ಬಿ.ವಿ.ಆರ್ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರಾದ ದಿ. ಬಿ.ವೀರಾರೆಡ್ಡಿ ಹಾಗೂ ದಿ// – ಬಿ.ಜಯಮ್ಮ ರವರ 3 ನೇ. ಪುಣ್ಯಸ್ಮರಣೆ.
ಮಾನ್ವಿ ನ.12

ಪಟ್ಟಣದ ಬಿ.ವಿ.ಆರ್ ಇ-ಟೆಕ್ನೋ ಶಾಲೆಯ ಸಭಾಂಗಣದಲ್ಲಿ ಬಿ.ವಿ.ಆರ್ ಎಜ್ಯುಕೇಶನ್ ಟ್ರಸ್ಟ್‌ನ ಸಂಸ್ಥಾಪಕರಾದ ದಿವಂಗತ ಬಿ. ವೀರಾರೆಡ್ಡಿ ಹಾಗೂ ದಿವಂಗತ ಬಿ. ಜಯಮ್ಮ ರವರ 3 ನೇ. ಪುಣ್ಯಸ್ಮರಣೆ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಬಿ.ವಿ. ರೆಡ್ಡಿ ಹಾಗೂ ಪದ್ಮವತಿ ದಂಪತಿಗಳು ಪಟ್ಟಣದ ಚನ್ನಬಸವೇಶ್ವರ ಅಂಧಮಕ್ಕಳ ಶಾಲೆಯ ಮಕ್ಕಳಿಗೆ ಮತ್ತು ನೆರಳು ಅನಾಥಾಶ್ರಮದಲ್ಲಿನ ನಿರಾಶ್ರಿತರಿಗೆ ವಸ್ತ್ರಗಳನ್ನು ದಾನವಾಗಿ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬಿ.ವಿ. ರೆಡ್ಡಿ ಅವರು, “ನಮ್ಮ ತಂದೆ ಬಿ. ವೀರಾರೆಡ್ಡಿ ಅವರು ಶೈಕ್ಷಣಿಕವಾಗಿ ಹಿಂದುಳಿದಿದ್ದ ನಮ್ಮ ಭಾಗದ ಮಕ್ಕಳಿಗೆ ಉತ್ತಮ ಶಿಕ್ಷಣದ ಅವಕಾಶ ಕಲ್ಪಿಸಬೇಕೆಂಬ ದೃಷ್ಟಿಯಿಂದ ಬಿ.ವಿ.ಆರ್ ಶಿಕ್ಷಣ ಸಂಸ್ಥೆಯನ್ನು ಪ್ರಾರಂಭಿಸಿದರು. ಇಂದು ನಮ್ಮ ಶಾಲೆಯಲ್ಲಿ ಅತ್ಯಂತ ಕಡಿಮೆ ಶುಲ್ಕದಲ್ಲಿ ಗುಣಮಟ್ಟದ ಶಿಕ್ಷಣ ಲಭ್ಯ. ಸಾವಿರಾರು ವಿದ್ಯಾರ್ಥಿಗಳು ಉನ್ನತ ಜೀವನ ರೂಪಿಸಿಕೊಂಡಿದ್ದಾರೆ. ಈಗ ನಮ್ಮ ಶಾಲೆಯನ್ನು ಅಂತರಾಷ್ಟ್ರೀಯ ಮಟ್ಟದ CBSE ಮಾನ್ಯತೆ ಹೊಂದುವಂತೆ ಅಭಿವೃದ್ಧಿಪಡಿಸುತ್ತಿದ್ದೇವೆ. ನಮ್ಮ ಶಾಲೆಯಲ್ಲಿ ಮಕ್ಕಳಿಗೆ ಕೇವಲ ಶಿಕ್ಷಣವಲ್ಲದೆ ಸಂಸ್ಕಾರ, ಸಂಸ್ಕೃತಿ ಹಾಗೂ ಪರಂಪರೆಯ ಪಾಠಗಳನ್ನು ಕಲಿಸಲಾಗುತ್ತಿದೆ,” ಎಂದು ಹೇಳಿದರು.
ಶಾಲಾ ಆವರಣದಲ್ಲಿರುವ ದಿವಂಗತ ಬಿ. ವೀರಾರೆಡ್ಡಿ ಹಾಗೂ ಬಿ. ಜಯಮ್ಮ ರವರ ಮೂರ್ತಿಗಳಿಗೆ ಪ್ರವೀಣ, ಭಾಸ್ಕರ, ಸರೋಜಮ್ಮ ಹಾಗೂ ನರಸಮ್ಮ ಬೋಗೋಲಿ ಕುಟುಂಬದವರು ಪೂಜೆ ಸಲ್ಲಿಸಿದರು.
ಅಂತರ್‌ಶಾಲಾ ಕ್ರಿಡಾಕೂಟಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ನಡೆಯಿತು. ಶಾಲಾ ಮಕ್ಕಳಿಂದ ಮನೋಹರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು.
ಕಾರ್ಯಕ್ರಮದಲ್ಲಿ ಎ.ಬಿ ಉಪ್ಪಳಮಠ ವಕೀಲರು, ಕೆ.ವಿ ರೆಡ್ಡಿ (ಅಧ್ಯಕ್ಷರು – ಹೋಲೀಫೇತ್ ಪಬ್ಲಿಕ್ ಸ್ಕೂಲ್, ಮಸ್ಕಿ), ಶರಫುದ್ದೀನ್ ಪೋತ್ನಾಳ (ತಾಲೂಕು ಅಧ್ಯಕ್ಷರು – ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟ, ಮಾನ್ವಿ), ಸರ್ವೋತ್ತಮ ರೆಡ್ಡಿ (ಪೋಲೀಸ್ ಪಾಟೀಲ್, ಮುಕ್ಕಂದ), ಮುಖ್ಯ ಗುರು ಸರಮತ್ ಖಾನ್, ಶಿಕ್ಷಕರು ಹಂಪಣ್ಣ, ಜ್ಯೋತಿ ಹಾಗೂ ಅನೇಕರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್ ಭಾಷಾ ನಕ್ಕುಂದಿ

