ಆನೆಕಾಲು ರೋಗ ಪ್ರಕರಣದ ವ್ಯಕ್ತಿಯು – ಸಾರ್ವಜನಿಕ ಅಂತರ್ ಕಾಯುವುದು ಸೂಕ್ತ.
ಅಮೀನಗಡ ಫೆ.05

ಆನೆಕಾಲು ರೋಗ ಪ್ರಕರಣದ ಅನ್ನುವ ವ್ಯಕ್ತಿ ಈಗಾಗಲೇ ಇತನು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುತ್ತಾನೆ ಆದರೆ ಆಕಸ್ಮಿಕವಾಗಿ ಈತನಿಗೆ ಕಚ್ಚಿದ ಸೊಳ್ಳೆ ಬೇರೆ ಇನ್ಯಾರಿಗೆ ಕಚ್ಚಿದರೆ ಆನೆಕಾಲು ರೋಗ ಬರುವ ಸಂಭವವಿದೆ ಆದ್ದರಿಂದ ಸಾರ್ವಜನಿಕರು ಅಂತರ್ ಕಾಯುವುದು ಸೂಕ್ತ ಅಂತಾ ಆರೋಗ್ಯ ನಿರೀಕ್ಷಕರಾದ ಎಸ್.ಎಸ್ ಅಂಗಡಿಯವರ ಸ್ಪಷ್ಟವಾಗಿ ಅಭಿಪ್ರಾಯ ಪಟ್ಟಿದ್ದಾರೆ.
ಆನೆಕಾಲು ರೋಗ (Lymphatic Filariasis) ಎಂದರೆ ಸೊಳ್ಳೆಗಳಿಂದ ಹರಡುವ ಒಂದು ಪರಾವಲಂಬಿ ಸೋಂಕು, ಇದು ದುಗ್ಧರಸ ವ್ಯವಸ್ಥೆಯನ್ನು ಹಾಳು ಮಾಡಿ ಕಾಲುಗಳು, ತೋಳುಗಳು ಅಥವಾ ಜನನಾಂಗಗಳಲ್ಲಿ ತೀವ್ರ ಊತ (ಆನೆಯ ಕಾಲಿನಂತೆ ದಪ್ಪ) ಉಂಟು ಮಾಡುತ್ತದೆ, ಚರ್ಮ ಗಟ್ಟಿಯಾಗಿ, ದಪ್ಪನಾಗಿ ಮಾರ್ಪಡುತ್ತದೆ ಇದಕ್ಕೆ ಚಿಕಿತ್ಸೆ ಮತ್ತು ತಡೆಗಟ್ಟುವಿಕೆಗೆ ಸೊಳ್ಳೆ ಕಡಿತದಿಂದ ರಕ್ಷಣೆ ಮತ್ತು ನಿಯಮಿತ ಔಷಧಿ ಅಗತ್ಯವಿದೆ.
ಕಾಲು, ತೋಳು, ಸ್ತನಗಳು ಮತ್ತು ಜನನಾಂಗಗಳಲ್ಲಿ ಊತ.ಚರ್ಮವು ದಪ್ಪವಾಗಿ, ಗಟ್ಟಿಯಾಗಿ ಮಾರ್ಪಡುತ್ತದೆ.బాಧಿತ ಭಾಗಗಳಲ್ಲಿ ನೋವು ಮತ್ತು ಅಸ್ವಸ್ಥತೆ.ಪುನರಾವರ್ತಿತ ಸೋಂಕುಗಳು.

ಹರಡುವಿಕೆ ಕಲುಷಿತ ಸೊಳ್ಳೆಗಳು ಕಚ್ಚುವುದರಿಂದ ಪರಾವಲಂಬಿಗಳನ್ನು ನಾಶ ಪಡಿಸಲು ಆಂಟಿಫಿಲೇರಿಯಲ್ ಡ್ರಗ್ಸ್ (ಉದಾ ಡೈ-ಇಥೈಲ್ ಕಾರ್ಬಮೈಝೇನ್ ಸಿಟ್ರೇಟ್ – DEC). ಸೊಳ್ಳೆ ನಿಯಂತ್ರಣ: ಸೊಳ್ಳೆ ಕಡಿತದಿಂದ ರಕ್ಷಣೆ ಪಡೆಯುವುದು.
ರೋಗ ನಿರ್ವಹಣೆ ಸ್ವಚ್ಛತೆ, ಚರ್ಮದ ಆರೈಕೆ ಮತ್ತು ವ್ಯಾಯಾಮದ ಮೂಲಕ ರೋಗದ ಪ್ರಗತಿಯನ್ನು ತಡೆಯುವುದು.
ಸಾರ್ವಜನಿಕ ಅಭಿಯಾನ ಆರೋಗ್ಯ ಕಾರ್ಯಕರ್ತರು ಮನೆ-ಮನೆಗೆ ತೆರಳಿ ಉಚಿತವಾಗಿ ಔಷಧಿ ನೀಡುವ ಅಭಿಯಾನಗಳು ನಡೆಯುತ್ತವೆ.

