“ಅಂಚೆಗೆ ಹೋಗದ ಪತ್ರ” ಚಿತ್ರದ ಮೊದಲ – ಪ್ರತಿ ಅನಾವರಣ.
ಬೆಳಗಾವಿ ಡಿ.03

ನವಗ್ರಹ ಸಿನಿಮಾಸ್ ಬೆಳಗಾವಿ, ವರ್ಚಸ್ಸು ಎಂಟರ್ಟೈನ್ಮೆಂಟ್, ಪ್ಯಾರಡೈಸ್ ಸ್ಟುಡಿಯೋಸ್ ಅವರ ಪ್ರಥಮ ಚಿತ್ರ ʼಅಂಚೆಗೆ ಹೋಗದ ಪತ್ರʼ ನಟ ನವೀನ ಶಂಕರ ಅವರು ಚಿತ್ರದ ಮೊದಲ ಪ್ರತಿಯನ್ನು ಡಿಜಿಟಲಿ ಲಾಂಚ್ ಮಾಡಿ ಹೊಸಬರ ತಂಡಕ್ಕೆ ಶುಭಾಶಯ ಕೋರಿದರು.
ಚಿತ್ರದ ನಿರ್ದೇಶಕ ಪ್ರವೀಣ ಸುತಾರ ಅವರು ನಿರ್ದೇಶನದ ಜೊತೆಗೆ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದಾರೆ. ನಿರ್ದೇಶಕ ಪ್ರವೀಣ ಸುತಾರ ಹೇಳುವಂತೆ. ಈ ಸಿನಿಮಾ ಕೇವಲ ಕಥೆಯಲ್ಲ; ಇದು ನಮ್ಮ ತಂಡದ ಭಾವನೆ, ಪರಿಶ್ರಮ ಮತ್ತು ಪ್ರೇಕ್ಷಕರಿಗೆ ಹೇಳಬೇಕೆನ್ನುವ ಮನದಾಳದ ಮಾತು. ಉತ್ತರ ಕರ್ನಾಟಕದಲ್ಲಿ ಸಂಪೂರ್ಣ ಚಿತ್ರೀಕರಣ ಮುಗಿಸಿದ್ದು, ಹೊಸ ವರ್ಷದ ವೇಳೆಗೆ ಚಿತ್ರವನ್ನು ತೆರೆಗೆ ತರುವ ತಯಾರಿಯಲ್ಲಿದ್ದೇವೆ. ಈ ಚಿತ್ರವು ಸ್ನೇಹ, ಕನಸು, ಕಳೆದು ಹೋದ ನೆನಪುಗಳು ಮತ್ತು ಬದುಕಿನ ಅಂಚುಗಳನ್ನು ತಾಕುವ ಹೃದಯಸ್ಪರ್ಶಿ ಕಥೆ ಹೊಂದಿದ್ದು, ಶೀಘ್ರದಲ್ಲೇ ಟೀಸರ್ ಹಾಗೂ ಟ್ರೈಲರ್ ಬಿಡುಗಡೆ ಯಾಗಲಿದೆ. ನಾಲ್ಕು ಹಾಡುಗಳಿದ್ದು ಬೆಳಗಾವಿ, ಗೋವಾ, ಹಂಪಿ, ಕೊಂಕಣ ಭಾಗದಲ್ಲಿ ಚಿತ್ರೀಕರಣ ಮಾಡಲಾಗಿದೆ. ಹಾಡುಗಳು ತುಂಬಾ ಸುಂದರವಾಗಿ ಮೂಡಿ ಬಂದಿವೆ ಎಂದರು.

ನಾಯಕಿಯಾಗಿ ಸಹನಾ ಬಡ್ಲಿ, ಸೌಮ್ಯ ಅಮರ ಪೂರಕರ, “ಮಹಾನಟಿ” ಖ್ಯಾತಿಯ ವರ್ಷಾ ಡಿಗ್ರೇಜೆ, ಮಹೇಶ್ ಪಾಟೀಲ, ಗೌರಿ ಅಂಗಡಿ ಸೇರಿದಂತೆ ಹಲವು ಕಲಾವಿದರು ತಾರಾ ಬಳಗದಲ್ಲಿದ್ದಾರೆ. ಚಿತ್ರಕ್ಕೆ ಮಂಜು ಬಸವರಾಜ ಅವರ ಕ್ಯಾಮರ ಕೈಚಳಿಕೆ, ದಿವಾಕರ ಎಮ್ ಅವರ ಸಂಗೀತ, ಶಿವ ಗಂಗಾಧರ ಸಂಕಲನ, ವಿ.ಎಫ್.ಎಕ್ಸ್ ವಿಭಾಗದಲ್ಲಿ ಹೂಡಿನಿ ಕ್ರಾಫ್ಟ ನ ರಂಜಿತ್ ಪಾಂಡೆ ಎಸ್.ಪಿ ಅವರ ಕೆಲಸ ವಿಶೇಷತೆಗಳಾಗಿವೆ. ಪತ್ರಿಕಾ ಸಂಪರ್ಕ ಡಾ, ಪ್ರಭು ಗಂಜಿಹಾಳ, ಡಾ, ವೀರೇಶ ಹಂಡಿಗಿ, ಅಸೋಸಿಯೇಟ್ ಡೈರೆಕ್ಟರ್ ವಿಷು ವಿಶ್ವ, ವೀಣಾ ಲಕ್ಕುಂಡಿ̧ ಅಸಿಸ್ಟೆಂಟ್ ಡೈರೆಕ್ಟರ್ ಓಂಕಾರ ಡೊಂಗ್ರೇ, ಮಂಜು ಕಾರ್ಯ ನಿರ್ವಹಿಸಿದ್ದು, ಚಿತ್ರಕ್ಕೆ ಮಂಜುನಾಥ ಹುಲಿಮನಿ ಮತ್ತು ಸ್ನೇಹಿತರು ಬಂಡವಾಳ ಹೂಡಿದ್ದಾರೆ. ಚಿತ್ರದ ಚಿತ್ರೀಕರಣ ಸಂಪೂರ್ಣ ಗೊಂಡಿದ್ದು ಪೋಸ್ಟ್-ಪ್ರೊಡಕ್ಷನ್ ಹಂತ ವೇಗವಾಗಿ ಸಾಗುತ್ತಿದೆ ಎಂದು ನಿರ್ಮಾಪಕ ಮಂಜುನಾಥ ಹೇಳಿದರು.
*****
– ಡಾ, ಪ್ರಭು ಗಂಜಿಹಾಳ
ಮೊ: ೯೪೪೮೭೭೫೩೪೬

