ರಸ್ತೆ ಅಭಿವೃದ್ಧಿಗೆ ಶಾಸಕ ರಾಜುಗೌಡ ಪಾಟೀಲ್ ಅವರಿಂದ ಚಾಲನೆ – ಬಂಪರ್ ಕೊಡುಗೆಗಳ ಶ್ಲಾಘನೆ.

ರಾಮನಾಹಟ್ಟಿ ಸ.11

ದೇವರ ಹಿಪ್ಪರಗಿ ಮತ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ರಾಮನಾಹಟ್ಟಿ ಗ್ರಾಮದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಭೀಮನಗೌಡ ರಾಜುಗೌಡ ಪಾಟೀಲ್ ಅವರು ಭೂಮಿ ಪೂಜೆ ನೆರವೇರಿಸುವ ಮೂಲಕ ಅಧಿಕೃತವಾಗಿ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ರಾಜುಗೌಡ ಪಾಟೀಲ್, ಕ್ಷೇತ್ರದ ಹಲವು ಗ್ರಾಮಗಳಲ್ಲಿ ಗ್ರಾಮೀಣ ರಸ್ತೆಗಳು ಇನ್ನೂ ದುಸ್ಥಿತಿಯಲ್ಲಿದ್ದು, ಹಂತ ಹಂತವಾಗಿ ಕ್ರಿಯಾ ಯೋಜನೆಗಳನ್ನು ಸಿದ್ಧಪಡಿಸಿ ಅವುಗಳ ಅಭಿವೃದ್ಧಿಗೆ ಆದ್ಯತೆ ನೀಡುವುದಾಗಿ ಭರವಸೆ ನೀಡಿದರು. ಈಗಾಗಲೇ ಕ್ಷೇತ್ರದ ಅನೇಕ ಗ್ರಾಮಗಳಲ್ಲಿ ಕಾಮಗಾರಿಗಳು ಪ್ರಗತಿಯಲ್ಲಿವೆ ಮತ್ತು ಕೆಲವು ರಸ್ತೆಗಳ ಕೆಲಸಗಳು ಮುಗಿದಿವೆ ಎಂದು ತಿಳಿಸಿದರು.

“ಇಂದು ರಾಮನಾಹಟ್ಟಿ ಗ್ರಾಮಕ್ಕೆ ಬಂಪರ್ ಕೊಡುಗೆ ಸಿಕ್ಕಿದೆ” ಎಂದು ಶಾಸಕರು ಹೇಳಿದರು. ಸುಮಾರು 495 ಲಕ್ಷ ವೆಚ್ಚದಲ್ಲಿ ರಸ್ತೆ ಡಾಂಬರೀಕರಣ ಮತ್ತು ಹೆಚ್ಚುವರಿಯಾಗಿ 5 ಕೋಟಿ ರೂಪಾಯಿ ಅನುದಾನವನ್ನೂ ಮಂಜೂರು ಮಾಡಿಸಿದ್ದೇನೆ. ಒಟ್ಟು 10 ಕೋಟಿ ರೂಪಾಯಿಗಳ ಅನುದಾನ ಈ ಸಣ್ಣ ಗ್ರಾಮಕ್ಕೆ ಒಂದು ದೊಡ್ಡ ಕೊಡುಗೆಯಾಗಿದೆ ಎಂದು ಅವರು ಹೇಳಿದರು.

