ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ವತಿಯಿಂದ ಸಾಮೂಹಿಕ ಶ್ರೀ ಸತ್ಯನಾರಾಯಣ ಸ್ವಾಮಿ – ಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮ ಜರಗಿತು.

ಕೂಡ್ಲಿಗಿ ಸೆ.07

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕೂಡ್ಲಿಗಿ ಪಟ್ಟಣದ ಅನುಬಂಧ ಕಲ್ಯಾಣ ಮಂಟಪದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ರಿ ಕೂಡ್ಲಿಗಿ ತಾಲೂಕು ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಹಾಗೂ ಮಹಿಳಾ ಜ್ಞಾನ ವಿಕಾಸ ಕೇಂದ್ರ ವಿರುಪಾಪುರ ವಲಯ ಇವರ ಸಂಯುಕ್ತ ಆಶ್ರಯದಲ್ಲಿ.

ಪರಮ ಪೂಜ್ಯ ಪದ್ಮವಿಭೂಷಣ ರಾಜ ಋಷಿ ಡಾ, ವಿರೇಂದ್ರ ಹೆಗ್ಗಡೆಯವರ ಮತ್ತು ಮಾತೃ ಶ್ರೀ ಡಾ, ಹೇಮಾವತಿ ಅಮ್ಮನವರ ಕೃಪಾಶೀರ್ವಾದದೊಂದಿಗೆ ಸಾಮೂಹಿಕ ಶ್ರೀ ಸತ್ಯನಾರಾಯಣ ಸ್ವಾಮಿ ಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.

ಬಾಳೆಕಂಬ ಅಲಂಕಾರದೊಂದಿಗೆ ತಳಿರು ತೋರಣಗಳಿಂದ ರಂಗೋಲಿ ಅಲಂಕೃತ ಗೊಂಡು ಬೆಳಗಿನಿಂದ ಮಹಿಳೆಯರು ಗಂಗೆ ಪೂಜೆ, ಕುಂಭ ಮೇಳದೊಂದಿಗೆ ಶ್ರೀ ಸತ್ಯನಾರಾಯಣ ಸ್ವಾಮಿ ಪೂಜೆಗೆ ಅದ್ದೂರಿ ಅಲಂಕೃತ ಗೊಂಡಿತು.

ಕರ್ಪೂರ ಜ್ಯೋತಿ ಬೆಳಗುವುದರ ಮುಖಾಂತರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶ್ರೀ ಸತೀಶ್ ಶೆಟ್ಟಿ ಜಿಲ್ಲಾ ನಿರ್ದೇಶಕರು. ಶ್ರೀ ಕ್ಷೇತ್ರ ಧರ್ಮಸ್ಥಳ ವೀರೇಂದ್ರ ಹೆಗಡೆಯವರು ನಡೆಸಿ ಕೊಟ್ಟಿರುವ ಮತ್ತು ಧಾರ್ಮಿಕ ಅವರ ಒಂದು ಭಾಗವಾಗಿದೆ ಧಾರ್ಮಿಕವಾಗಿ ಪ್ರತಿಯೊಂದು ಹಬ್ಬ ಅರಿದಿನದಲ್ಲಿ ನಾವು ಹಬ್ಬವನ್ನು ಆಚರಿಸುವುದು ನಮ್ಮ ಸಂಪ್ರದಾಯವಾಗಿದೆ.

