ದಲಿತರಿಗೆ ಕಾನೂನು – ಅರಿವು ಕಾರ್ಯಕ್ರಮ.
ತರೀಕೆರೆ ನ.12

ಅಪರಾಧಗಳು ನಡೆಯುದಂತೆ ಮುನ್ನೆಚ್ಚರಿಕೆಯಾಗಿ ದಲಿತರ ಕಾಲೋನಿಯಲ್ಲಿ ದಲಿತರಿಗೆ ಕಾನೂನು ಅರಿವು ಕಾರ್ಯಕ್ರಮ ಮಾಡಬೇಕು ಎಂದು ಪೊಲೀಸು ನಿರೀಕ್ಷಕರಾದ ರಾಮಚಂದ್ರ ನಾಯಕ್ ಹೇಳಿದರು. ಅವರು ಮಂಗಳವಾರ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಏರ್ಪಡಿಸಿದ್ದ ದಲಿತ ಸಭೆಯಲ್ಲಿ, ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕರಾದ ತರೀಕೆರೆ ಎನ್.ವೆಂಕಟೇಶ್ ರವರು ನೀಡಿದ ಮಾಹಿತಿ ಆಧರಿಸಿ ಮಾತನಾಡಿದರು. ಠಾಣಾ ವ್ಯಾಪ್ತಿಗೆ ಬರುವ ಎಲ್ಲಾ ದಲಿತ ಕಾಲೋನಿಗಳಲ್ಲಿ ಈ ಕಾನೂನು ಅರಿವು ಮೂಲಕ ಜನರಲ್ಲಿ ಜಾಗೃತಿ ಮೂಡಿಸಬೇಕು ಇದರಿಂದ ಅಪರಾಧಗಳು ಸಂಖ್ಯೆ ಕಡಿಮೆಯಾಗುತ್ತದೆ ಎಂದು ಹೇಳಿದರು.
ದಲಿತರಿಗೆ ಭೂಮಿ ಸಮಸ್ಯೆಗಳು ಹಾಗೂ ದಾರಿ ಸಮಸ್ಯೆಗಳು ಬಂದಲ್ಲಿ ದಾಖಲಾತಿಗಳನ್ನು ಆಧರಿಸಿ ನ್ಯಾಯ ಒದಗಿಸಬೇಕು ಎಂದು ತರೀಕೆರೆ ಎನ್ ವೆಂಕಟೇಶ್ ರವರು ತಿಳಿಸಿದರು. ಈ ಸಭೆಯಲ್ಲಿ ದಲಿತ ಮುಖಂಡರಾದ ಬಾಲರಾಜು ಮತ್ತು ಜಿಟಿ ರಮೇಶ್ ಮಾತನಾಡಿ ದಲಿತ ಕೇರಿಗಳಲ್ಲಿ ಅನಧಿಕೃತವಾಗಿ ಬ್ರಾಂಡಿ ಮಾರಾಟ ಮಾಡುವುದನ್ನು ನಿಲ್ಲಿಸಬೇಕು ಎಂದು ಹೇಳಿದರು.ಮತ್ತು ಮುಖಂಡರಾದ ರಘು, ವಸಂತ್ ಕುಮಾರ್. ಮುಂತಾದವರು ಸಭೆಯಲ್ಲಿ ಉಪಸ್ಥಿತರಿದ್ದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಎನ್.ವೆಂಕಟೇಶ್.ತರೀಕೆರೆ.ಚಿಕ್ಕಮಗಳೂರು

