ಸಿದ್ರಾಮೇಶ್ವರ ಪುರಾಣ ಹಾಗೂ ಮುತ್ತೈದೆಯರಿಗೆ – ಉಡಿ ತುಂಬುವ ಕಾರ್ಯಕ್ರಮ.
ಕೋರವಾರ ಆ.30





ದೇವರ ಹಿಪ್ಪರಗಿ ತಾಲೂಕಿನ ಸುಕ್ಷೇತ್ರ ಕೋರವಾರ ಗ್ರಾಮದಲ್ಲಿ ಶ್ರೀಮಹಾಂತೇಶ್ವರ ಸಂಸ್ಥಾನ ಹಿರೇಮಠದಲ್ಲಿ ಶ್ರೀ ಶಿವಯೋಗಿ ಸಿದ್ರಾಮೇಶ್ವರ ಪುರಾಣ,ಕ್ರಾರ್ಯಕ್ರಮ ಹಾಗೂ ಗ್ರಾಮದ ನೂರಾರು ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮದ ಸಾನಿದ್ಯ ಶ್ರೀ ಷ.ಬ್ರ ಪ್ರಭು ಸಾರಂಗದೇವ ಶಿವಾಚಾರ್ಯರು, ಸಾರಂಗಮಠ ಸಿಂದಗಿ, ನೇತೃತ್ವ ಶ್ರೀ ಷ.ಬ್ರ ಬಸವಲಿಂಗ ಶಿವಾಚಾರ್ಯರು ಸಂಸ್ಥಾನ ಹಿರೇಮಠ ಕೋರವಾರ, ಸಮ್ಮುಖ ಶ್ರೀ ಷ.ಬ್ರ ವೀರ ಮಹಾಂತ ಶಿವಾಚಾರ್ಯರು ಸಗರ, ದೇವರ ಹಿಪ್ಪರಗಿ, ಶ್ರೀ ಷ.ಬ್ರ ಅಭಿನವ ರುದ್ರಮುನಿ ಶಿವಾಚಾರ್ಯರು, ಹಿರೇಮಠ ಯಂಕಂಚಿ, ಶ್ರೀ ಶ್ರೋ,ಬ್ರ ಮುರುಘೇಂದ್ರ ಮಹಾ ಸ್ವಾಮಿಗಳು ಚೌಕಿಮಠ ಕೋರವಾರ, ಅಧ್ಯಕ್ಷತೆ.

ಶ್ರೀಮತಿ ಜಯಶ್ರೀ ರಾಜುಗೌಡ ಪಾಟೀಲ, ಕುದರಿ ಸಾಲವಾಡಗಿ ಇವರು ವಹಿಸಿದರು, ಕಾರ್ಯಕ್ರಮ ಚಾಲನೆ ಶ್ರೀಮತಿ ನಾಗಮ್ಮ ಅಶೋಕ ಮನಗೂಳಿ, ಹಾಗೂ ಪುರಾಣ, ಪ್ರವಚನಕಾರರಾದ ಪೂಜ್ಯ ಶ್ರೀ ವೀರಬಸವದೇವರು, ಗದ್ದುಗೇಶ್ವರ ಮಠ ಹಿರೇಮಠ ಆಸಂಗಿ ತಾಲೂಕು ಕೊಲ್ಲಾರ, ಗಾನಕೋಗಿಲೆ ಶ್ರೀಭಾಗೇಶ ರಾಂಪೂರ, ವಿರೇಶ್ವರ ಪುಣ್ಯಶ್ರಮ ಗದಗ, ತಬಲಾಸೇವೆ ಶ್ರೀ ಮಾಂತೇಶ ನರಿಬೋಳ ವೀರೇಶ್ವರ ಪುಣ್ಯಾಶ್ರಮ ಗದಗ, ಹಾಗೂ ಕೋರವಾರ ಗ್ರಾಮದ ಸಮಸ್ತ ಗುರು ಹಿರಿಯರು, ರಾಜಕೀಯ ಮುಖಂಡರು, ತಾಯಂದಿರು, ಯುವಕರು, ಮಹಾ ಮಠದ ಭಕ್ತಾಧಿಗಳು ಉಪಸ್ಥಿತರಿದ್ದರು, ಹಾಗೂ ಈ ಸಂದರ್ಭದಲ್ಲಿ ಕಾರ್ಯಕ್ರಮಕ್ಕೆ ಆಗಮಿಸಿದ ನೂರಾರು ಭಕ್ತಾದಿಗಳಿಗೆ ಮಹಾ ಪ್ರಸಾದ ಸೇವೆಯು ಶ್ರೀ ಹಿರೋಡೇಶ್ವರ ಹವ್ಯಾಸಿ ಸೇವಾ ಸಂಘದ ಬಳಗದ ವತಿಯಿಂದ ದಾಸೋಹವನ್ನು ನೆರೆವೇರಿಸಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಭೀಮಪ್ಪ.ಹಚ್ಯಾಳ.ದೇವರ ಹಿಪ್ಪರಗಿ