ಗ್ರಾಮ ಪಂಚಾಯಿತಿ ಮಟ್ಟದ ಎಸ್.ಐ.ಆರ್ – ಜಾಗೃತಿ ಅಭಿಯಾನಕ್ಕೆ ಬಿಜೆಪಿ ಚಾಲನೆ.

ನೀರಮಾನ್ವಿ ಜು.11

ಮಾನ್ವಿ ತಾಲೂಕಿನ ನೀರಮಾನ್ವಿ ಗ್ರಾಮದ ಶ್ರೀ ರೇಣುಕಾ ಯಲ್ಲಮ್ಮ ದೇವಿ ದೇವಸ್ಥಾನದಲ್ಲಿ ಶ್ರೀ ರೇಣುಕಾ ಯಲ್ಲಮ್ಮ ದೇವಿಗೆ ವಿಶೇಷವಾದ ಪೂಜೆಯನ್ನು ಸಲ್ಲಿಸುವ ಮೂಲಕ ಮಾಜಿ ಸಂಸದ ಬಿ.ವಿ.ನಾಯಕ ರವರು ಮಾನ್ವಿ ಮಂಡಲ ಬಿಜೆಪಿ ಪಕ್ಷದಿಂದ ಹಮ್ಮಿಕೊಂಡ ಗ್ರಾಮ ಪಂಚಾಯತಿ ಮಟ್ಟದ ಎಸ್.ಐ.ಆರ್ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿದರು.

ನಂತರ ಗ್ರಾಮದ ಶ್ರೀ ಸಿದ್ದಾರೂಢ ಮಠದಲ್ಲಿ ನೀರಮಾನ್ವಿ ಗ್ರಾಮ ಪಂಚಾಯಿತಿ ಮಟ್ಟದ ಎಸ್.ಐ.ಆರ್. ಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿ ಪ್ರಜಾಪ್ರಭುತ್ವ ವ್ಯವಸ್ಥೆಯ ಮೂಲ ಆಧಾರ ಸ್ಥಂಭಗಳು ಮತದಾರರು ಸಂವಿಧಾನವು 18 ವರ್ಷ ತುಂಬಿದ ಪ್ರತಿಯೊಬ್ಬ ಪ್ರಜೆಗೂ ಕೂಡ ಮತದಾನದ ಹಕ್ಕನ್ನು ನೀಡಿದೆ ಮತದಾನ ಅತ್ಯಂತ ಪವಿತ್ರವಾದ ಅಮೂಲ್ಯವಾದ ದಾನವಾಗಿದು ಅಂತಹ ಮತದಾನವನ್ನು ನೀವು ಉಳಿಸಿಕೊಳ್ಳಬೇಕಾದಲ್ಲಿ ನೀವು ಕಡ್ಡಾಯವಾಗಿ ಸಮಗ್ರ ಮತ ಪರಿಷ್ಕರಣೆಯಲ್ಲಿ ಭಾಗವಹಿಸಿ ನೊಂದಾಯಿಸಿಕೊಳ್ಳುವ ಮೂಲಕ ನಿಮ್ಮ ಮತದಾನದ ಹಕ್ಕನ್ನು ಉಳಿಸಿಕೊಳ್ಳಿ ಯಾರು ಕೂಡ ಮತದಾನದ ಹಕ್ಕಿನಿಂದ ವಂಚಿತರಾಗದಂತೆ ಬಿಜೆಪಿ ಪಕ್ಷದ ಬಿಎಲ್.ಎ-2ಗಳು ತಮ್ಮ ಬೂತ್ ವ್ಯಾಪ್ತಿಯ ಮತದಾರರಲ್ಲಿ ಜಾಗೃತಿ ಮೂಡಿಸಿದಲ್ಲಿ ಮಾತ್ರ ಪವಿತ್ರವಾದ ಮತದಾನ ಸಾಧ್ಯವಾಗುತ್ತದೆ ಪ್ರಜಾಪ್ರಭುತ್ವ ವ್ಯವಸ್ಥೆ ಗಟ್ಟಿಯಾಗುತ್ತದೆ. ನೈಜ ಹಾಗೂ ಅರ್ಹ ಮತದಾರರು ಮತ ಚಲಾಯಿಸಿದಾಗ ಮಾತ್ರ ಉತ್ತಮ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಮಾಜಿ ಶಾಸಕರಾದ ಬಸನಗೌಡ ಮಾತನಾಡಿ ಎಸ್‌.ಐ.ಆರ್ ಪ್ರಕ್ರಿಯೆಯಿಂದ ಮತದಾರರ ಪಟ್ಟಿಯಲ್ಲಿ ಅರ್ಹ ಮತದಾರರ ಹೆಸರಷ್ಟೇ ಉಳಿಯುತ್ತದೆ ಹಾಗೂ ಚುನಾವಣೆ ಪ್ರಕ್ರಿಯೆಯಲ್ಲಿ ಪವಿತ್ರತೆಯನ್ನು ಕಾಪಾಡುವುದಕ್ಕೆ ಸಾಧ್ಯವಾಗುತ್ತದೆ. ಎಸ್.ಐ.ಆರ್ ಪ್ರಕ್ರಿಯೆಯು ಯಾವುದೇ ಧರ್ಮ, ಜಾತಿ ಅಥವಾ ಸಮುದಾಯದ ವಿರುದ್ಧದ ಕ್ರಮವಲ್ಲ, ಇದು ಭಾರತೀಯ ಸಂವಿಧಾನದ ಚೌಕಟ್ಟಿನೊಳಗೆ ಅರ್ಹ ಮತದಾರರ ಹಕ್ಕುಗಳನ್ನು ಸಂರಕ್ಷಿಸುವ ಪ್ರಕ್ರಿಯೆಯಾಗಿದೆ. ಪ್ರಜಾಪ್ರಭುತ್ವವನ್ನು ಬಲಪಡಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬ ಅರ್ಹ ನಾಗರಿಕರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಪರಿಶೀಲಿಸಿ, ಎಸ್‌.ಐ.ಆರ್ ಪ್ರಕ್ರಿಯೆಗೆ ಅಗತ್ಯ ಸಹಕಾರ ನೀಡಬೇಕು ಎಂದು ತಿಳಿಸಿದರು.

