ಚಿಕ್ಕಸುಗೂರು ನಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧಿಯವರ 156 ನೇ. ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ರವರ – ಜನ್ಮ ದಿನ ಆಚರಣೆ.
ರಾಯಚೂರು ಅ.03





ರಾಯಚೂರು ಜಿಲ್ಲೆಯ ಪ್ರಸಿದ್ದ ಯರಮರಸ್ ಶಾಖೋತ್ಪನ್ನ ವಿದ್ಯುತ್ ಕೇಂದ್ರ, ಚಿಕ್ಕಸುಗೂರು ನಲ್ಲಿ ರಾಷ್ಟ್ರಪಿತ ಮಹಾತ್ಮಾ ಗಾಂಧಿ ರವರ 156 ನೇ. ಹಾಗೂ ದೇಶದ ಎರಡನೇ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರಿ ರವರ 121 ನೇ. ಜನ್ಮ ದಿನವನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಯೋಜನಾ ಪ್ರದೇಶದ ಮುಖ್ಯಸ್ಥರಾದ ಶ್ರೀ ಎಂ.ಆರ್ ಗಂಗಾಧರ ಕಾರ್ಯನಿರ್ವಾಹ ನಿರ್ದೇಶಕರು ಇಬ್ಬರ ಮಹಾನ್ ವ್ಯಕ್ತಿಗಳ ಬಗ್ಗೆ ಮಾತನಾಡಿದರು, ವೈಟಿಪಿಎಸ್ ನ ಅಧಿಕಾರಿಗಳು, ಭದ್ರತಾ, ಅಗ್ನಿ ಶಾಮಕ ಸಿಬ್ಬಂದಿಗಳು ಹಾಗೂ ಮೆ: ಪವರ್ ಮೆಕ್ ಸಿಬ್ಬಂದಿಗಳು ಉಪಸ್ಥಿತರಿದ್ದರು ಎಂದು ವರದಿಯಾಗಿದೆ.