ಶ್ರೀ ವೆಂಕಟೇಶ್ವರ ಪದವಿ ಮಹಾ ವಿದ್ಯಾಲದಲ್ಲಿ – ವಿದ್ಯಾರ್ಥಿಗಳ ಮಂತ್ರಿ ಮಂಡಲ ರಚನೆ.
ಮಾನ್ವಿ ಸ.22





ಪಟ್ಟಣದ ಶ್ರೀ ವೆಂಕಟೇಶ್ವರ ಪದವಿ ಮಹಾ ವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ಮಂತ್ರಿ ಪರಿಷತ್ ಮತದಾನ ನಡೆಯಿತು ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತದಾನ ಮಾಡಿದರು ಒಟ್ಟು 8 ಸ್ಥಾನಗಳಿಗೆ 15 ಸ್ಪರ್ಧಿಗಳು ಭಾಗವಹಿಸಿದ್ದರು ಇದರಲ್ಲಿ ಮೂರು ಸ್ಥಾನಗಳು ಅವಿರೋಧವಾಗಿ ಆಯ್ಕೆಯಾದರೆ ಇನ್ನುಳಿದ ಆರು ಸ್ಥಾನಗಳಿಗೆ ಬಿರುಸಿನ ಮತದಾನ ಕಾರ್ಯ ನಡೆಯಿತು.ಜಿ. ಎಸ್ ಅಭ್ಯರ್ಥಿಗಳಾಗಿ ಪ್ರದೀಪ್ ಕುಮಾರ ಮತ್ತು ಅನ್ನಪೂರ್ಣ ನೀರಮಾನ್ವಿ ಸ್ಪರ್ದಿಸಿದ್ದರು 2 ಮತಗಳ ಅಂತರದಿಂದ ಪ್ರದೀಪಕುಮಾರ ಜಯಗಳಿಸಿದರು. ಡಿ.ಜಿ.ಎಸ್ ಆಗಿ ಹುಲಿಗೆಮ್ಮ ನೀರಮಾನ್ವಿ, ಸಾಂಸ್ಕೃತಿಕ ಮಂತ್ರಿಯಾಗಿ ರೇಣುಕಾ ಬಲ್ಲಟಗಿ, ಆರೋಗ್ಯ ಮಂತ್ರಿಯಾಗಿ ರವಿಚಂದ್ರನ್ ಗೋನವಾರ, ಮಹಿಳಾ ಪ್ರತಿನಿದಿಯಾಗಿ ರಾಜೇಶ್ವರಿ ನಂದಿಹಾಳ, ಪ್ರವಾಸೋದ್ಯಮ ಮಂತ್ರಿಯಾಗಿ ಸುಧಾ ಬೊಮ್ಮನಾಳ ಆಯ್ಕೆಯಾದರೆ ಕ್ರೀಡಾ ಮಂತ್ರಿಯಾಗಿ ದೇವರಾಜ್, ಸಾಮಾಜಿಕ ಜಾಲತಾಣ ಮಂತ್ರಿ ಯಾಕೂಬ್, ಹಣ ಕಾಸಿನ ಮಂತ್ರಿ ಸಂಗೀತ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣೆ ಅಧಿಕಾರಿ ಡಾ. ಹುಲಿಯಪ್ಪ ದುಮತಿ ಘೋಷಿಸಿದ್ದಾರೆ.ಮತಗಟ್ಟೆ ಅಧಿಕಾರಿಯಾಗಿ ಡಾ. ಹುಲಿಯಪ್ಪ ಧುಮತಿ ಸಹಾಯಕ ಮತಗಟ್ಟೆ ಅಧಿಕಾರಿಯಾಗಿ ಮಹಿಬೂಬ್ ಮದ್ಲಾಪುರ ಪೊಲಿಂಗ್ ಏಜೆಂಟ್ ಅಧಿಕಾರಿಯಾಗಿ ರೇಣುಕಾ ಚಿಮ್ಲಾಪುರ ಸಹಾಯಕ ಅಧಿಕಾರಿಯಾಗಿ ಅಂಬಣ್ಣ ನಾಯಕ ಕಾರ್ಯನಿರ್ವಹಿಸಿದರುಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಆಂಜನೇಯ ನಸಲಾಪುರ ಪ್ರಾಚಾರ್ಯರಾದ ಶಂಕ್ರಪ್ಪ ನಕ್ಕುಂದಿ ಉಪನ್ಯಾಸಕರಾದ ಚಂದ್ರಶೇಖರ,ಆಫ್ರೀನ್ ಬೇಗಂ,ಆಫಿಯಾ ಅಂಜುಮ್ ಸಂತೋಷ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕು0ದಿ.ಮಾನ್ವಿ