ನಿಯಮ ಉಲ್ಲಂಘಿಸಿ ಅಡುಗೆ ಸಹಾಯಕಿ ನೇಮಕ – ಮರು ನೇಮಕಾತಿಗೆ ಒತ್ತಾಯ.
ಮಸ್ಕಿ ಜು.11

ಪಟ್ಟಣದ ಪಿಎಂ ಶ್ರೀ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಅಡುಗೆ ಸಹಾಯಕಿಯರ ಹುದ್ದೆ ಸರ್ಕಾರದ ನಿಯಮ ಅನುಸಾರ ಮಾಡದೆ ತಮ್ಮ ಇಚ್ಛಾನುಸಾರ ನೇಮಕಾತಿ ಮಾಡಿದ್ದಾರೆ.
ಪುನಃ ಪರಿಶೀಲನೆ ಮಾಡಿ ನೇಮಕಾತಿ ಮಾಡಿ ಕೊಳ್ಳಬೇಕು ಇಲ್ಲವಾದರೆ ತಮ್ಮ ಕಚೇರಿ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಕರ್ನಾಟಕ ವಾಲ್ಮೀಕಿ ಮಹಾಸಭಾ ತಾಲೂಕಾಧ್ಯಕ್ಷ ಆರ್.ಕೆ ನಾಯಕ ಮುಖ್ಯ ಗುರುಗಳಿಗೆ ಮನವಿ ಸಲ್ಲಿಸುವುದರ ಮುಖಾಂತರ ಎಚ್ಚರಿಸಿದ್ದಾರೆ.
ನಂತರ ಮಾತನಾಡಿದ ಆರ್.ಕೆ ನಾಯಕ ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮೀಸಲಾತಿಗೆ ಅನುಸಾರ ಆಯ್ಕೆ ಮಾಡದೆ ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ಅಡುಗೆ ಸಹಾಯಕಿಯರ ಹುದ್ದೆಗಳನ್ನು ಆಯ್ಕೆ ಮಾಡಿದ್ದಾರೆ.
ಪುನಃ ಅರ್ಜಿಯನ್ನು ಆಹ್ವಾನಿಸಿ ಸರ್ಕಾರದ ನಿಯಮಗಳ ಪ್ರಕಾರ ಆಯ್ಕೆ ಮಾಡಬೇಕು ಒಂದು ವೇಳೆ ನಿರ್ಲಕ್ಷ್ಯ ವಹಿಸಿದ್ದಲ್ಲಿ ತಮ್ಮ ಕಚೇರಿ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನೆಲ್: ಹುಸೇನ್ ಭಾಷಾ ನಕ್ಕುಂದಿ ಮಾನ್ವಿ

