ಶ್ರೀಶಾರದಾಶ್ರಮದಲ್ಲಿ ವಿದ್ವಾನ್ ಕೆ ಗುರುರಾಜ್ ಅವರಿಂದ – ಶ್ರೀಕೃಷ್ಣ ಸಂಕೀರ್ತನೆ.

ಚಳ್ಳಕೆರೆ ಸೆ.06

ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಆಯೋಜಿಸಿದ್ದ ವಿಶೇಷ ಸತ್ಸಂಗ ಕಾರ್ಯಕ್ರಮದಲ್ಲಿ ಬೆಂಗಳೂರಿನ ಪ್ರಸಿದ್ಧ ಗಾಯಕರಾದ ವಿದ್ವಾನ್ ಕೆ ಗುರುರಾಜ್ ಅವರಿಂದ “ಅದ್ಭುತ ಶ್ರೀಕೃಷ್ಣ ಸಂಕೀರ್ತನಾ” ಕಾರ್ಯಕ್ರಮ ನಡೆಯಿತು.

ಸತ್ಸಂಗದ ದಿವ್ಯ ಸಾನಿಧ್ಯ ವಹಿಸಿ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಮಾತಾಜೀ ತ್ಯಾಗಮಯೀ ಅವರು ಶ್ರೀಕೃಷ್ಣ ಜನ್ಮಾಷ್ಟಮಿಯ ಕುರಿತು ಆಶೀರ್ವಚನ ನೀಡಿದರು. ದಿವ್ಯತ್ರಯರಿಗೆ ಆರತಿ ಮತ್ತು ಅನ್ನಪ್ರಸಾದ ವಿನಿಯೋಗ ನಡೆಯಿತು.

ವಿಶೇಷ ಭಗವನ್ನಾಮ ಸಂಕೀರ್ತನೆಯಲ್ಲಿ ಹೆಚ್ ಲಕ್ಷ್ಮೀದೇವಮ್ಮ, ರಂಗಮ್ಮ, ಎಂ ಗೀತಾ ನಾಗರಾಜ್, ಸುಮ ಪ್ರಕಾಶ್, ವನಜಾಕ್ಷಿ ಮೋಹನ್, ಗೀತಾ ಪ್ರಕಾಶ್, ರಶ್ಮಿ, ಸಂಗೀತ, ಬಿ.ಸುಮನಾ, ಜಿ ಯಶೋಧಾ ಪ್ರಕಾಶ್ , ಶಾಂತಮ್ಮ, ನಾಗರತ್ನಮ್ಮ, ಕವಿತಾ, ಅಂಬುಜಾ, ಯತೀಶ್ ಎಂ ಸಿದ್ದಾಪುರ, ಸಂತೋಷ್, ಚೇತನ್, ಹೃತಿಕ್, ರುಕ್ಮಿಣಿ, ಸರಸ್ವತಿ ಪಾಂಡು, ಗಂಗಾಧರಶೆಟ್ಟಿ, ದರ್ಶನ, ರುದ್ರಪ್ಪ, ಮನೋಹರ್, ವೀಣಾ,ಮಂಜುಳಾ ಸೇರಿದಂತೆ ಸಾಕಷ್ಟು ಸಂಖ್ಯೆಯಲ್ಲಿ ಸದ್ಭಕ್ತರು ಭಾಗವಹಿಸಿದ್ದರು.

ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button