ಕರುಣೆಯ ಕಡಲು ಮಾತೆಯ ಮಡಿಲು – ಸಂತೋಷ ಕುಮಾರ್ ಅಭಿಪ್ರಾಯ.
ಚಳ್ಳಕೆರೆ ಫೆ.09

ಶ್ರೀಮಾತೆ ಶಾರದಾದೇವಿಯವರು ಕರುಣೆಯ ಕಡಲು ಮಾತೆಯ ಮಡಿಲು ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಸ್ವಯಂ ಸೇವಕ ಸಂತೋಷ್ ಕುಮಾರ್ ತಿಳಿಸಿದರು.

ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ ಯುವಕ-ಯುವತಿಯರಿಗಾಗಿ ಆಯೋಜಿಸಿದ್ದ “ವ್ಯಕ್ತಿತ್ವ ನಿರ್ಮಾಣಕಾರಿ ತರಗತಿ ಕಾರ್ಯಕ್ರಮ” ದಲ್ಲಿ ಪಾಲ್ಗೊಂಡ ಅವರು ಶ್ರೀಶಾರದಾದೇವಿಯವರ ಸಂದೇಶಗಳನ್ನು ಒಳಗೊಂಡ “ವಾತ್ಸಲ್ಯತೀರ್ಥ” ಪುಸ್ತಕದ ಕುರಿತಾಗಿ ಉಪನ್ಯಾಸ ನೀಡಿದರು.

ಕಾರ್ಯಕ್ರಮದ ಆರಂಭದಲ್ಲಿ ಪ್ರಾರ್ಥನೆ ಮತ್ತು ಭಜನೆಯನ್ನು ಯತೀಶ್ ಎಂ ಸಿದ್ದಾಪುರ ನಡೆಸಿ ಕೊಟ್ಟರೆ ಪೂಜ್ಯ ಮಾತಾಜೀ ತ್ಯಾಗಮಯೀ ಅವರು ವಿದ್ಯಾರ್ಥಿಗಳಿಗೆ ಧ್ಯಾನಾಭ್ಯಾಸ ಮಾಡಿಸಿದರು.

ದಿವ್ಯತ್ರಯರಿಗೆ ಮಂಗಳಾರತಿ ಮತ್ತು ಸಂನ್ಯಾಸಿ ಗೀತೆಯ ತರಗತಿಯಲ್ಲಿ ಚೇತನ್, ಸುದೀಪ್, ಲೋಹಿತ್ ಕುಮಾರ್, ದಾನೇಶ್ವರಿ, ತಪಸ್ವಿನಿ, ಚಾರ್ಮಿಶ್ರೀ ಲಲಿತಾ, ಮಾನ್ಯ, ಕವಿತಾ ಗುರುಮೂರ್ತಿ ಸೇರಿದಂತೆ ಸಾಕಷ್ಟು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.
