ಬುಡಗ ಜಂಗಮ ಅಲೆಮಾರಿಗಳಿಗೆ – ಅಗತ್ಯ ವಸ್ತುಗಳ ವಿತರಣೆ.
ಚಳ್ಳಕೆರೆ ಫೆ.01

ಶಿವ ನಗರದ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದಿಂದ “ಸ್ವಾಮಿ ವಿವೇಕಾನಂದರ 164 ನೇ. ಜಯಂತ್ಯುತ್ಸವ” ದ ಪ್ರಯುಕ್ತ ನಗರದ ಹೊರ ವಲಯದ ಭರಮಸಾಗರ ರಸ್ತೆಯಲ್ಲಿರುವ ಮೈರಾಡ್ ಕಾಲೋನಿಯ ಬುಡಗ ಜಂಗಮ ಅಲೆಮಾರಿ ನಿವಾಸಿಗಳಿಗೆ ಅಗತ್ಯ ವಸ್ತುಗಳು ಮತ್ತು ಸಿಹಿ ವಿತರಿಸಿ ಜಯಂತಿಯನ್ನು ಅರ್ಥ ಪೂರ್ಣವಾಗಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಕೆ.ಆರ್.ಎಸ್ ಪಕ್ಷದ ಮಹೇಶ್, ಸಾಮಾಜಿಕ ಹೋರಾಟಗಾರ ಮುರಳೀ,ಸಮಾಜ ಸೇವಕ ಯತೀಶ್ ಎಂ ಸಿದ್ದಾಪುರ ಕಾರ್ಯಕ್ರಮದ ಕುರಿತು ಮಾತನಾಡಿದರು.

ಕಾರ್ಯಕ್ರಮದಲ್ಲಿ ಬುಡಗ ಜಂಗಮರ ಮುಖಂಡ ಬಲರಾಮ,ಶಿವನಗರದ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದ ಮುಖ್ಯಸ್ಥರಾದ ಶ್ರೀಮತಿ ಜಿ ಯಶೋಧಾ ಪ್ರಕಾಶ್,ಎಚ್ ಲಕ್ಷ್ಮೀದೇವಮ್ಮ, ಪಿ.ಎಸ್.ಮಾಣಿಕ್ಯ ಸತ್ಯನಾರಾಯಣ, ಶಾರದಮ್ಮ, ಸೌಮ್ಯ ಪ್ರಸಾದ್, ವೀರಮ್ಮ, ರಾಘವೇಂದ್ರ ಸೇರಿದಂತೆ ಬುಡಗ ಜಂಗಮ ನಿವಾಸಿಗಳು ಉಪಸ್ಥಿತರಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.
