ್ಲಿ ಇತ್ತೀಚಿಗೆ 08-08-2025 ರಿಂದ 20-08-2025 ರ ವರೆಗೆ ಸುರಿದ ಭಾರೀ ಮಳೆಯಿಂದ ಮನೆಯ ಗೋಡೆ ಕುಸಿದು ಕುಟುಂಬಸ್ಥರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಗ್ರಾಮದ ಪರಿಶಿಷ್ಟ ಜಾತಿ ಚಲವಾದಿ ಸಮುದಾಯಕ್ಕೆ ಸೇರಿದ ನಾಗವ್ವ.ಮೈಲಾರಪ್ಪ ಕಾಳಿ ಮಹಿಳೆಯೂ ಗಂಡನೊಂದಿಗೆ 3 ಗಂಡು ಮಕ್ಕಳನ್ನು ಹೊಂದಿದ್ದ ಇವರು ಸುಂದರವಾದ ಜೀವನ ಸಾಗಿಸುತ್ತಿದ್ದೂ ಈ ಬಡ ಕುಟುಂಬ ಆಗಸ್ಟ್ 8 ರಿಂದ ಆಗಸ್ಟ್ 20 ರ ವರೆಗೆ ಸುರಿದ ಮಳೆಗೆ ಮನೆಯ ಮುಂಭಾಗದ ಗೋಡೆ ಕುಸಿದಿದ್ದು ಬಡ ಕುಟುಂಬದ ಜೀವನ ತುಂಬಾ ಚಿಂತಾಜನಕವಾಗಿದೆ.

ಈ ಬಡ ಕುಟುಂಬಕ್ಕೆ ಸರ್ಕಾರದಿಂದ ಸಿಗುವ ಸೌಲಭ್ಯಗಳು ಮರಿಚೀಕೆ ಯಾಗಿವೆ. ಸದ್ಯ ಈ ಬಡ ಕುಟುಂಬಕ್ಕೆ ವಾಸವಿರಲು ಸದ್ಯಕ್ಕೆ ಕುಸಿದಿರುವ ಈ ಮನೆ ಬಿಟ್ಟರೆ ಬೇರೆ ಇನ್ನೊಂದು ಮನೆ ಇರದ ಕಾರಣ ಗೋಡೆ ಕುಸಿದ ಮನೆಯಲ್ಲೇ ಜೀವನ ಸಾಗಿಸುವಂತ ಪರಸ್ಥಿತಿ ನಿರ್ಮಾಣವಾಗಿದೆಸ್ಥಳಕ್ಕೆ ಭೇಟಿ ಮಾಡಿದ ಇಂಜೀನಿಯರ ಮಹಾದೇವಪ್ಪ ಹೊಸಮನಿ. ಗ್ರಾಮ ಲೆಕ್ಕಾಧಿಕಾರಿ ಜಗದೀಶ್.ಟಿ ಗ್ರಾಮ ಪಂಚಾಯಿತಿ SDA ನಿಂಗಪ್ಪ ಗೆಂಗಾರ. ಗ್ರಾಮ ಪಂಚಾಯಿತಿ ಬಿಲ್ ಕಲೆಕ್ಟರ್ ಸೋಮಶೇಖರ ಓದಿಸೋಮಠ. ಭೇಟಿ ನೀಡಿ ಈ ಬಡ ಕುಟುಂಬಕ್ಕೆ ಪರಿಹಾರ ಒದಗಿಸುವುದಾಗಿ ಮೇಲಧಿಕಾರಿಗಳ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು ಎಂದು ವರದಿಯಾಗಿದೆ.