ಒನಕೆ ಓಬವ್ವಳ ಉತ್ಸವ ಮನಸೂರೆ ಗೊಂಡ – ಒನಕೆ ಓಬವ್ವನ ನಾಟಕ.
ಗುಡೇಕೋಟೆ ಫೆ.02

ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಗ್ರಾಮದ ಒನಕೆ ಓಬವ್ವ ಉತ್ಸವಕ್ಕೆ ಆವರಿಸುತ್ತಿದ್ದಂತೆಯೇ ಅಪಾರ ಸಂಖ್ಯೆಯಲ್ಲಿ ಜಮಾಯಿಸಿದ ಜನ. ಚಿತ್ರದುರ್ಗದ ಪಾಳೇಗಾರ ಮದಕರಿ ನಾಯಕನ ಕೋಟೆಯನ್ನು ಹೈದರ್ ಅಲಿಯ ಸೈನಿಕರಿಂದ ರಕ್ಷಿಸಿದ ವೀರ ವನಿತೆ ಹೋರಾಟದ ಮರು ಸೃಷ್ಟಿಯ ಆಕರ್ಷಕ ಧ್ವನಿ ಮತ್ತು ಬೆಳಕಿನ ಸಂಯೋಜನೆಯಲ್ಲಿ ಮೂಡಿ ಬಂದ ನಾಟಕವನ್ನು ವೀಕ್ಷಿಸಿ, ಪುಳಕಿತ ಗೊಂಡ ಪ್ರೇಕ್ಷಕ ಗಣ.ಗುಡೇಕೋಟೆ ಗ್ರಾಮದಲ್ಲಿ 3 ನೇ. ವರ್ಷದ ಗುಡೇಕೋಟೆ ಒನಕೆ ಓಬವ್ವ ಉತ್ಸವದಲ್ಲಿ ಎರಡನೇ ದಿನದಂದು ಭಾನುವಾರ ರಾತ್ರಿ ವೇದಿಕೆಯಲ್ಲಿ ಒನಕೆ ಓಬವ್ವಳ ನಾಟಕ ಪ್ರದರ್ಶನದಲ್ಲಿ ಕಂಡುಬಂದ ಕ್ಷಣಗಳಿವು. ಹಿರಿಯ ಪತ್ರಕರ್ತ, ಲೇಖಕ ಭೀಮಣ್ಣ ಗಜಾಪುರ ಅವರು ರಚಿಸಿರುವ ಗುಡೋಕೋಟೆಯ ಗಟ್ಟಿಗಿತ್ತಿ “ಒನಕೆ ಓಬವ್ವ” ಪುಸ್ತಕದ ಕಥೆ ರಚನೆಗಾರರು, ಸಾಹಕರ ಮಲ್ಲೇಶ್ ಬೇವೂರು ಕ್ಷೇತ್ರ ಶಿಕ್ಷಣಾಧಿಕಾರಿ, ಸಂಜೆ ವಾಣಿ ವರದಿಗಾರರು ನಾಗರಾಜ್ ಕೂಡ್ಲಿಗಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಲ್ಲಹಳ್ಳಿಯ ಮುಖ್ಯ ಶಿಕ್ಷಕರು ಹಾಗೂ ಸಹ ಶಿಕ್ಷಕರು ಸಹಕಾರದೊಂದಿಗೆ ಟಿ ಕಲ್ಲಹಳ್ಳಿ ಗ್ರಾಮದ ಯುವಕ ಹರೀಶ್ ಜಿಂಕೆ ನಿರ್ದೇಶನದಲ್ಲಿ, ರಚನೆ ಜಯಣ್ಣ, ಸಂಗೀತ ರಾಘವ ಕಮ್ಮಾರ್ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಂದ ಪ್ರಸ್ತುತ ಪಡಿಸಿದ ನಾಟಕವನ್ನು ಗ್ರಾಮೀಣರು ಕಣ್ಣು ಪಿಟಕಿಸದೇ ನೋಡಿದರು.

45 ನಿಮಿಷಗಳ ಕಾಲ ಪ್ರದರ್ಶನ ಗೊಂಡ ನಾಟಕದುದ್ದಕ್ಕೂ ಗುಡೇಕೋಟೆ ಪಾಳೆಗಾರರಲ್ಲಿ ಕಹಳೆಯವರಾಗಿ ಸೇವೆ ಸಲ್ಲಿಸುತ್ತಿದ್ದ ಛಲವಾದಿ ಜನಾಂಗದ ಚೆನ್ನಪ್ಪನ ಮಗಳಾಗಿ ಜನಿಸಿದ ಓಬವ್ವ ಚಿತ್ರದುರ್ಗದ ಪಾಳೇಗಾರರ ಆಸ್ಥಾನದಲ್ಲಿದ್ದ ಮದ್ದ ಹನುಮಪ್ಪನಿಗೆ ಮದುವೆ ಮಾಡಿ ಕೊಡಲಾಯಿತು. ಹೈದರಾಲಿಯಂತಹ ದೊರೆ ಓಬವ್ವಳಂತ ಒಬ್ಬ ಧೀರ ಮಹಿಳೆ ನನ್ನ ಸೈನ್ಯದಲ್ಲಿ ಇದ್ದಿದ್ದರೆ ಚಿತ್ರದುರ್ಗವನ್ನು ಯಾವಾಗಲೋ ನಾನು ಜಯಿಸುತ್ತಿದ್ದೆ ಎಂದು ತನ್ನ ಸೈನಿಕರಿಗೆ ಹೇಳಿದ ರೀತಿ. ಏಳು ಸುತ್ತಿನ ಕೋಟೆಯನ್ನು ಹೈದರಾಲಿ ಕುತಂತ್ರದಿಂದ ವಶ ಪಡಿಸಿಕೊಳ್ಳಲು ಯತ್ನಿಸಿದ್ದ ಸಂಭಾಷಣೆಗಳು ಪ್ರೇಕ್ಷಕರ ಶಿಳ್ಳೆ ಮತ್ತು ಚಪ್ಪಾಳೆಗಳ ಕರತಾಡನಗಳಿಗೆ ಸಾಕ್ಷಿಯಾಯಿತು ಎಂದು ವರದಿಯಾಗಿದೆ.
ಹೋಬಳಿ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಕೆ.ಎಸ್ ವೀರೇಶ್ ಕೆ ಹೊಸಹಳ್ಳಿ

