ಪಶು ಸಂಗೋಪನೆಗೆ ಆದ್ಯತೆ ನೀಡಿ – ಸ್ವರೂಪ್ ಕೊಟ್ಟೂರು.
ಹಾಲಸಾಗರ ಫೆ.04

ಕೃಷಿ ಜೊತೆಗೆ ಕುರಿ, ಕೋಳಿ, ಹಸು, ಮೊಲ ಸಾಕಾಣಿಕೆ ಯಿಂದ ಅನು ದಿನವೂ ಆದಾಯ ನೋಡಬಹುದು. ಒಮ್ಮೊಮ್ಮೆ ಕೃಷಿಯಲ್ಲಿ ಆಗುವ ನಷ್ಟವನ್ನು ಇವುಗಳ ಸಾಕಾಣಿಕೆ ಯಿಂದ ಕಡಿಮೆ ಮಾಡಿ ಕೊಳ್ಳಬಹುದು ಎಂದು ಗುಡೇಕೋಟೆ ಪೊಲೀಸ್ ಠಾಣೆಯ ಹೆಡ್ ಕಾನ್ಸ್ ಟೇಬಲ್, ಲೇಖಕ ಸ್ವರೂಪ್ ಕರೆ ಕೊಟ್ಟೂರು ಎಂದು ಹೇಳಿದರು.ಕೂಡ್ಲಿಗಿ ತಾಲೂಕಿನ ಹಾಲಸಾಗರ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಕೂಡ್ಲಿಗಿ ವತಿಯಿಂದ ಗುಡೇಕೋಟೆ ಒಕ್ಕೂಟದ ರೈತ ಮಹಿಳೆಯರಿಗೆ ಕೃಷಿ ಮತ್ತು ಪಶು ಸಂಗೋಪನೆ ಕುರಿತು ಮಾತನಾಡಿದರು. ಜಾನುವಾರುಗಳನ್ನು ಪಾಲನೆ, ಪೋಷಣೆ ಹಾಗೂ ನಿರ್ವಹಣೆ ಮಾಡುವುದನ್ನು ಕೃಷಿ ಚಟುವಟಿಕೆಯ ಒಂದು ಭಾಗವಾಗಿಸಿ ಕೊಳ್ಳಿ ಎಂದು ಹೇಳಿದರು.
ಇದು ಆರ್ಥಿಕ ಲಾಭದಿಂದಷ್ಟೇ ಮುಖ್ಯವಾಗುವುದಿಲ್ಲ. ಬದಲಾಗಿ ಕೃಷಿಗೂ ಪೂರಕ ಆಗಿರುತ್ತದೆ. ಪಶು ಸಂಗೋಪನೆ ರೈತನ ಬೆನ್ನೆಲುಬು. ಹಾಲು, ಮಾಂಸ, ಮೊಟ್ಟೆ, ಉಣ್ಣೆ. ಇತ್ಯಾದಿಗಳಿಂದ ರೈತನ ಆರೋಗ್ಯ, ಜೀವನ ಮಟ್ಟ ಬಹಳ ಸುಧಾರಿಸುತ್ತದೆ. ಆದರೆ ಇತ್ತೀಚೆಗೆ ಬಹುತೇಕ ರೈತರು ಇದರಿಂದ ವಿಮುಖವಾಗುತ್ತಿದ್ದು, ಇದು ಸಹ ಕೃಷಿಯಲ್ಲಿ ನಷ್ಟ ಅನುಭವಿಸಲು ಬಹುಮುಖ್ಯ ಕಾರಣ ಎಂದರು.
ತಾಲ್ಲೂಕ ಕೃಷಿ ಮೇಲ್ವಿಚಾರಕರಾದ ಮಹಾಲಿಂಗಯ್ಯ ಮಾತನಾಡಿ ಸಿರಿಧಾನ್ಯಗಳನ್ನು ಬೆಳೆಯಿರಿ. ಇವೆಲ್ಲಾ ಬರ ನಿರೋಧಕ ಬೆಳೆಗಳಾಗಿದ್ದು, ಕೃಷಿ ವೆಚ್ಚವೂ ಕನಿಷ್ಟವಾಗಿರುತ್ತದೆ. ಕೃಷಿ ಖರ್ಚುಗಳು ಕಡಿಮೆ ಆದಷ್ಟೂ ರೈತನಿಗೆ ಲಾಭ ಎಂದರು.
ಗುಡೇಕೋಟೆ ವಲಯದ ಮೇಲ್ವಿಚಾರಕರಾದ ಕರಿಯಪ್ಪ ಮಾತನಾಡಿ ಸಂಘದಿಂದ ನೀಡುವ ಸಾಲವನ್ನು ಪಶು ಸಂಗೋಪನೆಗೆ ಬಳಸಿ ಕೊಳ್ಳಿ. ಜೊತೆಗೆ ಪಶು ಸಂಗೋಪನೆಗೆ ನಾವು ಮತ್ತು ಸರಕಾರ ವಿಶೇಷ ಸಾಲ ಸೌಲಭ್ಯ, ಸವಲತ್ತುಗಳನ್ನು ಕೊಡುತ್ತಿದ್ದು, ಅದನ್ನು ಬಳಸಿ ಕೊಂಡು ಜೀವನದಲ್ಲಿ ಮುಂದೆ ಬನ್ನಿ ಎಂದರು.
ಈ ಸಂದರ್ಭದಲ್ಲಿ ಗುಡೇಕೋಟೆ ವಲಯ ಮೇಲ್ವಿಚಾರಕ ಕರಿಯಪ್ಪ, ಒಕ್ಕೂಟದ ಅಧ್ಯಕ್ಷೆ ವನಜಾಕ್ಷಮ್ಮ, ಉಪಾಧ್ಯಕ್ಷೆ ಅಂಜಿನಮ್ಮ, ಸೇವಾ ಪ್ರತಿನಿಧಿ ಸುನೀತ ಸದಸ್ಯರುಗಳಾದ ನಾಗಮ್ಮ , ವೀಣಾ ಮುಂತಾದವರು ಇದ್ದರು ಎಂದು ವರದಿಯಾಗಿದೆ.
ಹೋಬಳಿ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಕೆ.ಎಸ್ ವೀರೇಶ್ ಕೆ. ಹೊಸಹಳ್ಳಿ

