ಕಾಡಸಿದ್ದೇಶ್ವರ ಸ್ವಾಮೀಜಿಗೆ ನಿರ್ಬಂಧ ಹೇರಿರುವುದು ಕಾಂಗ್ರೆಸ್ ಸರ್ಕಾರದ ಕೆಳಮಟ್ಟದ ನಿರ್ಧಾರಕ್ಕೆ – ಬಿ.ಜೆ.ಪಿ ಯುವ ಮುಖಂಡ ಶ್ರೀ ಶೈಲ್ ದೊಡ್ಡಮನಿ ಆಕ್ರೋಶ.
ಮುದ್ದೇಬಿಹಾಳ ಅ.18





ಕನ್ನೆರಿ ಮಠದ ಕಾಡಸಿದ್ದೇಶ್ವರ ಸ್ವಾಮೀಜಿಗಳಿಗೆ ವಿಜಯಪುರ ಜಿಲ್ಲೆಗೆ 2 ತಿಂಗಳ ಕಾಲ ನಿರ್ಬಂಧ ಹೇರಿರುವುದು ಕಾಂಗ್ರೆಸ್ ಸರ್ಕಾರದ ಕೆಳಮಟ್ಟದ ನಿರ್ಧಾರಕ್ಕೆ ಬಿಜೆಪಿ ಯುವ ಮುಖಂಡ ಶ್ರೀಶೈಲ್ ದೊಡ್ಡಮನಿ (ರೂಡಗಿ) ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಕನ್ನೆರಿ ಮಠದ ಶ್ರೀಗಳು ಧಾರ್ಮಿಕ ಕಾರ್ಯದ ಜೊತೆಗೆ, ಬಡ ಕುಟುಂಬಕ್ಕೆ ಕಣ್ಣಿನ ಆಸರೆ ಕೊಡುವ ದೇವರು, ಆಕಾಶ ತೇಜಸ್ಸು, ಭೂಮಿ, ನೀರು, ವಾಯು, ಸೇರಿದಂತೆ ಪಂಚ ಮಹಾ ಭೂತಗಳ ಬಗ್ಗೆ ಅರಿವು, ಜಾಗೃತಿ ಮೂಡಿಸುವ ಸಂರಕ್ಷಣೆ ಸೇರಿದಂತೆ ಮುಂದಿನ ಪೀಳಿಗೆಗೆ ಉಳಿಸುವ ಮಹಾನ್ ಕಾರ್ಯಗಳ ಜೊತೆಗೆ ಮೊದಲಿನ ಸಾಂಪ್ರದಾಯಕ ಕೃಷಿ ಪದ್ಧತಿ ಜೊತೆಗೆ ಆಧುನಿಕ ತಂತ್ರಜ್ಞಾನ ಬಳಸಿ ಸ್ವತಃ ತಾವೇ ಮಾಡುತ್ತಾ ಮಾಡುತ್ತಾ ಕೃಷಿಯಲ್ಲಿ ಅನೇಕ ಪ್ರಯೋಜನಗಳನ್ನು ಮಾಡುತ್ತ ರೈತರ ಬಗ್ಗೆ ಯೋಚಿಸುವ ಕೆಲಸ ಇಲ್ಲ ಅಂತ ಹೇಳಿ ಹಾಗೆ ಇರುವ ಯುವಕರಿಗೆ ಕೃಷಿಯಲ್ಲಿ ಲಾಭವಿದೆ, ಆರೋಗ್ಯವಿದೆ, ಉದ್ಯೋಗ ಉದ್ಯಮ ಇದೆ ಅಂತ ತೋರಿಸಿ ಕೊಟ್ಟು ಯುವಕರನ್ನು ಕೃಷಿಯಲ್ಲಿ ತೊಡಗುವಂತೆ ಮಾಡಿದ ಸ್ವಾಮೀಜಿಗಳಿಗೆ ನಿರ್ಬಂಧ ಹೇರಲಾಗಿದೆ. ಅಂದರೆ ವಿನಾಶದ ಸಂಕೇತ, ಈ ಸರ್ಕಾರದ್ದು ಅತಿರೇಕದ ನಿರ್ಧಾರ ಕೂಡಲೇ ಆದೇಶ ಹಿಂಪಡೆಯಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಬಸವರಾಜ.ಸಂಕನಾಳ.ಮುದ್ದೇಬಿಹಾಳ