ಮತದಾರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ಪರಿಶೀಲಿಸಿದ – ತಹಶೀಲ್ದಾ‌ರ್ ಅಶೋಕ ಪವಾರ್‌.

ಕವಿತಾಳ ಜು.10

‘ಮತದಾರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಪ್ರತಿಯೊಬ್ಬರೂ ಭಾಗವಹಿಸ ಬೇಕು. ಮತ ಪಟ್ಟಿಗೆ ಹೊಸದಾಗಿ ಹೆಸರು ಸೇರ್ಪಡೆ ಮತ್ತು ತಿದ್ದುಪಡಿ ಮಾಡ ಬೇಕಿದ್ದಲ್ಲಿ ಅಗತ್ಯ ದಾಖಲೆ ನೀಡಿ ಸಹಕರಿಸ ಬೇಕು’ ಎಂದು ತಹಶೀಲ್ದಾ‌ರ್ ಅಶೋಕ ಪವಾರ್ ಹೇಳಿದರು.

ಸಮೀಪದ ಬಾಗಲವಾಡ ಗ್ರಾಮಕ್ಕೆ ಭೇಟಿ ನೀಡಿದ ಅವರು, ಎಸ್‌ಐಆ‌ರ್ ಪ್ರಕ್ರಿಯೆ ಪ್ರಗತಿ ಕುರಿತು ಪರಿಶೀಲನೆ ಮಾಡಿದರು. ಕೆಲವು ಮನೆಗಳಿಗೆ ಭೇಟಿ ನೀಡಿ ಮಾಹಿತಿ ಪಡೆದರು. ಅರ್ಹ ಮತದಾರರು ಮತ ಪಟ್ಟಿಯಿಂದ ಹೊರ ಗುಳಿಯದಂತೆ ಎಚ್ಚರ ವಹಿಸುವಂತೆ ಬಿಎಲ್‌ಒಗಳಿಗೆ ಸೂಚಿಸಿದರು.

ಉಪ ತಹಶೀಲ್ದಾ‌ರ್ ರಾಜಕುಮಾರ ಸೇರಿದಂತೆ ಕವಿತಾ, ಮಹೇಶ, ಶಾಲೀಮಾ, ಅಂಬಮ್ಮ, ಸರಸ್ವತಿ ಮತ್ತು ಈರಮ್ಮ ಉಪಸ್ಥಿತರಿದ್ದರು.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನೆಲ್: ಹುಸೇನ್ ಭಾಷಾ ನಕ್ಕುಂದಿ ಮಾನ್ವಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button