ಸಿಂಧೂರ ಆಪರೇಷನಲ್ಲಿ ಪಾಲ್ಗೊಂಡ, ವೀರ ದಿವಾಕರ್ ಗೆ – ಅದ್ದೂರಿ ಸನ್ಮಾನದ ಗೌರವ.
ಬಂಡೆಗುಡ್ಡ ಅ. 26


ರಾಯಚೂರು ಸಮೀಪದ ದೇವದುರ್ಗ ತಾಲೂಕಿನ ಬಂಡೆಗುಡ್ಡ ಗ್ರಾಮದ ಶ್ರೀ ಎಮ್.ದಿವಾಕರ್ ಗಡಿ ಭದ್ರತಾ ಪಡೆಯ ಎ.ಎಸ್.ಐ 12೦ ಬಟಾಲಿಯನ್ ಟೈಗರ್ ಆಫ್ ತರಾಲ್ ನಲ್ಲಿ ಜಮ್ಮು ಸೆಕ್ಟರ್ ನಲ್ಲಿ ಆಪರೇಷನ್ ಸಿಂಧೂರ್ ಕಾರ್ಯಾಚರಣೆಯಲ್ಲಿ ಬೋಪಿ ಬುಧ್ವಾರ ಪೋಸ್ಟನಲ್ಲಿ ಸುಮಾರು 965 ಅಧಿಕಾರಿಗಳು ಹಾಗೂ ಯೋಧರೊಂದಿಗೆ ದಿನಾಂಕ 7 8 9 10/5/2025 ರ ವರೆಗೆ ನಡೆದ ಆಪರೇಷನ್ ಸಿಂಧೂರ ನ ಕಾರ್ಯಾಚರಣೆಯಲ್ಲಿ ಭಾಗಿಯಾಗಿ ಕಾರ್ಯಚರಣೆ ಯಶಸ್ವಿ ಮಾಡಿದ್ದಕ್ಕಾಗಿ ಗಡಿ ಭದ್ರತಾ ಪಡೆ ವತಿಯಿಂದ ಇವರಿಗೆ ಡಿ.ಜಿ ಬಿ.ಎಸ್.ಎಫ್ ನಿಂದ ಪ್ರಶಸ್ತಿ ಪ್ರಮಾಣ ಪತ್ರ ಕೊಟ್ಟು ಗೌರವ ಸನ್ಮಾನ ಮಾಡಿರುತ್ತಾರೆ. ಇಂತಹ ವೀರಯೋಧ ನಮ್ಮ ಜಿಲ್ಲೆಯಿಂದ ಪ್ರತಿ ನಿಧಿಸಿರುವುದು ನಮ್ಮ ಜಿಲ್ಲೆಯ ಹೆಮ್ಮೆ ಶ್ರೀ ದಿವಾಕರ್ ರವರ ಶೌರ್ಯ ಸಾಹಸ ಕರ್ತವ್ಯ ನಿಷ್ಠೆ ಕಾರ್ಯಾಚರಣೆಯಲ್ಲಿ ಅದ್ಭುತ ಸೇವೆ ಸಲ್ಲಿಸಿ ಭಾರತ ಮಾತೆಯ ರಕ್ಷಣೆ ಮಾಡಿ ಕರ್ನಾಟಕ ರಾಜ್ಯದ ರಾಯಚೂರು ಜಿಲ್ಲೆಯ ಗೌರವ ಘನತೆ ಹೆಚ್ಚಿಸಿದ ಬಂಡೆಗುಡ್ಡದ ಈ ಯೋಧರಿಗೆ ರಾಯಚೂರು ಜಿಲ್ಲೆಯ ಕೇಂದ್ರೀಯ ಶಸಸ್ತ್ರ ಪೊಲೀಸ್ ಪಡೆಯ ಮಾಜಿ ಯೋಧರ ಸಂಘದಿಂದ ನೌಕರರ ಭವನ ರಾಯಚೂರಿನಲ್ಲಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ದಿವಾಕರ್ ರವರು ನನಗೆ ನನ್ನ ಕರ್ತವ್ಯ ನಿಷ್ಠೆಯಿಂದ ನನ್ನ ಕೆಲಸ ಮಾಡಿದ್ದೇನೆ ನನ್ನ ಕಾರ್ಯದಿಂದ ನನಗೆ ತೃಪ್ತಿ ಇದೆ ಅಲ್ಲಿ ಬಹಳ ಕಷ್ಟ ಇತ್ತು ಆದರೂ ನಮಗೆ ಕಾಣುವದಲ್ಲಿ ದೇಶ ಮಾತ್ರ ಹೀಗಾಗಿ ನಾವು ಒಂದು ಆ ಕೆಲಸದಲ್ಲಿ ವಿಜಯಾಗಿರುವುದು ನನಗೆ ನನ್ನ ಜಿಲ್ಲೆಗೆ ನನ್ನ ರಾಜ್ಯಕ್ಕೆ ನನ್ನ ದೇಶಕ್ಕೆ ಹೆಮ್ಮೆಯ ವಿಷಯವಾಗಿದೆ ತಾವು ಮಾಡಿರುವ ಸನ್ಮಾನ ನನ್ನ ಜಿಲ್ಲೆಯ ಸಮಸ್ತ ಹಿರಿಯ ಜೀವಿಗಳಿಗೆ ಸಮರ್ಪಿಸುತ್ತಿದ್ದೇನೆ ಈ ಒಂದು ಕಾರ್ಯಕ್ರಮದಲ್ಲಿ ಯೋಧರ ಸಂಘದ ಪದಾಧಿಕಾರಿಗಳಾದ ಎಸ್ ಮಲ್ಲಯ್ಯ ಕೃಷ್ಣಮೂರ್ತಿ ಬಸವರಾಜ ಮುಷ್ಟೂರ್ ತಿಮ್ಮಪ್ಪ ಹರವಿ ಬಸವರಾಜ ವಾಲಿ ಎಂ.ಡಿ ಸಲೀಂ ಹನುಮಂತ ನಸಲಾಪುರ ಸಣ್ಣೆಪ್ಪ ಇನ್ನೂಳಿದ ಪದಾಧಿಕಾರಿಗಳು ಹಾಜರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ

