ಸಮೂಹ ಸಂಪನ್ಮೂಲ ಕೇಂದ್ರದಲ್ಲಿ – ಮಕ್ಕಳ ಕಲಿಕಾ ಹಬ್ಬ ಫೆ 6 ರಂದು ಜರುಗುವುದು.
ಯಲಗೋಡ ಫೆ.01

ದೇವರ ಹಿಪ್ಪರಗಿ ತಾಲೂಕಿನ ಯಲಗೋಡ ಗ್ರಾಮದಲ್ಲಿ ಜಿಲ್ಲಾ ಪಂಚಾಯತ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಾಗೂ ಕ್ಷೇತ್ರ ಸಮನ್ವಯ ಅಧಿಕಾರಿಗಳ ಕಾರ್ಯಾಲಯ ಸಿಂದಗಿ ಹಾಗೂ ಸಮೂಹ ಸಂಪನ್ಮೂಲ ಕೇಂದ್ರ ಯಲಗೋಡ ಇವರ ಆಶ್ರಯದಲ್ಲಿ ನಡೆಯುವ ಕಲಿಕಾ ಹಬ್ಬವನ್ನು ಇದೇ ಫೆಬ್ರವರಿ 6 ರಂದು ನಡೆಯಲಿದೆ.
ಯಲಗೋಡದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2025/26 ನೇ. ಸಾಲಿನ ಶೈಕ್ಷಣಿಕ ವರ್ಷದ ಕ್ಲಸ್ಟರ್ ಮಟ್ಟದ ಎಫ್.ಎಲ್.ಎನ್ ಆಧಾರಿತ ಕಲಿಕಾ ಹಬ್ಬವನ್ನು ನಮ್ಮ ಕ್ಲಸ್ಟರ್ ಮಟ್ಟದ ಎಲ್ಲಾ ಶಾಲೆಯ ಮಕ್ಕಳು ಹಾಗೂ ಶಿಕ್ಷಕರು ಬರುತ್ತಾರೆ. ಹಾಗೂ ಮಕ್ಕಳಿಗೆ ವಿವಿಧ ಕಾರ್ಯಕ್ರಮಗಳು ಇವೆ. ಪೋಷಕರ ಹಾಗೂ ಸಹ ಸಂಬಂಧ ವಲಯ ಕಥೆ ಹೇಳುವುದು.

ಸಂತೋಷದಾಯಕ ಗಣಿತ,ಆರೋಗ್ಯ ಮತ್ತು ಪೌಷ್ಟಿಕಾಂಶ, ಚಿತ್ರ ನೋಡಿ ಓದುವುದು, ಟ್ರೆಷರ್ ಹಂಟ್ ಮೆಮೊರಿ ಪರೀಕ್ಷೆ ರಸ ಪ್ರಶ್ನೆ, ಗಟಿಯಾಗಿ ಓದುವುದು, ಛದ್ಮವೇಷ, ಪಾತ್ರಾಭಿನಯ ಹಾಗೂ ಅಭಿನಯ ಕೌಶಲ್ಯಕೈ ಬಹರ ಹಾಗೂ ಕ್ಯಾಲಿಗ್ರಫಿ, ಹೀಗೆ ಕಾರ್ಯಕ್ರಮಗಳು ಇವೆ ಈ ಕಲಿಕಾ ಹಬ್ಬಕ್ಕೆ ಗ್ರಾಮದ ಶಾಲಾ ಸುಧಾರಣೆ ಸಮಿತಿ ಯವರು ಹಾಗೂ ಗ್ರಾಮ ಪಂಚಾಯತಿಯವರು ಹಿರಿಯ ಈ ಕಾರ್ಯಕ್ರಮಕ್ಕೆ ಆಗಮಿಸಬೇಕು ಎಂದು ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಬಾಬು ಕೆರುಟಗಿ ಹಾಗೂ ಶಾಲೆಯ ಮುಖ್ಯ ಗುರುಗಳಾದ ಮಲ್ಲಿಕಾರ್ಜುನ ದೊಡ್ಡಮನಿ ಯವರು ತಿಳಿಸಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಭೀಮಪ್ಪ ಹಚ್ಯಾಳ ದೇವರ ಹಿಪ್ಪರಗಿ

