“ಆರೋಗ್ಯಂ ಇದಂ ಶರೀರಂ”…..

ಜನಸಿದಾಗಿನಿಂದ ದಿನಂಪ್ರತಿ ದೇಹ ದಂಡನೆ
ಮುದ್ದಿ ಸೇವನೆ ವಿಶ್ರಾಂತಿ ಲದ್ದಿ ವಿಸರ್ಜನೆ
ಜೀವನ ಗೆಲುವಿನ ಸೋಪಾನವು
ಜೀವನ ನಿಯಮಿತವಾಗಿರಲು
ಆರೋಗ್ಯಮಯವು
ದಯೆ ಸಹಾಯಗುಣ ಸಮಾಧಾನ ಮೌನ
ಗಳಸಿದಷ್ಟು ಹೆಚ್ಚುವುದು ಆರೋಗ್ಯದ ಬೆಳಕು
ಆತ್ಮದ ಅರಿವೇ ಗುರು ಆರೋಗ್ಯದ ನಿಜ
ಸಿರಿಯು
ದುಶ್ಚಟ ದುರ್ಗುಣ ಅನಾರೋಗ್ಯವು ಸ್ವಮನವ
ಅರಿವುದು ಮುಖ್ಯವು
ಇನ್ನೊಬ್ಬರ ಮನವ ಅರಿವುದು ತನು ಮನ
ದುರ್ಲಭವು
ಹಣ ಆಸ್ತಿ ಬಂಗಾರ ಅಧಿಕತಮ
ರೋಗ ಪೀಡಿತವು
ಶಿಸ್ತು ವ್ಯಾಯಾಮ ಸರಳತೆಯು ಆರೋಗ್ಯದ
ನಿಧಿಯು
ದುಃಖ ಅಸೂಯೆ ಚಿಂತೆ ಪೀಡಿತರು ಗಂಭೀರ
ಕಾಯಿಲೆಯು
ದುರಾಸೆ ಹೊಲಿಕೆಯ ಗುಣ ಆಯುಷ್ಯಕ್ಷಯ
ಒಡಳಾಳದ ರೋಗವು
ಸದಾ ಖುಷಿ ನಗು ಶುಭ ಸಂಭ್ರಮ
ಸಮಯದಲಿರಲು ಉತ್ತಮ ರೋಗ ನಿರೋಧಕ
ಶಕ್ತಿಯ ಆರೈಕೆಯು
ತಾಯಿ ಮಡಿಲು ನಿಜ ಸ್ವರ್ಗವು ನಡೆ ಶುದ್ಧ
ಇರಲು ಮಾತಿನಲಿ ಮಧುರ ಇರಲು ಜೀವನ
ಪರ್ಯಂತ ಆನಂದೋತ್ಸವವು
ದೇಹ ಶುದ್ಧಿ ಇರಲು ಚಿತ್ತ ನಿರ್ಮಲವಿರಲು
ಆಶಯ ಒಳಿತಿರಲು
ಆರೋಗ್ಯಂ ಇದಂ ಶರೀರಂ
ಶ್ರೀಸುರೇಶ ಶಂಕ್ರೆಪ್ಪ ಅಂಗಡಿ
(ದೇಶಂಸು) ದೇವರ ಹಿಪ್ಪರಗಿ

