ಮಕ್ಕಳು ಅವಧಾನ, ಅಧ್ಯಯನ ಶೀಲತೆಯನ್ನು ಬೆಳೆಸಿ ಕೊಳ್ಳಬೇಕು – ಚೇತನ್ ಕುಮಾರ್ ಕಿವಿಮಾತು.
ಚಳ್ಳಕೆರೆ ಅ. 28


ಮಕ್ಕಳು ಅವಧಾನ ಮತ್ತು ಅಧ್ಯಯನಶೀಲತೆಯನ್ನು ಬೆಳೆಸಿಕೊಳ್ಳಬೇಕು ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಸ್ವಯಂಸೇವಕ ಚೇತನ್ ಕುಮಾರ್ ಮಕ್ಕಳಿಗೆ ಕಿವಿಮಾತು ಹೇಳಿದರು.

ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ ಮಕ್ಕಳಿಗಾಗಿ ಆಯೋಜಿಸಿದ್ದ “ವಿವೇಕ ವಿಹಾರ ವಿದ್ಯಾರ್ಥಿ ಶಿಬಿರ” ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು “ಶಕ್ತಿಶಾಲೀ ವ್ಯಕ್ತಿತ್ವ ನಿರ್ಮಾಣದಲ್ಲಿ ಬೌದ್ಧಿಕ ಶಕ್ತಿಯ ಪಾತ್ರ” ಎಂಬ ವಿಷಯವಾಗಿ ಉಪನ್ಯಾಸ ನೀಡಿದರು.

ಈ ಶಿಬಿರದ ಪ್ರಯುಕ್ತ ಮಕ್ಕಳಿಂದ ಓಂಕಾರ, ದಿವ್ಯತ್ರಯರ ಪ್ರಣಾಮಮಂತ್ರ, ಶ್ರೀರಾಮಕೃಷ್ಣರ ನಾಮಸ್ಮರಣೆ, ಸ್ವಾಮಿ ವಿವೇಕಾನಂದರ ಶಕ್ತಿಮಂತ್ರ, ಸ್ವದೇಶ ಮಂತ್ರ, ಚೈತನ್ಯದಾಯಕ ನುಡಿಮುತ್ತುಗಳ ಪಠಣ ನಡೆದರೆ ಭಜನೆಯನ್ನು ಯತೀಶ್ ಎಂ ಸಿದ್ದಾಪುರ ನಡೆಸಿ ಕೊಟ್ಟರು. ಕಾರ್ಯಕ್ರಮದ ಕೊನೆಯಲ್ಲಿ ಮಕ್ಕಳಿಗೆ ವಿವಿಧ ಆಟಗಳನ್ನು ಸಂತೋಷ್ ಕುಮಾರ್ ಆಡಿಸಿದರು.
ಶಿಬಿರದಲ್ಲಿ ಸುಧಾಮಣಿ, ಡಾ, ಭೂಮಿಕಾ, ರೂಪ ಗಿರೀಶ್, ಲಕ್ಷ್ಮೀ, ಹರ್ಷಿತಾ, ಯಶಸ್ವಿ, ವಿನತಿ, ದವನ್, ಶ್ರೇಯಸ್, ಶ್ರೀನಿಹಾಂತ್, ಸಾಯಿ ಸಮರ್ಥ್, ಸಾಯಿ ಸೂರ್ಯ, ವಿಷ್ಣು, ವೈಷ್ಣವಿ, ಮನಸಿರಿ, ಜಶ್ವಿತಾ ಸೇರಿದಂತೆ ಮಕ್ಕಳು ಭಾಗವಹಿಸಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

