ಅ. 29 ರಿಂದ ಹಜರತ ಪೀರ ಗಾಲೀಬಸಾಬ – ಉರುಸ್ ಜಾತ್ರಾ ಮಹೋತ್ಸವ.
ಆಲಮೇಲ ಅ.28


ಕರ್ನಾಟಕ ಮಹಾರಾಷ್ಟ್ರ ಗಡಿಯಲ್ಲಿರುವ ವಿಜಯಪುರ ಜಿಲ್ಲೆಯ ಸುಕ್ಷೇತ್ರ ಆಲಮೇಲ ಪಟ್ಟಣದ ಸುತ್ತಮುತ್ತಲಿನ ಗ್ರಾಮಗಳಿಂದ ಹಾಗೂ ವಿವಿಧ ಜಿಲ್ಲೆಗಳಿಂದ ಸಾವಿರಾರು ಭಕ್ತರಿಗೆ ಶೃದ್ಧಾ ಸ್ಥಾನವಾದ ಈ ಕ್ಷೇತ್ರವು.ಹಜರತ ಪೀರ ಗಾಲೀಬಸಾಬ ದರ್ಗಾವು ವಿರಾಜ ಮಾನರಾಗಿದ್ದಾರೆ. ಬೇಡಿದವರಿಗೆ ಬೇಡಿ ಇದನ್ನು ಕಲ್ಪಿಸುವ. ಕಾಮಧೇನು ಕಲ್ಪವೃಕ್ಷ ವಾಗಿದೆ ಇಂದಿಗೂ ಶೋಭಿಸುತ್ತದೆ. ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಹಜರತ ಪೀರ ಗಾಲೀಬಸಾಬ ಉರುಸ್ ಹಾಗೂ ಜಾತ್ರಾ ಮಹೋತ್ಸವನ್ನು ಅತಿ ವಿಜೃಂಭಣೆಯಿಂದ ಜರುಗುವುದು.

ದಿನಾಂಕ 29/10/2025 ಬುಧವಾರ ರಂದು ಆಲಮೇಲ ಗ್ರಾಮದ ದೇಶಮುಖರ ಮನೆಯಿಂದ ರಾತ್ರಿ 9 ಘಂಟೆಗೆ ಗಂಧವನ್ನು (ಸಂದಲ) ತೆಗೆದುಕೊಂಡು ಅತಿ ವಿಜೃಂಭಣೆಯಿಂದ ವಾದ್ಯ ವೃಂದ ದೊಂದಿಗೆ ಹಾಗೂ ರಂಗು ರಂಗಿನ ಮದ್ದಿನ ಸುರಿಮಳೆ ಯೊಂದಿಗೆ ಪೀರ ಗಾಲೀಬಸಾಬ ದರ್ಗಾಕ್ಕೆ ಹೋಗಿ ಗಂಧವನ್ನು ಏರಿಸುವ ಕಾರ್ಯಕ್ರಮ ಜರುಗುವುದು.ದಿನಾಂಕ 30/10/2025 ಗುರುವಾರ ರಂದು ರಾತ್ರಿ ದೀಪ (ಚಿರಾಗ) ಬೆಳಗಿಸುವ ಕಾರ್ಯಕ್ರಮ ಜರುಗುವುದು.

ದಿನಾಂಕ 31/10/2025 ಶುಕ್ರವಾರ ರಂದು ರಾತ್ರಿ 9 ಘಂಟೆಗೆ ಮದ್ದು ಸುಡುವುದು ನಂತರ ರಾತ್ರಿ ಶ್ರೀ ವೀರಭದ್ರೇಶ್ವರ ಬೈಲಾಟ ಮಂಡಳಿಯಿಂದ ಶ್ರೀ ಶ್ರೀ ದೇವಿ ಮಹಾತ್ಮೆ ಬೈಲಾಟ ಹಾಗೂ ಶ್ರೀ ಹುಚ್ಚ ಲಿಂಗೇಶ್ವರ ಬೈಲಾಟ ಸಂಘ ಇವರಿಂದ ಭೀಮ ವಿಲಾಸ ಅರ್ಥಾತ್ ಕಿಚಕನ ವಧೆ ಎಂಬ ಪುರಾಣಿಕ ಬೈಲಾಟ ಜರುಗುವುದು ದಿನಾಂಕ 1/11/2025 ಶನಿವಾರ ನಾಡಿನ ಪ್ರಸಿದ್ಧ ಪೈಲ್ವಾನರಿಂದ ಜಂಗಿ ಕುಸ್ತಿ ಜರುಗುವುದು 5 ದಿನಗಳ ಕಾಲ ನಡೆಯುವ ಜಾತ್ರೆಗೆ ಬರುವ ಭಕ್ತರಿಗೆ ಗೆಳೆಯರ ಬಳಗ. ಆಲಮೇಲ ವತಿಯಿಂದ ಪ್ರತಿನಿತ್ಯ ಪ್ರಸಾದ ವ್ಯವಸ್ಥೆ ಮಾಡಲಾಗುತ್ತದೆ ಎಂದು ಜಾತ್ರಾ ಕಮೀಟಿಯ ಅಧ್ಯಕ್ಷ ಬಸವರಾಜ್ ತೆಲ್ಲೂರ ತಿಳಿಸಿದ್ದಾರೆ.

(ಹಜರತ ಪೀರ ಗಾಲೀಬಸಾಬರ ಜಾತ್ರೆ ಆಲಮೇಲ ಪಟ್ಟಣದಲ್ಲಿ ದೊಡ್ಡ ಜಾತ್ರೆಯಾಗಿದೆ ಈ ಜಾತ್ರೆ ಭಾವೈಕ್ಯದ ಸಂಕೇತವಾಗಿದೆ. ಹಿಂದೂ ಮುಸ್ಲಿಮರು ಸೇರಿ ಜಾತ್ರೆ ಆಚರಿಸುತ್ತಾರೆ. ಭಕ್ತರು ತನು. ಮನ. ಧನ ದಿಂದ ಸಹಕರಿಸುತ್ತಾರೆ ಅಶೋಕ ಕೋಳಾರಿ. ರಾಜಕೀಯ ಮುಖಂಡರು) ಪತ್ರಿಕಾ ಪ್ರಕಟಣೆ ತಿಳಿಸಿದ್ದಾರೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ರೇವಣಸಿದ್ದಯ್ಯ.ಜಿ.ಹಿರೇಮಠ ಆಲಮೇಲ
