ಭೌತಿಕ ಪ್ರಪಂಚಕ್ಕೆ ಅಂಟಿ ಕೊಳ್ಳದೆ ಭಗವಾನ್ ವಿಷ್ಣುವಿನ ಸಾನಿಧ್ಯ ಪಡೆಯಬೇಕು – ಪುಷ್ಪಲತಾ.ವಿಜಯ್.
ಚಳ್ಳಕೆರೆ ಜು.10

ಮನುಷ್ಯ ಹೆಚ್ಚು ಭೌತಿಕ ಪ್ರಪಂಚಕ್ಕೆ ಅಂಟಿ ಕೊಳ್ಳದೆ ಯಾರು ಇರದ ಮತ್ತೆ ಹಿಂತಿರುಗಿ ಬಾರದ ಭಗವಾನ್ ಮಹಾವಿಷ್ಣುವಿನ ಸನ್ನಿಧಾನವನ್ನು ತಲುಪಬೇಕು ಎಂದು ಚಳ್ಳಕೆರೆಯ ತ್ಯಾಗರಾಜ ನಗರದ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದ ಸದಸ್ಯೆ ಹಾಗೂ ನಿವೃತ್ತ ಶಿಕ್ಷಕಿ ಶ್ರೀಮತಿ ಪುಷ್ಪಲತಾ ವಿಜಯ್ ತಿಳಿಸಿದರು.

ನಗರದ ತ್ಯಾಗರಾಜ ನಗರದ ಸದ್ಭಕ್ತರಾದ ಶ್ರೀಮತಿ ನಂಜಮ್ಮ ಕೆಂಚಪ್ಪ ಶಿಕ್ಷಕರ ಸವಿತಾ ನಿವಾಸದಲ್ಲಿ ಆಯೋಜಿಸಿದ್ದ ವಾರದ ವಿಶೇಷ ಸತ್ಸಂಗ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಅವರು “ಶ್ರೀಮದ್ ಭಗವದ್ಗೀತೆಯ ಪುರುಷೋತ್ತಮ ಯೋಗದ ನಾಲ್ಕನೇ ಶ್ಲೋಕದ ಪಠಣ-ಅರ್ಥ- ವ್ಯಾಖ್ಯಾನ ಮಾಡುತ್ತ ಮಾತನಾಡಿದರು.

ಸತ್ಸಂಗದಲ್ಲಿ ಎಚ್ ಲಕ್ಷ್ಮೀದೇವಮ್ಮ, ನಂಜಮ್ಮ ಕೆಂಚಪ್ಪ, ಎಂ ಲಕ್ಷ್ಮೀದೇವಮ್ಮ, ಸೋಮಗುದ್ದು ಸಿದ್ದಮ್ಮ, ಯತೀಶ್ ಎಂ ಸಿದ್ದಾಪುರ, ಸರಸ್ವತಿ, ಸುನೀತಾ ಗೋಪಾಲಕೃಷ್ಣ, ಮಾಕಂಸ್ ಲಕ್ಷ್ಮೀ ಬಾಲಾಜೀ, ನೇತ್ರಾ ಮಂಜುನಾಥ, ಪ್ರಮೀಳಾ ಜಗದೀಶ್, ಪ್ರೇಮಾ, ಅನುಸೂಯ, ರಾಘವೇಂದ್ರ, ಗೀತಾ ಸುಂದರೇಶ್ ದೀಕ್ಷಿತ್ ಹಾಜರಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

