B.Ed ಫಲಿತಾಂಶ ಪ್ರಕಟ – ಬಾದಾಮಿ ಕಾಳಿದಾಸ ಬಿ.ಇಡಿ ವಿದ್ಯಾಸಂಸ್ಥೆಯ ಪ್ರಶಿಕ್ಷಣಾರ್ಥಿಗಳ ಉತ್ತಮ ಸಾಧನೆ….!!

ಬಾದಾಮಿ

ಜಮಖಂಡಿಯ 2025-26 ನೇ ಸಾಲಿನ ಬಿ.ಇಡಿ ಪ್ರಥಮ ಹಾಗೂ ತೃತೀಯ ಸೆಮಿಸ್ಟ‌ರ್ ಫಲಿತಾಂಶ ಪ್ರಕಟವಾಗಿದ್ದು, ಇದರಲ್ಲಿ ಬಾದಾಮಿಯ ಪ್ರತಿಷ್ಟಿತ B.Ed ವಿದ್ಯಾಸಂಸ್ಥೆ ಶ್ರೀ ಕಾಳಿದಾಸ ಶಿಕ್ಷಣ ಸಂಸ್ಥೆಯ ಶ್ರೀ ಕಾಳಿದಾಸ ಬಿ.ಇಡಿ ಪ್ರಥಮ ಮತ್ತು ತೃತೀಯ ಸಮಸ್ಟರ್‌ನ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿದ್ದಾರೆ.

ತೃತೀಯ ಸೆಮೆಸ್ಟ‌ರ್ ಪ್ರಶಿಕ್ಷಣಾರ್ಥಿಗಳು :

ಪ್ರಥಮ ಸ್ಥಾನ -ಅಯ್ಯಪ್ಪ ಕಂಬಾರ 600 ಕ್ಕೆ 528 (88%)

ದ್ವಿತೀಯ ಸ್ಥಾನ -ಅರ್ಪಿತಾ ಗಿರಿತಿಮ್ಮಣ್ಣವರ 600 ಕ್ಕೆ 524 (87.3%),

ತೃತೀಯ ಸ್ಥಾನ -ಶ್ರೀನಿಧಿ ಅಂಬಿಗೇರ 600 ಕ್ಕೆ 522 (87%).

ಒಟ್ಟು 100 ಪ್ರಶಿಕ್ಷಣಾರ್ಥಿಗಳಲ್ಲಿ 92 ಪ್ರಶಿಕ್ಷಣಾರ್ಥಿಗಳು ಡಿಸ್ಟಿಂಕ್ಷನ್‌ನಲ್ಲಿ ಪಾಸಾಗಿರುತ್ತಾರೆ.

ಪ್ರಥಮ ಸೆಮೆಸ್ಟರ್ ಪ್ರಶಿಕ್ಷಣಾರ್ಥಿಗಳು :

▶️Youtube Link

https://youtube.com/@sknewschannel2022?si=cK_uvFPl5YCfdbqZ

ಪ್ರಥಮ ಸ್ಥಾನ – ಲಕ್ಷ್ಮೀ ಹಲಗತ್ತಿ 600 ಕ್ಕೆ 522 (87%)

ದ್ವಿತೀಯ ಸ್ಥಾನ – ಯಲ್ಲನಗೌಡ ತೋಳಮಟ್ಟಿ 600 ಕ್ಕೆ 520 (86.6%)

ತೃತೀಯ ಸ್ಥಾನ -ಜ್ಯೋತಿ ಕಮತಗಿ 600 ಕ್ಕೆ 515 (85.8%).

ಸೆಮೆಸ್ಟರ್‌ನಲ್ಲಿ 91 ಪ್ರಶಿಕ್ಷಣಾರ್ಥಿಗಳಲ್ಲಿ 75 ಪ್ರಶಿಕ್ಷಣಾರ್ಥಿಗಳು ಡಿಸಿಂಕ್ಷನ್‌ನಲ್ಲಿ ಪಾಸಾಗಿರುತ್ತಾರೆ. ಶ್ರೀ ಕಾಳಿದಾಸ ಬಿ.ಇಡಿ (ಶಿಕ್ಷಣ) ಮಹಾವಿದ್ಯಾಲಯ, ಬಾದಾಮಿಯ ಒಟ್ಟು 191 ಪ್ರಶಿಕ್ಷಣಾರ್ಥಿಗಳಲ್ಲಿ 167 ಡಿಸ್ಟಿಂಕ್ಷನ್‌ನಲ್ಲಿ ಪಾಸಾಗಿ ಉತ್ತಮ ಸಾಧನೆ ಮಾಡಿದ್ದಾರೆ.ಅದೇ ರೀತಿ ಇನ್ನುಳಿದ ಎಲ್ಲಾ ಪ್ರಶಿಕ್ಷಣಾರ್ಥಿಗಳು ಪ್ರಥಮ ದರ್ಜೆಯಲ್ಲಿ ಪಾಸಾಗಿರುವುದು ಹೆಮ್ಮೆಯ ಸಂಗತಿ.

ಉತ್ತಮ ಫಲಿತಾಂಶ ಹೊಂದಿದ ಎಲ್ಲಾ ವಿದ್ಯಾರ್ಥಿಗಳಿಗೆ ಮಾಜಿ ಸಚಿವ ಹಾಗೂ ಸಂಸ್ಥೆಯ ಅಧ್ಯಕ್ಷ ಬಿ.ಬಿ.ಚಿಮ್ಮನಕಟ್ಟಿ ಹಾಗೂ ಶಾಸಕರು, ಸಂಸ್ಥೆಯ ಕಾರ್ಯದರ್ಶಿ ಭೀಮಸೇನ ಚಿಮ್ಮನಕಟ್ಟಿ, ಹಾಗೂ ಪ್ರಾಚಾರ್ಯೆ ಮಲ್ಲಿಕಾ ಗಟ್ಟಿ ಹಾಗೂ ಸಿಬ್ಬಂದಿ ವರ್ಗದವರು ಅಭಿನಂದನೆ ಸಲ್ಲಿಸಿದ್ದಾರೆ. ಹಾಗೂ ಎಲ್ಲಾ ವಿದ್ಯಾರ್ಥಿಗಳು ಉತ್ತಮ ಶಿಕ್ಷಕರಾಗಿ ಹೊರಹೊಮ್ಮಲಿ ಎಂದು ಹಾರೈಸಿದ್ದಾರೆ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button