ದೇವೀ ಮಹಾತ್ಮೆಯನ್ನು ಸಾರುವ ಸದ್ಗ್ರಂಥ ಶ್ರೀದುರ್ಗಾಸಪ್ತಶತೀ ಶ್ರೀಮತಿ ಎಚ್.ಲಕ್ಷ್ಮೀದೇವಮ್ಮ ಅಭಿಮತ.
ಚಳ್ಳಕೆರೆ ಅ.06





ಶಾಕ್ತ-ಶಾಸ್ತ್ರದಲ್ಲಿ ದೇವೀ ಮಹಾತ್ಮೆಯನ್ನು ಸಾರುವ ಲೋಕೋತ್ತರವಾದ ಸದ್ಗ್ರಂಥ ಶ್ರೀದುರ್ಗಾಸಪ್ತಶತೀ ಎಂದು ಚಳ್ಳಕೆರೆಯ ತ್ಯಾಗರಾಜನಗರದ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದ ಮುಖ್ಯಸ್ಥರಾದ ಶ್ರೀಮತಿ ಎಚ್ ಲಕ್ಷ್ಮೀದೇವಮ್ಮ ತಿಳಿಸಿದರು.

ನಗರದ ತ್ಯಾಗರಾಜ ನಗರದ ಸದ್ಭಕ್ತರಾದ ಶ್ರೀಮತಿ ನಂಜಮ್ಮ ಕೆಂಚಪ್ಪ ಶಿಕ್ಷಕರ ಸವಿತಾ ನಿವಾಸದಲ್ಲಿ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದಿಂದ ಆಯೋಜಿಸಿದ್ದ ವಾರದ ವಿಶೇಷ ಸತ್ಸಂಗ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು ಶ್ರೀದುರ್ಗಾಸಪ್ತಶತೀ ಸದ್ಗ್ರಂಥದ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.

ಮಾರ್ಕಂಡೇಯ ಪುರಾಣದಲ್ಲಿ ಬರುವ ಶ್ರೀದುರ್ಗಾಸಪ್ತಶತೀ ಸದ್ಗ್ರಂಥವು ಹದಿಮೂರು ಅಧ್ಯಾಯಗಳನ್ನು ಮೂರು ಚರಿತ್ರೆಗಳನ್ನು ಒಳ ಗೊಂಡಿದೆ.

ತಾಯಿ ಜಗನ್ಮಾತೆಯು ವಿವಿಧ ರೂಪಗಳನ್ನು ಧರಿಸಿ ಮಧು-ಕೈಟಭ, ಮಹಿಷಾಸುರ, ಧೂಮ್ರಲೋಚನ, ಚಂಡ-ಮುಂಡರು,ರಕ್ತ ಬೀಜಾಸುರ,ಶುಂಭ- ನಿಶುಂಭರಂತಹ ರಾಕ್ಷಸರ ವಧೆಯ ಘಟನೆಗಳನ್ನು ಈ ಸದ್ಗ್ರಂಥವು ವಿವರಿಸುತ್ತದೆ ಎಂದು ಹೇಳಿದರು. ಈ ಸತ್ಸಂಗದ ಪ್ರಯುಕ್ತ ಶ್ರೀಶಾರದಾಶ್ರಮದ ಸದ್ಭಕ್ತರಿಂದ ಸಾಮೂಹಿಕ ಶ್ರೀರಾಮರಕ್ಷಾ ಸ್ತೋತ್ರ ಪಠಣ, ವಿಶೇಷ ದೇವಿ ಭಜನೆಗಳು, ನಾಮಸ್ಮರಣೆ ಮತ್ತು ಶ್ರೀಶಾರದಾದೇವಿ ಜೀವನಗಂಗಾ ಗ್ರಂಥ ಪಾರಾಯಣ ಕಾರ್ಯಕ್ರಮವನ್ನು ಯತೀಶ್ ಎಂ ಸಿದ್ದಾಪುರ ನಡೆಸಿ ಕೊಟ್ಟರು.
ವಿಶೇಷ ಸತ್ಸಂಗ ಸಭೆಯಲ್ಲಿ ಸತ್ಸಂಗ ಕೇಂದ್ರದ ಶ್ರೀಮತಿ ಎಂ ಗೀತಾ ನಾಗರಾಜ್, ಸರಸ್ವತಿ ರಾಜು, ಸರ್ವಮಂಗಳ ಶಿವಣ್ಣ,ನಿಖಿತಾ, ನಿಭಾಯ್, ಸರಸ್ವತಿ, ಸುನೀತಾ,ಎಂ ಲಕ್ಷ್ಮೀದೇವಮ್ಮ, ಅನುಸೂಯ ರಾಘವೇಂದ್ರ ಉಪಸ್ಥಿತರಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.