ಎಲ್ಲರಿಗೂ ಮನೆಯ ಹಕ್ಕು ಪತ್ರ ನೀಡಲು ಕ್ರಮ – ಶಾಸಕ ಜಿ.ಎಚ್ ಶ್ರೀನಿವಾಸ್.
ತರೀಕೆರೆ ಅ.26

ಜನರಿಗೆ ಈ ಸ್ವತ್ತು ಮತ್ತು ಖಾತೆ ದಾಖಲೆಗಳ ಸಮಸ್ಯೆಗಳು ಕ್ಷೇತ್ರಾದ್ಯಂತ ಕೇಳಿ ಬರುತ್ತಿದ್ದು ಈ ಕುರಿತು ನಾನು ವಿಧಾನ ಸಭೆ ಕಲಾಪಗಳಲ್ಲಿ ಚರ್ಚಿಸಿದ್ದೇನೆ ಎಂದು ಶಾಸಕರಾದ ಜಿ.ಎಚ್ ಶ್ರೀನಿವಾಸ್ ಹೇಳಿದರು. ಅವರು ಇಂದು ಮುಡುಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸವನಹಳ್ಳಿ ಕೆರೆ ₹1 ಕೋಟಿ ಅನುದಾನದಲ್ಲಿ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.
ಪದೇ ಪದೇ ವಿಧಾನ ಸಭೆಯಲ್ಲಿ ಚರ್ಚೆ ಮಾಡಿದ ಹಿನ್ನೆಲೆಯಲ್ಲಿ ಸರ್ಕಾರವು ಗಂಭೀರವಾಗಿ ಪರಿಗಣಿಸಿ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ಮಾಣ ಅಧಿಕಾರಿಗಳನ್ನು ಬೆಂಗಳೂರಿಗೆ ಕರೆಯಿಸಿ ಸಭೆ ಮಾಡಿದ ಹಿನ್ನೆಲೆಯಲ್ಲಿ ಕಂದಾಯ ಗ್ರಾಮ ಉಪ ಕಂದಾಯ ಗ್ರಾಮಗಳ ರಚನೆ ಮಾಡಿ ಎಲ್ಲರಿಗೂ ಮನೆಯ ನಿವೇಶನ ಹಕ್ಕು ಪತ್ರಕ್ಕೆ ಹಾಗೂ ಇ-ಸ್ವತ್ತು ಪತ್ರ ನೀಡಲು ಕ್ರಮ ಕೈಗೊಂಡಿದ್ದೇವೆ ಎಂದು ಹೇಳಿದರು. ವಡ್ಡರ ದಿಬ್ಬ ಗ್ರಾಮದಲ್ಲಿ 35 ಲಕ್ಷ ರೂಗಳ ಸಿ.ಸಿ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದರು.

ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಶಿವಕುಮಾರ್ ಮಾತನಾಡಿ ಶಾಸಕರು ಮರಿಯಮ್ಮ ದೇವಸ್ಥಾನ, ಅಂತರಘಟ್ಟಮ್ಮ ದೇವಸ್ಥಾನ, ಅಂಬಾ ಭವಾನಿ ದೇವಸ್ಥಾನಗಳ ಅಭಿವೃದ್ಧಿಗೆ ಸಾಕಷ್ಟು ಹಣ ಮಂಜೂರು ಮಾಡಿದ್ದಾರೆ ಎಸ್ ಸಿ ಕಾಲೋನಿ ಗೆ ಬಾಕ್ಸ್ ಚರಂಡಿ ನಿರ್ಮಾಣಕ್ಕೆ ಹತ್ತು ಲಕ್ಷ ಅನುದಾನ ಕೊಟ್ಟಿದ್ದಾರೆ ಎಂದು ಹೇಳಿದರು. ಕೆ ಡಿ ಪಿ ಸದಸ್ಯರಾದ ಸಿರಾಜ್ ಮಾತನಾಡಿ ಅಭಿವೃದ್ಧಿ ಹರಿಕಾರರಾದ ಜಿ ಎಚ್ ಶ್ರೀನಿವಾಸರವರು ನುಡಿದಂತೆ ನಡೆದಿದ್ದಾರೆ, ಊರಿನ ಅಭಿವೃದ್ಧಿಗೆ ಎಲ್ಲರ ಸಹಕಾರ ಮುಖ್ಯ ಎಂದು ಹೇಳಿದರು.
ಹೋಬಳಿ ಕಾಂಗ್ರೆಸ್ ಅಧ್ಯಕ್ಷರಾದ ಎಚ್ ಎಮ್ ಮಂಜುನಾಥ್ ರವರು ಸ್ವಾಗತಿಸಿ ಪ್ರಾಸ್ತಾವಿಕ ನುಡಿ ಮಾತನಾಡಿ ಒಟ್ಟು ₹5 ಕೋಟಿ 96 ಲಕ್ಷ ರೂಗಳ ಅನುದಾನವನ್ನು ಹಾಕಿಸಿದ್ದಾರೆ ಶಾಸಕರು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ರೂಪ ಉಪಾಧ್ಯಕ್ಷರಾದ ಗೋವಿಂದ ಸ್ವಾಮಿ ಮಾಜಿ ಅಧ್ಯಕ್ಷರಾದ ಜನತ್ ಬಾನು, ಈಶ್ವರಪ್ಪ, ರವಿ ಗ್ರಾಮದ ಮುಖಂಡರಾದ ಲೋಕೇಶ್, ಅಶೋಕ್, ಚಂದ್ರಣ್ಣ ಮುಂತಾದವರು ಉಪಸ್ಥಿತರಿದ್ದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎನ್.ವೆಂಕಟೇಶ್. ತರೀಕೆರೆ ಚಿಕ್ಕಮಗಳೂರು