ಹಾಗಾಗಿ ನಮ್ಮ ಶ್ರೀ ಕ್ಷೇತ್ರ ಧರ್ಮಸ್ಥಳ ಹೆಗಡೆಯವರ ಕನಸು ಸಾಮೂಹಿಕವಾಗಿ ವರಮಹಾಲಕ್ಷ್ಮಿ ಪೂಜೆ ಮತ್ತು ಶ್ರೀ ಸತ್ಯನಾರಾಯಣ ಪೂಜೆ ಈ ಶ್ರಾವಣ ಮಾಸದಲ್ಲಿ ನಡೆದು ಬಂದಿದೆ ಹಾಗಾಗಿ ನಾವು ಶ್ರಾವಣ ಮಾಸದಲ್ಲಿ ಈ ಒಂದು ಸಾಮೂಹಿಕವಾಗಿ ಪೂಜಾ ಕಾರ್ಯವನ್ನ ಹಮ್ಮಿಕೊಂಡು ಭಕ್ತ ಲೋಕಕ್ಕೆ ಆಯುಷ್ಯ ಆರೋಗ್ಯ ಸಿರಿ ಸಂಪತ್ತು ಕರುಣಿಸಲಿ ಎಂದು ಶ್ರೀ ಮಂಜುನಾಥನಲ್ಲಿ ಭಕ್ತಿ ಪೂರ್ವಕವಾಗಿ ಹಾರೈಸಿದರು.

ಈ ಸಂದರ್ಭದಲ್ಲಿ ಕ್ಷೇತ್ರ ಯೋಜನೆಯ ಅಧಿಕಾರಿಗಳಾದ ಸಂತೋಷ್ ಹಾಗೂ ಮೇಲ್ವಿಚಾರಕರು ವಿರುಪಾಪುರ ವಲಯ ರುದ್ರೇಶ್. ಜ್ಯೋತಿ ಮೇಲ್ವಿಚಾರಕರು ಕೂಡ್ಲಿಗಿ. ವಲಯ ಪ್ರಕಾಶ್ ಮೇಲ್ವಿಚಾರಕರು. ಅಭಿಷೇಕ್. ಅಶ್ವಿನಿ. ಸರಸ್ವತಿ ಜ್ಞಾನವಿಕಾಸ ಸಮನ್ವಯ. ಅಧಿಕಾರಿ ವಲಯದ ಸೇವಾ ಪ್ರತಿನಿಧಿಗಳು ವಿರುಪಾಪುರ ವಲಯ ಹಾಗೂ ವಿ.ಎಲ್.ಇ. ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ ಕಾವಲಿ ಶಿವಪ್ಪ ನಾಯಕ .ಕುಪ್ಪಿನಕೆರೆ ವೀರಣ್ಣ ಪವಿತ್ರ ಕೂಡ್ಲಿಗಿ. ಕಕ್ಕುಪ್ಪಿ ಗುಂಡಣ್ಣ ಸಚಿನ್ ಕುಮಾರ್ ಮಧ್ಯವರ್ಜನ ಶಿಬಿರದ ಅಧ್ಯಕ್ಷರು ಕೂಡ್ಲಿಗಿ. ಬೆಣಿ ಕೊಟ್ರೇಶ್ ವಿರುಪಾಪುರ ದಿಬ್ಬದಹಳ್ಳಿ ಸಿದ್ದೇಶ್. ಅನಂತ ಪದ್ಮನಾಭ ಶೆಟ್ರು ಅನುಬಂಧ ಕಲ್ಯಾಣ ಮಂಟಪ ಮಾಲೀಕರು . ದುರ್ಗೇಶ್ ಕೂಡ್ಲಿಗಿ. ಓಂಕಾರಪ್ಪ ವಕೀಲರು .ಕೆ ಪ್ರಭಾಕರ ಕೂಡ್ಲಿಗಿ. ಜಯತೀರ್ಥ ಆಚಾರ್ಯ. ವಿರೂಪಾಕ್ಷ ಮೂರ್ತಿ. ರಾಜು ವಕೀಲರು ಕೂಡ್ಲಿಗಿ. ಮಹಿಳೆಯರು ಮುದ್ದು ಮಕ್ಕಳು ಇತರರು ಭಾಗಿಯಾಗಿ ಕಾರ್ಯಕ್ರಮ ಯಶಸ್ವಿ ಗೊಳಿಸಿದರು.

ಹೋಬಳಿ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಕೆ.ಎಸ್ ವೀರೇಶ್ ಕೆ ಹೊಸಹಳ್ಳಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button