ತಾಲೂಕಿನ ಮಾದಿಗ ಅಭಿಮಾನಿಗಳಿಂದ – ಅದ್ಧೂರಿಯಾಗಿ ಮೆರವಣಿಗೆ.
ಮಾನ್ವಿ ಸ.15

ಒಳ ಮೀಸಲಾತಿ ಜಾರಿಯಾಗಲು ಕರ್ನಾಟಕದ ಗದ್ದರ್ ಎಂದೇ ಪ್ರಖ್ಯಾತಿ ಪಡೆದ ಹೋರಾಟಗಾರ ಅಂಬಣ್ಣ ಅರೋಲಿಕರ್ ಕೊಡುಗೆ ಅಪಾರ ಇದ್ದ ಕಾರಣ ಅಭಿಮಾನಿಗಳು ಮಾನ್ವಿ ಪಟ್ಟಣದಲ್ಲಿ ಅದ್ಧೂರಿಯಾಗಿ ಬೈಕ್ ಮೂಲಕ ಸ್ವಾಗತಿಸಿದರು.
ಮಾನ್ವಿ ತಾಲೂಕಿನ ಅರೋಲಿ ಗ್ರಾಮದ ನಿವಾಸಿಯಾದ ಅಂಬಣ್ಣ ಅರೋಲಿಕರ್ ಅವರು ಮಾದಿಗ ಜನಾಂಗಕ್ಕೆ ಅನ್ಯಾಯವಾಗ ಬಾರದು ಎಂದು ಕಳೆದ ಮೂವತ್ತು ವರ್ಷದಿಂದ ಅವಿರತವಾಗಿ ಹೋರಾಟ ಮಾಡಿ ಒಳ ಮೀಸಲಾತಿ ಜಾರಿ ಮಾಡಲೇಬೇಕು ಎಂದು ಕ್ರಾಂತಿಕಾರಿ ಹಾಡುಗಳ ಮೂಲಕ ಸರಕಾರವನ್ನು ಎಚ್ಚರಿಸಿ ಗುಡುಗಿದ್ದರು.
ಒಳ ಮೀಸಲಾತಿ ಜಾರಿಯಾದ ನಂತರ ಅಂಬಣ್ಣ ಅರೋಲಿಕರ್ ಅವರು ಮಾನ್ವಿಗೆ ಬಂದ ಹಿನ್ನೆಲೆಯಲ್ಲಿ ಅಂಬಣ್ಣ ಅರೋಲಿಕರ್ ಅವರ ಕೊಡುಗೆಯಿಂದ ಒಳ ಮೀಸಲಾತಿ ಜಾರಿಯಾಗಿದೆ ಎಂದು ಅಂಬಣ್ಣ ಅರೋಲಿಕರ್ ಅವರ ಅಭಿಮಾನಿಗಳು ಘೋಷವಾಕ್ಯ ಕೂಗಿ ಅದ್ಧೂರಿಯಾಗಿ ಸ್ವಾಗತಿಸಿ ಮೆರವಣಿಗೆ ನಡೆಸಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