💥ಬ್ಲ್ಯಾಕ್ ಮೇಲ್. ಸುಲಿಗೆ ಮತ್ತು ವಂಚನೆ, ಕಾನೂನಿನ ಸಂಕೋಲೆಗೆ ಸಿಲುಕಿದ – ‘ಕಿಲಾಡಿ’ ಜೀನತ್ ನ ಕರಾಳ ಸಾಮ್ರಾಜ್ಯ..!💥
ಉಡುಪಿ ಜು.11

ಧಾರ್ಮಿಕ ಮತ್ತು ಸಾಂಸ್ಕೃತಿಕ ನೆಲೆ ಉಡುಪಿಯಲ್ಲಿ, ಕಾನೂನು ಬಾಹಿರ ಚಟುವಟಿಕೆಗಳ ಮೂಲಕ ಸಮಾಜದ ಶಾಂತಿಗೆ ಭಂಗ ತರುತ್ತಿದ್ದ ಜೀನತ್ ಇಬ್ರಾಹಿಂ ಅಲಿಯಾಸ್ ಜೀನತ್ ಸಲಾಂಳನ್ನು ಪೊಲೀಸರು ಕೊನೆಗೂ ಬಂಧಿಸಿದ್ದಾರೆ.
ಕೇವಲ ಹಣಕ್ಕಾಗಿ ಮಾತ್ರವಲ್ಲದೆ, ವ್ಯಕ್ತಿಗಳ ಘನತೆಗೆ ಧಕ್ಕೆ ತರುವ ಮೂಲಕ ಕೋಟ್ಯಂತರ ರೂ. ವಸೂಲಿ ಮಾಡುತ್ತಿದ್ದ ಈಕೆಯ ‘ಹನಿಟ್ರ್ಯಾಪ್’ ಜಾಲದ ವಿರುದ್ಧ ಇದೀಗ ಕಾನೂನಿನ ಕುಣಿಕೆ ಬಿಗಿ ಯಾಗಿದೆ.
🔍ಕಾನೂನಾತ್ಮಕ ತನಿಖೆಯ ಮುಖ್ಯಾಂಶಗಳು:-
ಅಪರಾಧದ ಸ್ವರೂಪ:-
ಐಪಿಸಿ ಸೆಕ್ಷನ್‌ಗಳಡಿ ವಂಚನೆ, ಬ್ಲ್ಯಾಕ್ ಮೇಲ್, ಕ್ರಿಮಿನಲ್ ಬೆದರಿಕೆ ಮತ್ತು ವೈಯಕ್ತಿಕ ಗೌರವಕ್ಕೆ ಧಕ್ಕೆ ತಂದಿರುವ ಗಂಭೀರ ಆರೋಪಗಳು ಈಕೆಯ ಮೇಲಿವೆ.
ವ್ಯವಸ್ಥಿತ ಹನಿಟ್ರ್ಯಾಪ್:-
ಸಾಲದ ಆಮಿಷ ವೊಡ್ಡಿ ಸಂತ್ರಸ್ತರನ್ನು ಕರೆಸಿ ಕೊಂಡು, ಅಸಭ್ಯ ಫೋಟೋ/ವಿಡಿಯೋಗಳನ್ನು ಸೆರೆ ಹಿಡಿದು,
ಆ ಮೂಲಕ ಜೀವಮಾನ ಪರ್ಯಂತ ಸುಲಿಗೆಗೆ ಇಳಿಯುವುದು ಈಕೆಯ ಕ್ರಿಮಿನಲ್ ಶೈಲಿ.
ಅಧಿಕಾರ ದುರ್ಬಳಕೆ:-
ಪ್ರಭಾವಿ ವ್ಯಕ್ತಿಗಳು ಮತ್ತು ಅಧಿಕಾರಿಗಳೊಂದಿಗೆ ಫೋಟೋ ತೆಗೆಸಿ ಕೊಂಡು, ಆ ಮೂಲಕ ಸಮಾಜದ ಅಮಾಯಕರಿಗೆ ತಾನು ಕಾನೂನು ಬಾಹಿರವಾಗಿ ಬಲಶಾಲಿ ಎಂದು ಬಿಂಬಿಸುವ ಪ್ರಯತ್ನ ನಡೆಸಿದ್ದಳು.
ಸಾಕ್ಷ್ಯಾಧಾರಗಳ ಸಂಗ್ರಹ:-
ಆರೋಪಿತಳಿಂದ ವಶಪಡಿಸಿ ಕೊಳ್ಳಲಾದ ಪೆನ್ ಡ್ರೈವ್ ನಲ್ಲಿನ ಡಿಜಿಟಲ್ ಸಾಕ್ಷ್ಯಗಳು, ಬ್ಲ್ಯಾಕ್ ಮೇಲ್ ದಂಧೆಯ ಭೀಕರತೆಯನ್ನು ತೆರೆದಿಟ್ಟಿವೆ.
