ತೀವ್ರ ವ್ಯಾಕುಲತಾ ಮೂರ್ತಿ ಸ್ವಾಮಿ ತುರೀಯಾನಂದರು – ಶ್ರೀಮತಿ ಎಚ್.ಲಕ್ಷ್ಮೀದೇವಮ್ಮ.
ಚಳ್ಳಕೆರೆ ಜ.09

ಭಗವಂತನದರುಶನಕ್ಕಾಗಿ ಸ್ವಾಮಿ ತುರೀಯಾನಂದರು ತೀವ್ರ ವ್ಯಾಕುಲತೆಯನ್ನು ಹೊಂದಿದ್ದರು ಎಂದು ಚಳ್ಳಕೆರೆಯ ತ್ಯಾಗರಾಜನಗರದ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದ ಮುಖ್ಯಸ್ಥರಾದ ಶ್ರೀಮತಿ ಎಚ್.ಲಕ್ಷ್ಮೀದೇವಮ್ಮ ತಿಳಿಸಿದರು.
ತ್ಯಾಗರಾಜ ನಗರದ ಸದ್ಭಕ್ತರಾದ ಶ್ರೀಮತಿ ನಂಜಮ್ಮ ಕೆಂಚಪ್ಪ ಶಿಕ್ಷಕರ ಸವಿತಾ ನಿವಾಸದಲ್ಲಿ “ಸ್ವಾಮಿ ತುರೀಯಾನಂದರ ಜಯಂತ್ಯುತ್ಸವ ಮತ್ತು ಅಂಗಾರಕ ಸಂಕಷ್ಟಿ”ಯ ಪ್ರಯುಕ್ತ ಆಯೋಜಿಸಿದ್ದ ವಿಶೇಷ ಸತ್ಸಂಗ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು ಸ್ವಾಮಿ ತುರೀಯಾನಂದರ ಜೀವನ-ವ್ಯಕ್ತಿತ್ವಗಳ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.

ಪ್ರಖಾರ ವೈರಾಗ್ಯ ಮೂರ್ತಿಯಾಗಿದ್ದ ಸ್ವಾಮಿ ತುರೀಯಾನಂದರು ಶ್ರೀರಾಮಕೃಷ್ಣರ ಹದಿನಾರು ಮಂದಿ ನೇರ ಸಂನ್ಯಾಸಿ ಶಿಷ್ಯರಲ್ಲಿ ಒಬ್ಬರಾಗಿ ಸ್ವಾಮಿ ವಿವೇಕಾನಂದರಿಂದ ಸಂನ್ಯಾಸಿ ನಾಮವನ್ನು ಪಡೆದು ಕೊಂಡು ಶ್ರೀರಾಮಕೃಷ್ಣರ ಸಂದೇಶಗಳನ್ನು ವಿದೇಶಗಳಲ್ಲಿ ಪ್ರಸಾರ ಮಾಡಿದ ಬಹು ದೊಡ್ಡ ಕೀರ್ತಿ ಇವರಿಗೆ ಸಲ್ಲುತ್ತದೆ ಎಂದು ತಿಳಿಸಿದರು.
ಈ ಸತ್ಸಂಗದ ಪ್ರಯುಕ್ತ ಶ್ರೀಶಾರದಾಶ್ರಮದ ಸದ್ಭಕ್ತರಿಂದ ಸಾಮೂಹಿಕ ಶ್ರೀರಾಮರಕ್ಷಾ ಸ್ತೋತ್ರ ಪಠಣ, ಶ್ರೀರಾಮಕೃಷ್ಣರ ನಾಮಸ್ಮರಣೆ, ಗಣೇಶನ ಭಜನೆಗಳು ಮತ್ತು “ಶ್ರೀಶಾರದಾದೇವಿ ಜೀವನಗಂಗಾ” ಗ್ರಂಥ ಪಾರಾಯಣವನ್ನು ಯತೀಶ್ ಎಂ ಸಿದ್ದಾಪುರ ನಡೆಸಿ ಕೊಟ್ಟರು.
ಜಯಂತ್ಯುತ್ಸವದಲ್ಲಿ ಶ್ರೀಮತಿ ನಂಜಮ್ಮ ಕೆಂಚಪ್ಪ, ಎಂ ಗೀತಾ ನಾಗರಾಜ್, ಗೀತಾ ವೆಂಕಟೇಶರೆಡ್ಡಿ, ಎಂ ಲಕ್ಷ್ಮೀದೇವಮ್ಮ, ಸುವರ್ಣಮ್ಮ, ಸರ್ವಮಂಗಳಾ, ಪ್ರೇಮಾ, ಅನುಸೂಯ ರಾಘವೇಂದ್ರ, ಸೌಮ್ಯ ಪ್ರಸಾದ್, ಸರಸ್ವತಿ ರಾಜು, ಸರಸ್ವತಿ, ಪ್ರಮೀಳಾ ಜಗದೀಶ್ ಭಾಗವಹಿಸಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