ನಂತರ ಮಾಜಿ ಶಾಸಕರಾದ ಗಂಗಾಧರ ನಾಯಕ ಮಾತನಾಡಿ ಈ ವಿಶೇಷ ಮತ ಪಟ್ಟಿ ಪರಿಷ್ಕರಣೆ ಕಾರ್ಯಕ್ರಮದಲ್ಲಿ ಯಾವುದೇ ಗೊಂದಲ ಹಾಗೂ ಗಲಾಟೆಗಳಿಗೆ ಅವಕಾಶ ಕೊಡದೆ ಬಿಜೆಪಿ ಪಕ್ಷದಿಂದ ನೇಮಿಸಿದ ಬಿಎಲ್ಎಗಳು ಬಿಎಲ್ಒಗಳ ಜೊತೆಗೆ ಸಹಕರಿಸಿ ಯಶಸ್ವಿಗೊಳಿಸಲು ತಿಳಿಸಿದರು. ತಾಲೂಕಿನ ಕಪಗಲ್, ಸಂಗಾಪುರ, ಜಾನೇಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಗ್ರಾಮಗಳಲ್ಲಿ ಪಾದಯಾತ್ರೆ ನಡೆಸಿ ಮನೆ ಮನೆಗೆ ತೆರಳಿ ಬಿಜೆಪಿಯಿಂದ ಎಸ್.ಐ.ಆರ್ ಕುರಿತು ಜಾಗೃತಿ ಮೂಡಿಸಲಾಯಿತು.

ಈ ಸಂದರ್ಭದಲ್ಲಿ ಮಾನ್ವಿ ಮಂಡಲ ಬಿಜೆಪಿ ಪಕ್ಷದ ಅಧ್ಯಕ್ಷರಾದ ವೀರಭದ್ರಗೌಡ ಭೋಗಾವತಿ, ಮುಖಂಡರಾದ ಜಿ.ಸುಧಾಕರ್, ಕೆ.ನಾಗಲಿಂಗಸ್ವಾಮಿ, ಶರಣಪ್ಪಗೌಡ ನಕ್ಕುಂದಿ, ಅಯ್ಯಪ್ಪ ನಾಯಕ ಮ್ಯಾಕಲ್, ಅರಕೇರಿ ರಾಮಣ್ಣ ನಾಯಕ, ಜೆಲ್ಲಿ ನಾಗರಾಜ್ ನಾಯಕ, ಜಗದೀಶ್,ದುರುಗಪ್ಪ ತಡಕಲ್, ರವಿಕುಮಾರ್, ಉದಯಕುಮಾರ್, ತಿಮ್ಮನಗೌಡ, ಗುರುಸಿದ್ದಪ್ಪ ಕಣ್ಣೂರು, ಜಲ್ಲಿ ಆಂಜನೇಯ್ಯ ನಾಯಕ ಸೇರಿದಂತೆ ನೀರಮಾನ್ವಿ ಗ್ರಾಮ ಪಂಚಾಯಿತಿ ಮಟ್ಟದ ಬಿಜೆಪಿ ಮುಖಂಡರು, ಕಾರ್ಯಕರ್ತರು ಭಾಗವಹಿಸಿದರು.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನೆಲ್: ಹುಸೇನ್ ಭಾಷಾ ನಕ್ಕುಂದಿ ಮಾನ್ವಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button