ಗ್ರಾಮದ ಸಿ.ಸಿ ರಸ್ತೆಗಳು, ಶಾಲಾ ದುರಸ್ತಿ ಮತ್ತು ಇತರ ಮೂಲಭೂತ ಸೌಕರ್ಯಗಳಿಗೂ ಹೆಚ್ಚಿನ ಅನುದಾನ ತಂದು ಪ್ರಾಮಾಣಿಕವಾಗಿ ಕೆಲಸ ಮಾಡುವುದಾಗಿ ಮತ್ತು ಗ್ರಾಮಸ್ಥರ ಋಣ ತೀರಿಸುವುದಾಗಿ ಭರವಸೆ ನೀಡಿದರು. “ನೀವೆಲ್ಲರೂ ನನ್ನನ್ನು ಶಾಸಕನನ್ನಾಗಿ ಮಾಡಿದ್ದೀರಿ, ನಾನು ನಿಮ್ಮ ಮನೆ ಮಗನಾಗಿ ಕೆಲಸ ಮಾಡುತ್ತೇನೆ,” ಎಂದು ಹೇಳುವ ಮೂಲಕ ಗ್ರಾಮೀಣ ಅಭಿವೃದ್ಧಿಗೆ ಶ್ರಮಿಸುವುದಾಗಿ ತಿಳಿಸಿದರು. ಗ್ರಾಮದ ಅಭಿವೃದ್ಧಿ ಕಾರ್ಯಗಳಿಗೆ ಸಹಕರಿಸುವಂತೆ ಗ್ರಾಮಸ್ಥರಲ್ಲಿ ಅವರು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಾದ ಎ.ಇ.ಡಿ.ಬಿ. ಕಲಬುರಗಿ ಮಾತನಾಡಿ, ಕುದುರಿ ಸಾಲವಾಡಗಿ ಯಿಂದ ರಾಮನಾಹಟ್ಟಿ ಗ್ರಾಮದವರೆಗಿನ 3.13 ಕಿ.ಮೀ. ರಸ್ತೆ ಸುಧಾರಣೆ ಮಾಡಲಾಗುತ್ತಿದ್ದು, ರಸ್ತೆಯ ಅಗಲ 3.75 ಮೀ. ಇರುತ್ತದೆ ಎಂದು ವಿವರಿಸಿದರು. ಈ ರಸ್ತೆಯಲ್ಲಿ ಎರಡು ಸೇತುವೆಗಳನ್ನು ನಿರ್ಮಿಸಲಾಗುತ್ತಿದ್ದು, ಯೋಜನೆಗೆ 495 ಲಕ್ಷ ರೂಪಾಯಿ ಅನುದಾನ ಮೀಸಲಿಡಲಾಗಿದೆ. ಕಾಮಗಾರಿ ಮುಗಿದ ನಂತರ ಐದು ವರ್ಷಗಳ ಕಾಲ ನಿರ್ವಹಣೆಯನ್ನು ಗುತ್ತಿಗೆದಾರರೇ ನೋಡಿ ಕೊಳ್ಳಲಿದ್ದಾರೆ ಎಂದು ತಿಳಿಸಿದರು. ರಸ್ತೆ ಕಾಮಗಾರಿ ಪ್ರಾರಂಭವಾಗುವ ಮುನ್ನವೇ ರಸ್ತೆಯ ಅತಿಕ್ರಮಣಗಳನ್ನು ತೆರವು ಗೊಳಿಸಿ ಸಹಕರಿಸುವಂತೆ ಅವರು ಗ್ರಾಮಸ್ಥರಲ್ಲಿ ಮನವಿ ಮಾಡಿದರು. ಗುತ್ತಿಗೆದಾರ ಉಮೇಶ್ ಕವಲಗಿ ಅವರಿಗೆ ಈಗಾಗಲೇ ಅಗತ್ಯ ಸೂಚನೆಗಳನ್ನು ನೀಡಲಾಗಿದೆ ಎಂದು ಅವರು ಹೇಳಿದರು.

ಇದೇ ಸಂದರ್ಭದಲ್ಲಿ ಲೋಕೋಪಯೋಗಿ ಅಧಿಕಾರಿಗಳಾದ ಎ.ಇ.ಇ ಎಸ್.ಜಿ ದೊಡ್ಡಮನಿ, ಮುಖಂಡರಾದ ಸಚಿನಗೌಡ ಪಾಟೀಲ್, ಗುರುನಗೌಡ ಪಾಟೀಲ್, ಸಾಹೇಬಗೌಡ ಪಾಟೀಲ್, ಬಸಣ್ಣ ಬಾಗೇವಾಡಿ, ಪರಸುರಾಮ ಲಗಳಿ, ಮುತ್ತಪ್ಪ ಇಂಗಳಗಿ, ಪುಲಸಪ್ಪ ಡೋಣುರ, ಸಿದ್ದಪ್ಪ ಬಡಿಗೇರ, ಬೀರಪ್ಪ ಇಂಗಳಗಿ, ಮಲ್ಲು ಮಡಿಕೇಸುರ, ನರಸಪ್ಪ ಇಂಗಳೆಸುರ, ಅಪ್ಪಣ್ಣ ಇಂಗಳಗಿ, ಶರಣಪ್ಪ ಪೂಜಾರಿ, ಬನ್ನೇಪ್ಪಾ ಉಕ್ಕಲಿ ಸೇರಿದಂತೆ ರಾಮನಾಹಟ್ಟಿ ಗ್ರಾಮದ ಹಿರಿಯ ಮುಖಂಡರು, ಯುವಕರು ಮತ್ತು ಗ್ರಾಮ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷರು ಉಪಸ್ಥಿತರಿದ್ದರು. ಗ್ರಾಮದ ಮುಖ್ಯ ಶಿಕ್ಷಕ ಎಸ್.ಬಿ ಬಾಗೇವಾಡಿ ಅವರು ಕಾರ್ಯಕ್ರಮ ನಿರೂಪಿಸಿದರು.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂಎಸ್.ಕೆ ನ್ಯೂಸ್ ಕನ್ನಡ ಚಾನಲ್:ಚಿದಾನಂದ.ಬಿ ಉಪ್ಪಾರ.ಸಿಂದಗಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button