🚫ಸಾರ್ವಜನಿಕರಿಗೆ ಕಾನೂನಾತ್ಮಕ ಎಚ್ಚರಿಕೆ:-
ಇಂತಹ ವಂಚಕರು ನಿಮ್ಮ ಸಣ್ಣ ದೌರ್ಬಲ್ಯವನ್ನೇ ಬಂಡವಾಳವನ್ನಾಗಿಸಿ ಕೊಳ್ಳುತ್ತಾರೆ. ಯಾವುದೇ ಅಪರಿಚಿತ ವ್ಯಕ್ತಿಯು ನಿಮ್ಮ ಗೌಪ್ಯತೆಯನ್ನು ಪ್ರಶ್ನಿಸುವಾಗ ಅಥವಾ ಹಣಕ್ಕೆ ಬೇಡಿಕೆ ಇಡುವಾಗ.
ಭಯ ಪಡಬೇಡಿ:-

ಬ್ಲ್ಯಾಕ್ ಮೇಲರ್‌ಗಳ ಬೆದರಿಕೆಗೆ ಮಣಿದು ಹಣ ನೀಡುವುದು ಕಾನೂನಾತ್ಮಕವಾಗಿ ಮತ್ತಷ್ಟು ತಪ್ಪು ಮತ್ತು ದುಬಾರಿ ಯಾಗುತ್ತದೆ.
ದೂರು ನೀಡಿ:-
ನಿಮ್ಮ ಗೌಪ್ಯತೆಯನ್ನು ಕಾಪಾಡಿ ಕೊಳ್ಳುವುದು ಕಾನೂನಿನ ಕರ್ತವ್ಯ. ಧೈರ್ಯದಿಂದ ಉಡುಪಿ ನಗರ ಪೊಲೀಸ್ ಠಾಣೆಗೆ ಅಥವಾ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿ.
ಸಹಕಾರ ನೀಡಿ:-
ಈಕೆ ಮತ್ತು ಆಕೆಯ ಸಹಚರರ ವಿರುದ್ಧ ಸಾಕ್ಷ್ಯಾಧಾರವಿದ್ದರೆ ಪೊಲೀಸರಿಗೆ ಒದಗಿಸಿ, ಸಮಾಜದ ಸ್ವಾಸ್ಥ್ಯ ಕಾಪಾಡಲು ಸಹಕರಿಸಿ.
🚨ಪೊಲೀಸರ ಭರವಸೆ:-
“ನಿಮ್ಮ ಗುರುತನ್ನು ಗೌಪ್ಯ ವಾಗಿಡಲಾಗುವುದು!” ಉಡುಪಿ ಪೊಲೀಸರು ಸಂತ್ರಸ್ತರಿಗೆ ಮುಕ್ತ ಆಹ್ವಾನ ನೀಡಿದ್ದಾರೆ, “ಯಾರೇ ಆಗಿರಲಿ, ಈ ಮಹಿಳೆಯಿಂದ ಮೋಸ ಹೋಗಿದ್ದರೆ ಅಥವಾ ಬ್ಲ್ಯಾಕ್ ಮೇಲ್‌ಗೆ ಒಳಗಾಗಿದ್ದರೆ, ತಕ್ಷಣವೇ ಪೊಲೀಸರನ್ನು ಸಂಪರ್ಕಿಸಿ.
ಸಂತ್ರಸ್ತರ ಹೆಸರು ಮತ್ತು ವೈಯಕ್ತಿಕ ವಿವರಗಳನ್ನು ಅತ್ಯಂತ ಗೌಪ್ಯ ವಾಗಿಡಲಾಗುವುದು. ಕಾನೂನು ನಿಮ್ಮ ರಕ್ಷಣೆಗೆ ಸದಾ ಸಿದ್ಧವಿದೆ.”
⚠️ ಎಚ್ಚರಿಕೆ::-
ಈ ಪ್ರಕರಣವು ಕಾನೂನಾತ್ಮಕವಾಗಿ ಗಂಭೀರ ಸ್ವರೂಪದ್ದಾಗಿದೆ. ಯಾವುದೇ ವ್ಯಕ್ತಿ ಈ ಬ್ಲ್ಯಾಕ್ ಮೇಲ್ ಮಾಫಿಯಾದಲ್ಲಿ ಸಿಲುಕಿದ್ದರೆ, ಮೌನವೇ ನಿಮ್ಮ ಪಾಲಿನ ಮೃತ್ಯುವಾಗಬಹುದು. ತಕ್ಷಣವೇ ಕಾನೂನು ಕ್ರಮದ ಮೊರೆ ಹೋಗಿ..!
ವರದಿ:ಆರತಿ.ಗಿಳಿಯಾರು.ಉಡುಪಿ
ಉಡುಪಿ ಸಮಾಜದ ಹಿತ ದೃಷ್ಟಿಯಿಂದ ಹಾಗೂ ಜಾಗೃತಿಗಾಗಿ ಈ ವರದಿಯನ್ನು ಶೇರ್ ಮಾಡಿ.📢
