ಭಿನ್ನತೆಗಳನ್ನು ಮರೆತು ನಾವು ಹಿಂದೂಗಳೆಂಬ ಏಕತೆಯ ಸೂತ್ರವನ್ನು ಪಾಲಿಸ ಬೇಕು – ಮಾತಾಜೀ ತ್ಯಾಗಮಯೀ.

ಚಳ್ಳಕೆರೆ ಜ.30

ಹಿಂದೂ ಸಂಗಮ ಕಾರ್ಯಕ್ರಮವು ಪ್ರತಿದಿನ ಪ್ರತಿಯೊಂದು ಹಿಂದೂ ಮನೆಯಿಂದಲೇ ಆರಂಭವಾಗ ಬೇಕು ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಪೂಜ್ಯ ಮಾತಾಜೀ ತ್ಯಾಗಮಯೀ ಅಭಿಪ್ರಾಯ ಪಟ್ಟರು.

ನಗರದ ಶಿವ ನಗರದ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಆವರಣದಲ್ಲಿ ಆಯೋಜಿಸಿದ್ದ “ಹಿಂದೂ ಸಂಗಮ” ಸಭಾ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಹಿಂದೂ ಸನಾತನ ಸಂಸ್ಕೃತಿಯನ್ನು ಎತ್ತಿ ಹಿಡಿಯುವಂತಹ ಉಡುಗೆಗಳನ್ನು, ಆಹಾರ ಪದ್ದತಿಯನ್ನು‌ ಹಾಗೂ ಸನಾತನ ಧರ್ಮದ ಮೌಲ್ಯಗಳನ್ನು ನಿತ್ಯ ಜೀವನದಲ್ಲಿ ಆಚರಣೆಗೆ ತರುವ ಮೂಲಕ ಸನಾತನ ಸಂಸ್ಕೃತಿಯನ್ನು ಉಳಿಸಿ ಬೆಳೆಸ ಬೇಕೆಂದು ನೆರೆದ ಸಭಿಕರಿಗೆ ಕಿವಿಮಾತು ಹೇಳಿದರು.

ಸನಾತನ ಹಿಂದೂ ಸಂಸ್ಕೃತಿಯ ಮಹಾ ಕಾವ್ಯಗಳದಂತಹ ರಾಮಾಯಣ-ಮಹಾಭಾರತ-ಭಾಗವತದಂತಹ ಸದ್ಗ್ರಂಥಗಳನ್ನು ಚೆನ್ನಾಗಿ ಅಧ್ಯಯನ ಮಾಡಬೇಕು. ಮಕ್ಕಳಲ್ಲಿ ಸಂಸ್ಕಾರದ ಬೀಜ ಬಿತ್ತಬೇಕು ಎಂದು ತಿಳಿಸಿದರು.

ತೀರ್ಥಹಳ್ಳಿಯ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜಿಲ್ಲಾ ಸಂಚಾಲಕರಾದ ರಾಮಚಂದ್ರಜೀ ಮಾತನಾಡಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಮಾನೋತ್ಸವದ ಈ ಶುಭ ಸಂದರ್ಭದಲ್ಲಿ ಹಿಂದೂ ಸಂಗಮ ಕಾರ್ಯಕ್ರಮವನ್ನು ಆಯೋಜಿಸಿರುವುದು ಪ್ರತಿಯೊಬ್ಬ ಹಿಂದೂವಿನ ದೇಶಕ್ಕಾಗಿ ಮಾಡಬೇಕಾದ ಕರ್ತವ್ಯವನ್ನು ನೆನಪಿಸುವುದಕ್ಕಾಗಿ, ಹಿಂದೂ ಧರ್ಮಕ್ಕೆ ಆದಿ-ಅಂತ್ಯವಿಲ್ಲ, ಇದು ನಿತ್ಯ ವಿನೂತನವಾಗಿದ್ದು ಸನಾತನವಾದದ್ದು, ಇಡೀ ವಿಶ್ವಕ್ಕೆ ಭಾರತದ ಕೊಡುಗೆ ಅಪಾರವಾಗಿದ್ದು ಇದನ್ನು ಜಗತ್ತು ಸ್ಮರಿಸಬೇಕು‌ ಎಂದರು.

ಅಧ್ಯಕ್ಷತೆಯನ್ನು ವಹಿಸಿದ್ದ ತಾಲೂಕು ಪತಂಜಲಿ ಯೋಗ ಶಿಕ್ಷಣ ಸಮಿತಿಯ ಅಧ್ಯಕ್ಷರಾದ ಮನೋಹರ್ ಮಾತನಾಡಿ ಹಿಂದೂಗಳು ಜಾತಿಗಳನ್ನು ಮರೆತು ಸಂಘಟಿತರಾಗ ಬೇಕೆಂದು ಕರೆ ನೀಡಿದರು. ಆರಂಭದಲ್ಲಿ ಸತ್ಯನಾರಾಯಣ ಸ್ವಾಮಿ ಪೂಜೆ ಮತ್ತು ಮಂಗಳಾರತಿ, ಅನ್ನಪ್ರಸಾದ ವಿನಿಯೋಗ ನಡೆಯಿತು.

ಕಾರ್ಯಕ್ರಮದಲ್ಲಿ ವಿಶ್ವ ಹಿಂದೂ ಪರಿಷತ್ ನ ತಾಲೂಕು ಅಧ್ಯಕ್ಷರಾದ ಕೆ.ಎಂ ಯತೀಶ್, ಕುಮಾರ್, ಜಗದಂಬಾ, ಪುಷ್ಪಲತಾ ಸಿದ್ದೇಶ್, ಶಾಂತಮ್ಮ, ಶುಭಾ ಸುರೇಶ್, ಸುಧಾ, ನಾಗಶಯನ ಗೌತಮ್, ಯತೀಶ್ ಎಂ ಸಿದ್ದಾಪುರ,ಜಿ ಯಶೋಧಾ ಪ್ರಕಾಶ್,ಸುಮನಾ ಕೋಟೇಶ್ವರ,ಕವಿತಾ ಗುರುಮೂರ್ತಿ, ಪಿ.ಎಸ್ ಮಾಣಿಕ್ಯ ಸತ್ಯನಾರಾಯಣ, ರಶ್ಮಿ ವಸಂತ , ಸಂಗೀತ, ಜ್ಯೋತಿ, ಭಜಂತ್ರಿ, ಸುಮಂಗಳಾ, ಲೀಲಾವತಿ, ಶ್ರೀಪಾದ್, ದ್ರಾಕ್ಷಾಯಣಿ, ವಿಜಯಲಕ್ಷ್ಮೀ, ಭಾಗ್ಯಲಕ್ಷ್ಮೀ ಸೇರಿದಂತೆ ಸಾಕಷ್ಟು ಸಂಖ್ಯೆಯಲ್ಲಿ ಧರ್ಮಾಭಿಮಾನಿಗಳು ಭಾಗವಹಿಸಿದ್ದರು.

ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button