ರಜಪೂತ ಸಮಾಜಕ್ಕೆ ತನ್ನದೇ ಆದ ಇತಿಹಾಸವಿದೆ – ಶಾಸಕರು ಅಶೋಕ ಮನಗೂಳಿ ಅಭಿಮತ.
ಆಲಮೇಲ ಜು.12

ಪಟ್ಟಣದಲ್ಲಿ ಜುಲೈ 12 – ರವಿವಾರ ರಂದು 2025-26 ನೇ. ಸಾಲಿನ ಮಾನ್ಯ ಮುಖ್ಯಮಂತ್ರಿಯವರ ಮೂಲ ಸೌಕರ್ಯ ಅಭಿವೃದ್ಧಿ ಯೋಜನೆ ಅಡಿಯಲ್ಲಿ ವಿಜಯಪುರ ಜಿಲ್ಲೆಯ ಅಲಮೇಲ ಪಟ್ಟಣದಲ್ಲಿ ಕಾಯಿಪಲ್ಲೆ ಮಾರುಕಟ್ಟೆ ನಿರ್ಮಾಣ ಕಾಮಗಾರಿಯನ್ನು ಅಂದಾಜು ಮೊತ್ತ 50 ಲಕ್ಷ ರೂಪಾಯಿ ಹಾಗೂ ರಜಪೂತ ಸಮಾಜದ ದೇವಸ್ಥಾನದ ಹತ್ತಿರ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಅಂದಾಜು 25. ಲಕ್ಷದ ವೆಚ್ಚದ ಭೂಮಿ ಪೂಜೆಯನ್ನು ಸಿಂದಗಿ ಶಾಸಕ ಅಶೋಕ ಮನಗೂಳಿ ನೆರವೇರಿಸಿ ಮಾತನಾಡಿ.
ಆಲಮೇಲ ಪಟ್ಟಣಕ್ಕೆ ಹಳ್ಳಿಯಿಂದ ಬರುವ ರೈತರಿಗೆ ಹಾಗೂ ಕಾಯಿಪಲ್ಲೆ ವ್ಯಾಪಾರಸ್ಥರಿಗೆ ಮೂಲಭೂತ ಸೌಕರ್ಯಕಾಗಿ ಸುಮಾರು 50 ಲಕ್ಷ ರೂಪಾಯಿ ವೆಚ್ಚದಲ್ಲಿ ಸುಂದರವಾದ ಮಾರುಕಟ್ಟೆ ನಿರ್ಮಾಣವಾಗಲು ನಿಮ್ಮೆಲ್ಲರ ಸಹಕಾರ ಬಹಳ ಮುಖ್ಯವಾಗಿದ ಎಂದು ಹೇಳಿದರು.

ನಂತರ ರಜಪೂತ ಸಮಾಜದ ಸಮುದಾಯ ಭವನದ ಭೂಮಿ ಪೂಜೆ ನೆರವೇರಿಸಿ ಮಾತನಾಡಿ. ಸ್ವಾತಂತ್ರಕಾಗಿ ತಮ್ಮ ತ್ಯಾಗ ಬಲಿದಾನಗಳ ಮೂಲಕ ಈ ದೇಶಕ್ಕೆ ಸ್ವಾತಂತ್ರ್ಯ ಕೊಡಿಸಿರುವಂತ ರಜಪೂತ ಸಮಾಜದ ಸೇವೆಯಲ್ಲಿ ನಾವೆಲ್ಲರೂ ಭಾಗಿಯಾಗಿದವು.
ರಜಪೂತ ಸಮಾಜಕ್ಕೆ ತನ್ನದೇ ಆದ ದೀರ್ಘಕಾಲದ ಹೊಂದಿರುವಂತೆ ಒಂದು ಇತಿಹಾಸವಿದೆ ಈ ಭಾರತ ದೇಶದ ಸ್ವತಂತ್ರರ ಗೋಸ್ಕರ ಈ ಸಮಾಜದ ಸಾಕಷ್ಟು ಜನ ಹಿರಿಯರು ಯುವಕರು ತ್ಯಾಗ ಬಲಿದಾನಗಳ ಮೂಲಕ ಈ ದೇಶಕ್ಕೆ ಸ್ವಾತಂತ್ರ ಕುಡಿಸುವ ನಿಟ್ಟಿನಲ್ಲಿ ಅವರ ನೆನಪುಗಳು ಈ ಸಂದರ್ಭದಲ್ಲಿ ನೆನಪಿಸಿ ಕೊಳ್ಳ ಬೇಕಾಗಿದೆ ಎಂದು ಹೇಳಿದರು.

ಎಪಿಎಂಸಿ ಮಾಜಿ ಅಧ್ಯಕ್ಷ ಪ್ರಭು ವಾಲಿಕಾರ ಮಾತನಾಡಿ ನಮ್ಮ ಶಾಸಕರು ಯಾವುದೇ ಸಮಾಜದವರಾಗಿರಲಿ ಎಲ್ಲಾ ಸಮಾಜದವರಾಗಲ್ಲಿ ಯಾವುದೇ ಪಕ್ಷ ಪಾತ ಇಲ್ಲದೆ ಸರಕಾರದಿಂದ ಸಿಗುವ ಎಲ್ಲಾ ಸೌಲಭ್ಯಗಳು ಕುಡುಸುವ ನಿಟ್ಟಿನಲ್ಲಿ ಪ್ರಮಾಣಿಕ ಪ್ರಯತ್ನ ಮಾಡುತ್ತಿರುವುದು ನಮಗೆಲ್ಲ ಹೆಮ್ಮೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ಸಾಧಿಕ್ ಸುಂಬಡ. ಹಾಗೂ ರಮೇಶ ಬಂಟನೂರ.ಶ್ರೀಶೈಲ್ ಸಿಂಗ್ ರಜಪೂತ ಪಟ್ಟಣ ಪಂಚಾಯಿತಿ ಸದಸ್ಯರು ಮಾತನಾಡಿದರು.
ಶ್ರೀಶೈಲಯ್ಯ ಸ್ವಾಮಿ ಅಲ್ಲೋಳಿ ಮಠ. ಎನ್ ಆರ್ ತಿವಾರಿ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರು ಮೋರಟಗಿ. ಬಸವರಾಜ್ ಬಾಗೆವಾಡಿ ಎಪಿಎಂಸಿ ಅಧ್ಯಕ್ಷರು. ಈರಣ್ಣ ಕಲ್ಲೂರ ಪಟ್ಟಣ ಪಂಚಾಯಿತಿ ಸದಸ್ಯರು. ಚಂದು ಹಳಿಮನಿ. ಪ್ರಶಾಂತ್ ನಾಶಿ. ಗೋಲ್ಲಾಳ ಉಪ್ಪಿನ. ಮುದುಕಪ್ಪ ಜಮಾದಾರ. ಸೋಮು ಮೇಲಿನಮನಿ. ಮಾದೇವಿ ಬಂಡಿ ವಡ್ಡರ. ಹಾಗೂ ಗ್ರಾಮದ ಹಿರಿಯರು ಯುವಕರು ಮಹಿಳೆಯರು ಪಕ್ಷದ ಎಲ್ಲಾ ಮುಖಂಡರು ಭಾಗವಹಿಸಿದರು. ನಿರೂಪಣೆ ಅಪ್ಪು ಶೆಟ್ಟಿ ಮಾಡಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನೆಲ್: ರೇವಣಸಿದ್ದಯ್ಯ ಹಿರೇಮಠ ಆಲಮೇಲ
