ನಾಲಿಗೆ-ಮಾತಿನಲ್ಲಿ ನಿಯಂತ್ರಣವಿರ ಬೇಕು – ಮಾತಾಜೀ ತ್ಯಾಗಮಯೀ.
ಚಳ್ಳಕೆರೆ ಅ.09





ನಿತ್ಯ ಬದುಕಿನಲ್ಲಿ ನಾಲಿಗೆ ಮತ್ತು ಮಾತಿನಲ್ಲಿ ನಿಯಂತ್ರಣವಿರಬೇಕು ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಪೂಜ್ಯ ಮಾತಾಜೀ ತ್ಯಾಗಮಯೀ ಅಭಿಪ್ರಾಯಪಟ್ಟರು.

ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ ಆಯೋಜಿಸಿದ್ದ ವಾರದ ವಿಶೇಷ ಸತ್ಸಂಗ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು “ವೇದಾಂತ ಸಂನ್ಯಾಸಿಗಳು” ಎಂಬ ಪ್ರವಚನ ಮಾಲಿಕೆಯಡಿಯಲ್ಲಿ ಸ್ವಾಮಿ ನಿರ್ವಾಣಾನಂದರ ಸ್ಮೃತಿಗಳ ಬಗ್ಗೆ ಪ್ರವಚನ ನೀಡಿದರು.

ಈ ಸತ್ಸಂಗದ ಪ್ರಯುಕ್ತ ಶ್ರೀಶಾರದಾಶ್ರಮದ ಸದ್ಭಕ್ತರಿಂದ ಸಾಮೂಹಿಕ ಭಜನೆ ಮತ್ತು ದಿವ್ಯತ್ರಯರಿಗೆ ಮಂಗಳಾರತಿ ನಡೆಯಿತು.
ಸತ್ಸಂಗ ಕಾರ್ಯಕ್ರಮದಲ್ಲಿ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ಎಂ ಗೀತಾ ನಾಗರಾಜ್, ಯತೀಶ್ ಎಂ ಸಿದ್ದಾಪುರ , ಚೇತನ್ , ಸುದೀಪ್,ಅಂಬುಜಾ ಶಾಂತಕುಮಾರ್, ಪಿ.ಎಸ್.ಮಾಣಿಕ್ಯ ಸತ್ಯನಾರಾಯಣ, ಸಿ.ಎಸ್.ಭಾರತಿ, ವೆಂಕಟಲಕ್ಷ್ಮೀ, ಕಾವೇರಿ,ಪಂಕಜ, ಜಿ.ಯಶೋಧಾ ಪ್ರಕಾಶ್, ಸುಜಾತಾ ಬಸವರಾಜ್,ಸುಮನಾ ಸೇರಿದಂತೆ ಸದ್ಭಕ್ತರಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.