ಜಕ್ಕಲಿಯ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ – ಆದಿಕವಿ ಮಹರ್ಷಿ ವಾಲ್ಮೀಕಿ ಜನ್ಮ ದಿನಾಚರಣೆ.
ಜಕ್ಕಲಿ ಅ.07





ಅಕ್ಟೊಬರ್ 7 ಮಂಗಳವಾರ ರಂದು ಗದಗ ಜಿಲ್ಲೆಯ ರೋಣ ತಾಲೂಕಿನ ಜಕ್ಕಲಿಯ ಎಚ್.ಪಿ.ಕೆ.ಜಿ.ಎಸ್ ಬಾಲಕರ ಸರಕಾರಿ ಮಾದರಿ ಕೇಂದ್ರ ಪ್ರಾಥಮಿಕ ಶಾಲೆ ಮತ್ತು ಎಚ್.ಪಿ.ಕೆ.ಜಿ.ಎಸ್ ಸರಕಾರಿ ಹಿರಿಯ ಕನ್ನಡ ಹೆಣ್ಣುಮಕ್ಕಳ ಪ್ರಾಥಮಿಕ ಶಾಲೆ ಹಾಗೂ ಸರಕಾರಿ ಕಿರಿಯ ಉರ್ದು ಶಾಲೆ ಜಕ್ಕಲಿಯಲ್ಲಿ ಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷ ಅಂದಪ್ಪ ಮಾದರ ರವರ ಅಧ್ಯಕ್ಷತೆಯಲ್ಲಿ ಶಾಲೆಯ ಮಹಾತ್ಮಾ ಗಾಂಧಿ ಸಭಾಂಗಣದಲ್ಲಿ ಆದಿಕವಿ ವಾಲ್ಮೀಕಿ ಅವರ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನಿಯಮ ಬದ್ದವಾಗಿ ಆಚರಣೆ ಮಾಡಲಾಯಿತು.
ಈ ಕುರಿತು ಎಚ್.ಪಿ.ಕೆ.ಜಿ.ಎಸ್ ಸರಕಾರಿ ಹಿರಿಯ ಕನ್ನಡ ಹೆಣ್ಣುಮಕ್ಕಳ ಶಾಲೆಯ ಮುಖ್ಯೋಪಾಧ್ಯಾಯರು ಎಸ್.ಬಿ ಗವಿ. ಇಡೀ ಮನುಕುಲಕ್ಕೆ ಪ್ರೀತಿ, ನಂಬಿಕೆ, ವಿಶ್ವಾಸ, ಸೌಂದರ್ಯ ಪ್ರಜ್ಞೆ, ಬದ್ಧತೆಯಂತಹ ಆದರ್ಶ ಮೌಲ್ಯಗಳನ್ನು ನೀಡಿದ್ದಾರೆ. ಯುವ ಜನತೆ ಅವರ ತತ್ವಾದರ್ಶಗಳನ್ನು ಅಳವಡಿಸಿ ಕೊಳ್ಳಬೇಕು ಎಂದು ಹೇಳಿದರು.
ತದ ನಂತರ ಮಾತನಾಡಿದ ಎಚ್.ಪಿ.ಕೆ.ಜಿ.ಎಸ್ ಬಾಲಕರ ಸರಕಾರಿ ಮಾದರಿ ಕೇಂದ್ರ ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯನಿ ಎ.ಬಿ ಜಕ್ಕಲಿ ಮಾತನಾಡಿದ ಅವರು ಹಿಂದುಳಿದ ಹಾಗೂ ಶೋಷಿತ ವರ್ಗದವರನ್ನು ಸಮಾಜದ ಮುಖ್ಯ ವಾಹಿನಿಗೆ ಕರೆ ತರುವ ಮೂಲಕ ಅವರನ್ನು ಸಾಮಾಜಿಕ, ಶೈಕ್ಷಣಿಕವಾಗಿ, ಮತ್ತು ಆರ್ಥಿಕವಾಗಿ ಅಭಿವೃದ್ಧಿ ಗೊಳಿಸುವ ಸಲುವಾಗಿ ಮಹರ್ಷಿ ವಾಲ್ಮೀಕಿ ಅವರ ಚಿಂತನೆಗಳು ಸಹಕಾರಿ ಯಾಗಿವೆ ಎಂದರು.
ಇದೇ ಸಂದರ್ಭದಲ್ಲಿ.ಶಿಕ್ಷಕರು ವಿ.ಎ ಕುಂಬಾರ್. ಎಮ್.ವಿ ತಾಳಿಕೋಟಿ. ಎ.ಪಿ ಶೆಟ್ಟರ್. ಎಸ್.ಎ ಪಲ್ಲೆದ. ಸಿ.ಎಸ್ ಘೋಡೆಸವಾರ. ವಿ.ಎಸ್ ದಿಂಡೂರ್. ಪಿ.ಜಿ ಹುಯಿಲಗೋಳ. ಎಸ್.ಎಸ್ ಯಲ್ಲರಡ್ಡಿ. ಇನ್ನೂ ಅನೇಕ ಶಿಕ್ಷಕ ಶಿಕ್ಷಕಿಯರು ಹಾಗೂ ಶಾಲೆಯ ಎಸ್.ಡಿ.ಎಂ.ಸಿ ಸದಸ್ಯರು ಸೇರಿದಂತೆ ಇನ್ನೂ ಅನೇಕರು ಉಪಸ್ಥಿತರಿದ್ದರು.