ಬತ್ತಾಡ ಸಮುದಾಯಕ್ಕೆ ಒಳ ಮೀಸಲಾತಿಯಲ್ಲಿ ಅನ್ಯಾಯ ಹೋರಾಟದ ಮುಂದಿನ ನಡೆ – ನಿರ್ಧರಿಸಲು ಪ್ರಮುಖರ ಸಭೆ.
ಉಡುಪಿ ಆ.30





ನಾಗದಾಸ ಮೋಹನ್ ವರದಿಯ ಆಧಾರದ ಮೇಲೆ ಸರ್ಕಾರವು ಜಾರಿಗೆ ತರಲು ಉದ್ದೇಶಿಸಿರುವ ಒಳ ಮೀಸಲಾತಿ ನೀತಿಯಿಂದ ಬತ್ತಾಡ ಸಮುದಾಯಕ್ಕೆ ಅನ್ಯಾಯವಾಗುತ್ತಿದೆ. ಇದನ್ನು ಸರಿ ಪಡಿಸಲು ಹಾಗೂ ಮುಂದಿನ ಹೋರಾಟದ ರೂಪು ರೇಷೆಗಳನ್ನು ಸಿದ್ಧ ಪಡಿಸಲು ಆಗಸ್ಟ್ 31, 2025 ರಂದು ಭಾನುವಾರ ಮಧ್ಯಾಹ್ನ 2 ಗಂಟೆಗೆ ಕೋಟ ಮೂರ್ಕೈ ಪೆಟ್ರೋಲ್ ಬಂಕ್ ಎದುರಿನ ಪಂಚಶೀಲದಲ್ಲಿ ಬತ್ತಾಡ ಸಮುದಾಯದ ಪ್ರಮುಖರ ಸಭೆ ಕರೆಯಲಾಗಿದೆ.
ನಾಗದಾಸ ಮೋಹನ್ ವರದಿಯ ಅನ್ಯಾಯದ ಕುರಿತು:-
ನಾಗದಾಸ ಮೋಹನ್ ವರದಿಯು ಬತ್ತಾಡ ಮತ್ತು ಅಲೆಮಾರಿ ಸಮುದಾಯಗಳಂತಹ ಸಣ್ಣ ಸಮುದಾಯಗಳಿಗೆ ಶೇಕಡಾ 1 ರಷ್ಟು ಮೀಸಲಾತಿಯನ್ನು ಪ್ರತ್ಯೇಕವಾಗಿ ಶಿಫಾರಸ್ಸು ಮಾಡಿತ್ತು. ಆದರೆ, ಸರ್ಕಾರದ ಪ್ರಸ್ತುತ ನೀತಿಯಲ್ಲಿ ಈ ಮೀಸಲಾತಿಯನ್ನು ಈಗಾಗಲೇ ಹೆಚ್ಚಿನ ಪ್ರಯೋಜನ ಪಡೆದಿರುವ ಹೊಲೆಯ ಸಮುದಾಯದೊಂದಿಗೆ ವಿಲೀನ ಗೊಳಿಸಲಾಗಿದೆ. ಇದು ಸುಪ್ರೀಂ ಕೋರ್ಟ್ ಆದೇಶಗಳಿಗೆ ವಿರುದ್ಧವಾಗಿದ್ದು, ಬತ್ತಾಡ ಸಮುದಾಯದ ಮಕ್ಕಳು ಶಿಕ್ಷಣ ಮತ್ತು ಉದ್ಯೋಗಗಳಲ್ಲಿ ಮೀಸಲಾತಿ ಸೌಲಭ್ಯಗಳಿಂದ ವಂಚಿತರಾಗುವ ಅಪಾಯವಿದೆ.
ಹೋರಾಟದ ಸಿದ್ಧತೆ:-
ಈ ತೀವ್ರ ಅನ್ಯಾಯವನ್ನು ವಿರೋಧಿಸಿ, ಸಮುದಾಯದ ಹಕ್ಕುಗಳನ್ನು ರಕ್ಷಿಸಲು ತುರ್ತು ಹೋರಾಟ ರೂಪಿಸುವುದು ಇಂದಿನ ಅಗತ್ಯವಾಗಿದೆ. ಸಭೆಯಲ್ಲಿ ಈ ವಿಷಯವನ್ನು ಸರ್ಕಾರದ ಗಮನಕ್ಕೆ ತರುವುದು ಹೇಗೆ ಮತ್ತು ಭವಿಷ್ಯದ ಹೋರಾಟಗಳ ಸ್ವರೂಪದ ಬಗ್ಗೆ ಚರ್ಚಿಸಲಾಗುವುದು.
ಬತ್ತಾಡ ಸಮುದಾಯದ ಹಿತ ಚಿಂತಕರು, ಹಿರಿಯರು, ಮತ್ತು ಯುವ ನಾಯಕರು ಈ ಸಭೆಯಲ್ಲಿ ಭಾಗವಹಿಸಿ ತಮ್ಮ ಅಮೂಲ್ಯ ಸಲಹೆಗಳನ್ನು ನೀಡುವ ಮೂಲಕ ಹೋರಾಟಕ್ಕೆ ಹೊಸ ದಿಕ್ಕು ನೀಡಬೇಕೆಂದು ಕೋರಲಾಗಿದೆ.
ಸಮುದಾಯದ ಒಗ್ಗಟ್ಟನ್ನು ಪ್ರದರ್ಶಿಸಲು ಇದು ಒಂದು ನಿರ್ಣಾಯಕ ಸಂದರ್ಭವಾಗಿದೆ. ಹೆಚ್ಚಿನ ಮಾಹಿತಿಗಾಗಿ ಈ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದು
ವರದಿ:ಆರತಿ.ಗಿಳಿಯಾರ.ಉಡುಪಿ
ಪ್ರಕಟಣೆ:9964237090
ನಾರಾಯಣ್ ಮಣೂರ್
(ಬತ್ತಾಡ ಸಮುದಾಯದ ಪರವಾಗಿ)