ಶಕ್ತಿ ಸ್ವರೂಪಿಣಿ ಶ್ರೀಮಾತೆ ಶಾರದಾದೇವಿ – ಮಾತಾಜೀ ತ್ಯಾಗಮಯೀ.
ಶಿವಮೊಗ್ಗ ಜ.28

ಶ್ರೀರಾಮಕೃಷ್ಣ ಪರಮಹಂಸರ ಶಕ್ತಿ ಸ್ವರೂಪಿಣಿ ಶ್ರೀಮಾತೆ ಶಾರದಾದೇವಿ ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಪೂಜ್ಯ ಮಾತಾಜೀ ತ್ಯಾಗಮಯೀ ತಿಳಿಸಿದರು.
ನಗರದ ವಿನೋಬನಗರದ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದ 21 ನೇ. ವಾರ್ಷಿಕೋತ್ಸವದ ಪ್ರಯುಕ್ತ ಆಯೋಜಿಸಿದ್ದ ವಿಶೇಷ ಸತ್ಸಂಗ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು ವಿಶೇಷ ಪ್ರವಚನ ನೀಡಿದರು.
ಶಿವಮೊಗ್ಗದ ಶ್ರೀರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಪೂಜ್ಯ ಸ್ವಾಮಿ ವಿನಯಾನಂದಜೀ ಅವರು ದಿವ್ಯ ಸಾನಿಧ್ಯ ವಹಿಸಿ ಶಾರದಾಮಾತೆಯವರ ಸಂದೇಶಗಳನ್ನು ತಿಳಿಸಿ ಕೊಟ್ಟರು.

ಈ ಸಂದರ್ಭದಲ್ಲಿ ಸಮಾಜ ಸೇವಕಿ ಶ್ರೀಮತಿ ಶೋಭಾ ಹೆಗ್ಡೆ ಅವರನ್ನು ಸತ್ಸಂಗ ಕೇಂದ್ರದಿಂದ ಸನ್ಮಾನಿಸಿ ಗೌರವಿಸಲಾಯಿತು.
ಸತ್ಸಂಗದ ಆರಂಭದಲ್ಲಿ ಸತ್ಯಸಾಯಿ ಭಜನಾ ಮಂಡಳಿಯ ರಾಘವೇಂದ್ರ ಜನ್ನು ಮತ್ತು ಸದಸ್ಯರಿಂದ ಭಜನೆ,ಮಕ್ಕಳಿಂದ ದಿವ್ಯತ್ರಯರ ಚಿಂತನೆಗಳು, ದಿವ್ಯತ್ರಯರಿಗೆ ಮಂಗಳಾರತಿ ಮತ್ತು ಅನ್ನಪ್ರಸಾದ ವಿನಿಯೋಗ ನಡೆಯಿತು.

ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಚಿಕ್ಕಸ್ವಾಮಿ, ಭವೇಂದ್ರಕುಮಾರ್, ವಸಂತಕುಮಾರ್, ಸುಂದರ್ ರಾಜ್, ವಿಶ್ವರಾಜಾಚಾರ್ಯ, ಗಿರೀಶ್ ಮಹಾರಾಜ್, ಹೊಸ್ತೋಟ ಸೂರ್ಯನಾರಾಯಣ, ನಮಿತಾ, ಡಾ, ಆಕಾಶ್ ಹೊಸ್ತೋಟ, ಡಾ, ಅಭಿನೀತಾ ಹೊಸ್ತೋಟ, ಗೀತಾ ಮಹಾಬಲರಾವ್, ಶ್ರೀಕಾಂತ, ಸುಜಯ್ ಪುರುಷೋತ್ತಮ, ಸುಧಾ, ಮಂಜುನಾಥ, ನಾಗರಾಜ್, ಯತೀಶ್ ಎಂ ಸಿದ್ದಾಪುರ, ಚೇತನ್ ಸೇರಿದಂತೆ ಸಾಕಷ್ಟು ಸಂಖ್ಯೆಯಲ್ಲಿ ಸದ್ಭಕ್ತರು ಭಾಗವಹಿಸಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

