ವಿಶ್ವಕರ್ಮ ಸಮಾಜ ಜಿಲ್ಲಾ (ರಿ) ಕ್ಕೆ ನೂತನ ಪದಾಧಿಕಾರಿಗಳು ಆಯ್ಕೆ – ಪ್ರ.ಕಾರ್ಯದರ್ಶಿ.ಕೆ ರಾಮು ಗಾಣಧಾಳ.
ರಾಯಚೂರು ಜ.28

ನೋಂದಾಯಿತ ರಾಯಚೂರು ಜಿಲ್ಲಾ ವಿಶ್ವಕರ್ಮ ಸಮಾಜ(ರಿ) ಸಂಘವನ್ನು ದಿ 22-3-1990 ರಂದು ಬಿ.ಚಂದಪ್ಪ ಸಂಸ್ಥಾಪಕ ಅಧ್ಯಕ್ಷರು ಸ್ಥಾಪನೆ ಮಾಡಿ ಇದೀಗ 36 ವರ್ಷಗಳಾಗಿವೆ. ಈ ಸಂಘಕ್ಕೆ ಇದೇ ಮೊದಲ ಬಾರಿಗೆ ಸಹಕಾರ ಸಂಘಗಳ ಇಲಾಖೆಯ ವತಿಯಿಂದ ಚುನಾವಣೆ ಪ್ರಕ್ರಿಯೆ ನಡೆಸಲಾಯಿತು. ಸಂಘದ 14 ಸ್ಥಾನಗಳಿಗೆ 26 ಜನ ಸದಸ್ಯರು ನಾಮಪತ್ರ ಸಲ್ಲಿಸಿದ್ದರು. ಅಧ್ಯಕ್ಷ ಸ್ಥಾನಕ್ಕೆ 8, ಉಪಾಧ್ಯಕ್ಷ ಸ್ಥಾನಕ್ಕೆ 2, ಪ್ರ.ಕಾರ್ಯದರ್ಶಿ ಸ್ಥಾನಕ್ಕೆ 1, ಕೋಶಾಧ್ಯಕ್ಷ ಸ್ಥಾನಕ್ಕೆ 1, ಸಂಘಟನಾ ಕಾರ್ಯದರ್ಶಿ ಸ್ಥಾನಕ್ಕೆ 1, ಕಾರ್ಯಕಾರಿ ಸಮಿತಿ ಸದಸ್ಯರ ಸ್ಥಾನಕ್ಕೆ 13 ನಾಮಪತ್ರಗಳು ಸಲ್ಲಿಕೆ ಯಾಗಿದ್ದವು.
ಸಮಾಜದ ಮುಖಂಡರು, ಸಂಘದ ಹಿತಾಸಕ್ತರು, ಸದಸ್ಯರು ಸೇರಿ ಜಿಲ್ಲೆಯ ಎಲ್ಲಾ ತಾಲೂಕುಗಳಿಗೆ ಪ್ರಾಧ್ಯಾನತೆ ನೀಡಿ ಚುನಾವಣೆಯಿಂದ ಸಮಾಜದ ಸಾಮರಸ್ಯಕ್ಕೆ ದಕ್ಕೆ ಯಾಗುತ್ತದೆಂದು ತೀರ್ಮಾನಿಸಿ 26 ಉಮೇದುವಾರರಲ್ಲಿ 12 ಜನ ಸದಸ್ಯರು ನಾಮಪತ್ರಗಳನ್ನು ಹಿಂಪಡೆದು 14 ಸ್ಥಾನಗಳಿಗೆ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಇದು ಸಮಾಜದ ಸುವ್ಯವಸ್ಥಿತ ಸಂಘಟನೆಗೆ ನಾಂದಿ ಯಾಯಿತು.

ಪದಾಧಿಕಾರಿಗಳ ವಿವರ:-
*ಅಧ್ಯಕ್ಷ* ಉದಯಕುಮಾರ ಪತ್ತಾರ ಮಸ್ಕಿ, *ಉಪಾಧ್ಯಕ್ಷ* ಧರ್ಮಣ್ಣ ಪತ್ತಾರ ಗುಂಜಹಳ್ಳಿ(ಸಿಂಧನೂರು ), *ಪ್ರಧಾನ ಕಾರ್ಯದರ್ಶಿ* ಕೆ.ರಾಮು ಗಾಣಧಾಳ (ರಾಯಚೂರು ), *ಕೋಶಾಧ್ಯಕ್ಷ* ಕೆ.ಸಿ.ಲಕ್ಷ್ಮಿಪತಿ ಯರಗೇರಾ (ರಾಯಚೂರು ), *ಸಂಘಟನಾ ಕಾರ್ಯದರ್ಶಿ* ಷಣ್ಮುಖ ಆಚಾರಿ ಚಿಕಲಪರ್ವಿ (ಮಾನ್ವಿ),
ಕಾರ್ಯಕಾರಿ ಸಮಿತಿ ಸದಸ್ಯರು:-
ರಾಯಚೂರಿನ ಎ ಈಶ್ವರ ವಿಶ್ವಕರ್ಮ, ಯಾದಗಿರಿ ಆಚಾರಿ @ಗಿರೀಶ್ ಆಚಾರಿ, ಡಾ, ವೆಂಕಟೇಶ್ ಅನ್ವರಿ, ವಿ.ಪ್ರಕಾಶ ಗುಂಜಳ್ಳಿ, ಬಿ.ವೆಂಕಟೇಶ ಕೊಂಡಾಪುರ, ಲಿಂಗಸುಗೂರಿನ ಉದಯಕುಮಾರ್ ಕಂಬಾರ್ ಮುದಗಲ್, ದೇವದುರ್ಗದ ಮಲ್ಲಪ್ಪ ವಿಶ್ವಕರ್ಮ, ಸಿರವಾರದ ಮೌನೇಶ್ ಪತ್ತಾರ ತಡಕಲ್ ಕವಿತಾಳ, ಸಿಂಧನೂರಿನ ಬಸವರಾಜ ಪತ್ತಾರ ಕಮತಗಿ ಯವರು ಅವಿರೋಧವಾಗಿ ಆಯ್ಕೆ ಯಾಗಿರುತ್ತಾರೆಂದು ರಾ.ಜಿ.ವಿ.ಸ.ದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ. ರಾಮು ಗಾಣಧಾಳ್ ಪತ್ರಿಕೆ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

