ಕಿಲ್ಕಾರಿ ಯೋಜನೆ ಮೊಬೖಲ್ ಸೇವೆ ಸದುಪಯೋಗ ಪಡೆಸಿ ಕೊಳ್ಳಲು – ಜಾಗೃತಿ ಅಭಿಯಾನ.
ಅಮೀನಗಡ ಫೆ.04

ಜಿಲ್ಲಾ ಆರೋಗ್ಯಮತ್ತು ಕುಟುಂಬ ಕಲ್ಯಾಣ ಇಲಾಖೆ ಬಾಗಲಕೋಟ ಪ್ರಾಥಮಿಕ ಆರೋಗ್ಯ ಕೇಂದ್ರ ಅಮೀನಗಡದ ಆರೋಗ್ಯ ನಿರೀಕ್ಷಣಾಧಿಕಾರಿ ಎಸ್.ಎಸ್ ಅಂಗಡಿಯವರು, ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಗರ್ಭೀಣಿ ತಾಯಿಂದಿರ ಆರೋಗ್ಯ ಪೋಷಣೆ ಆರೈಕೆ ಮುಖ್ಯವಾಗಿದೆ.
ಪಟ್ಟಣದ ನಾಗಪ್ಪನ ಕಟ್ಟೆ ಆವರಣದಲ್ಲಿ ಆಯೋಜಿಸಿದ ಕಿಲ್ಕಾರಿ ಯೋಜನೆಯು 1600103660 ಮೊಬೈಲ್ ಆಧಾರಿತ ಸೇವೆಯಾಗಿದ್ದು. ಗರ್ಭಿಣಿಯರು ತಾಯಿಂದಿರಿಗೆ, ಮಗುವಿನ ಒಂದು ವರ್ಷದ ವರೆಗೆ ತಿಂಗಳಿಗೊಮ್ಮೆ ಧ್ವನಿ ಸಂದೇಶ ಉಚಿತ ಆರೋಗ್ಯ ಸೇವೆ ಸಲಹೆ ನೀಡುತ್ತೇವೆ. ತಾಯಿ ಮುಗು ಆರೋಗ್ಯ ಪೋಷಣೆ ಆರೈಕೆ ಕುರಿತು ಜಾಗೃತಿ ನೀಡುವುದು ಕರೆ ಬಂದಾಗ ತಪ್ಪದೇ ಸ್ವೀಕರಿಸಿ ಸಲಹೆ ಪಾಲಿಸಲು ಹೇಳಿದರು.

ಯಾವುದೇ ಆರೋಗ್ಯ ಸಮಸ್ಯೆಗಳಿಗೆ 104 ಉಚಿತ ಕರೆಗಳ ಮೂಲಕ ಆರೋಗ್ಯ ಸಲಹೆ ಪಡೆಯಬಹುದು ಎಂದರು. “ಕಿಲ್ಕಾರಿ ಯೋಜನೆ ಆರೋಗ್ಯ ಅರಿವು ಕಾರ್ಯಕ್ರಮದಲ್ಲಿ ಆರೋಗ್ಯ ಸುರಕ್ಷಾಧಿಕಾರಿ ಸಿ.ಎಸ್ ಕೊಲ್ಕಾರ, ಆಶಾ ಕಾರ್ಯಕರ್ತೆಯರು, ಹಾಗೂ ನೇತ್ರಾ ಅಶೋಕ ಚವ್ಹಾಣ, ವಿಮಲಾ ವಿಲಾಸ ಲಮಾಣಿ, ಅನಿತಾ ಲಮಾಣಿ, ದೀಪಾ ಮಡಿವಿಳರ, ರೇಖಾ ನಾಯಕ, ಅಕ್ಷತಾ ಹೂಗಾರ, ಯಲ್ಲವ್ವ ಆಂದೆಲಿ ಗರ್ಭಿಣಿ ತಾಯಿಂದಿರು ಭಾಗವಹಿಸಿದ್ದರು ಎಂದು ವರದಿಯಾಗಿದೆ.

