ಯುವಕರಿಗೆ ಮನರಂಜನೆ, ಸಾಹಿತಿಗಳಿಗೆ ಸಂಸ್ಕೃತಿ ಪಸರಿಸುವ, ದುಡಿಯುವ ವರ್ಗಕ್ಕೆ ಆರೋಗ್ಯ ಶಿಬಿರವೂ – ರಕ್ಷಾ ಕವಚವಾಗಿದೆ ಎಂದ ಶಾಸಕ ಡಾ, ಎನ್.ಟಿ ಶ್ರೀನಿವಾಸ್.
ಕೂಡ್ಲಿಗಿ ಫೆ.01

ಒನಕೆ ಓಬವ್ವನವರ ಉತ್ಸವವೂ ಯುವಕರಿಗೆ ಮನರಂಜನೆ ಉಣ ಬಡಿಸಿದರೇ, ಯುವಕರಿಗೆ ಮನರಂಜನೆ, ಸಾಹಿತಿಗಳಿಗೆ ಸಂಸ್ಕೃತಿ ಪಸರಿಸುವ, ದುಡಿಯುವ ವರ್ಗಕ್ಕೆ ಆರೋಗ್ಯ ಶಿಬಿರವೂ ರಕ್ಷಾ ಕವಚವಾಗಿದೆ ಎಂದು ಶಾಸಕ ಡಾ ಎನ್.ಟಿ ಶ್ರೀನಿವಾಸ್ ಹೇಳಿದರು.
ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಗ್ರಾಮದಲ್ಲಿ 3 ನೇ. ವರ್ಷದ ವೀರ ವನಿತೆ ಒನಕೆ ಓಬವ್ವ ಉತ್ಸವದ ಪ್ರಯುಕ್ತ ಕರ್ನಾಟಕ ಪಬ್ಲಿಕ್ ಶಾಲೆ ಆವರಣದಲ್ಲಿ ಮಾಜಿ ಶಾಸಕ ದಿ.ಎನ್.ಟಿ. ಬೊಮ್ಮಣ್ಣ ನವರ ಸ್ಮರಣಾರ್ಥವಾಗಿ ಅಕ್ಷರ ಐ ಫೌಂಡೇಶನ್ ತುಮಕೂರು ಹಾಗೂ ನುರಿತ ವೈದ್ಯ ಮಿತ್ರರ ಸಹಕಾರದೊಂದಿಗೆ ಆರೋಗ್ಯ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಬರದ ನಾಡಿನ ದುಡಿಯುವ ವರ್ಗ ಮತ್ತು ಹಿರಿಯ ಶ್ರಮ ಜೀವಿಗಳ ಆರೋಗ್ಯ ಸುಧಾರಣೆಗಾಗಿ ದೃಢ ಸಂಕಲ್ಪವನ್ನು ತೊಟ್ಟು ಸಾವಿರಾರು ಜನರಿಗೆ ಸುಮಾರು 15 ಜನಕ್ಕಿಂತ ಹೆಚ್ಚಿನ ವೈದ್ಯರೊಂದಿಗೆ ಬೃಹತ್ ಉಚಿತ ಆರೋಗ್ಯ ಶಿಬಿರವನ್ನು ಯಶಸ್ವಿಯಾಗಿ ನಡೆಸಿ ಕೊಟ್ಟರು.

ಗುಡೇಕೋಟೆ ಭಾಗದ ಜಿಲ್ಲಾ ಪಂಚಾಯತಿ ಮಟ್ಟದಲ್ಲಿ ವಿವಿಧ ಹಳ್ಳಿಗಳಲ್ಲಿ ಬಂದ ಮಹಿಳೆಯರು, ವೃದ್ಧರು, ಯುವಕರು, ಮಕ್ಕಳನ್ನು ತಪಾಸಣೆ ಮಾಡಿ, ಉಚಿತವಾಗಿ ಔಷಧಿಯನ್ನು ವಿತರಿಸಿದರು.
ಎಲ್ಲರೂ ತಮ್ಮ ಆರೋಗ್ಯವನ್ನು ತಪಾಸಣೆ ಮಾಡಿಸಿ ಕೊಂಡ ನಂತರ ಔಷಧಿ, ಮತ್ತು ಸಲಹೆಯನ್ನು ಪಡೆದು, ಊಟ ಮಾಡಿ ತಮ್ಮ ತಮ್ಮ ಊರುಗಳಿಗೆ ತೆರಳಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶ್ರೀ. ಕೃಷ್ಣ, ಉಪಾಧ್ಯಕ್ಷರು, ಸರ್ವ ಸದಸ್ಯರು, ಎನ್.ಟಿ.ಬಿ. ಆಪ್ತರಾದ ಬಂಗಾಳಿ ಓಬಯ್ಯ, ಕಿಟ್ಟಿ ಮೇಷ್ಟ್ರು, ಮುರ್ತು ಸಾಬ್, ಪರಮೇಶ್ವರಪ್ಪ, ವೆಂಕಟೇಶ, ಮಂಜುನಾಥ, ತಿಪ್ಪೇಸ್ವಾಮಿ, ರೇವಣ ಸಿದ್ದಪ್ಪ, ಈರಣ್ಣ, ಊರಿನ ಮುಖಂಡರು, ಸಾರ್ವಜನಿಕರು ಉಪಸ್ಥಿತರಿದ್ದರು.
ಹೋಬಳಿ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಕೆ.ಎಸ್ ವೀರೇಶ್ ಕೆ ಹೊಸಹಳ್ಳಿ

