ನನ್ನನ್ನು ನಾಡಿನ ದೊರೆ ಎನ್ನಬೇಡಿ ಪ್ರಜಾ ಸೇವಕ ಎನ್ನಬೇಕೆಂದು – ಸಿ.ಎಂ ಡಿ.ಕೆ ಶಿವಕುಮಾರ್ ಪ್ರತಿಪಾದಿಸಿದರು.
ಕೂಡ್ಲಿಗಿ ಸೆ.06


ಪಟ್ಟಣದ ಗುಡೆಕೋಟೆ ರಸ್ತೆಯಲ್ಲಿ ಪ್ರಜಾ ಸೇವೆ ಕಛೇರಿ ಉದ್ಘಾಟನೆ ಚಾಲನೆ ನೀಡಿ ಮಾತನಾಡಿದ ಡಿ.ಕೆ ಶಿವಕುಮಾರ್ ಇವರು ನನ್ನನ್ನು ನಾಡಿನ ದೊರೆ ಎನ್ನಬೇಡಿ ಪ್ರಜೆ ಸೇವಕ ಎನ್ನಬೇಕು ಕೂಡ್ಲಿಗಿಯಲ್ಲಿ ಡಿಕೆ ಶಿವಕುಮಾರ್ ಪ್ರತಿಪಾದಿಸಿದರು.
ರಾಜನ ಕಾಲ ಮುಗಿಯಿತು ಇನ್ನು ಪ್ರಜಾಪ್ರಭುತ್ವ ಬಂದಿದೆ ನನ್ನನ್ನು ನಾಡಿನ ದೊರೆ ಎಂದು ಕರೆಯುವ ಬದಲು ಪ್ರಜಾ ಸೇವಕ ಎಂದು ಕರೆದರೆ ಅದು ನನಗೆ ಅತ್ಯಂತ ಸಂತೋಷ ತರುತ್ತದೆ ಎಂದು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಪ್ರತಿಪಾದಿಸಿದರು.
ಜನ ಸೇವೆಯೇ ಜನಾರ್ದನ ಸೇವೆ ಎಂಬುದನ್ನು ನಾವು ನಂಬಿದ್ದೇವೆ. ರಾಜ್ಯದ ಜನತೆಗೆ 136 ಶಾಸಕರನ್ನು ಗೆಲ್ಲಿಸಿ ಇಡೀ ದೇಶಕ್ಕೆ ಮಾದರಿಯಾಗುವಂತಹ ಹೊಸ ದಾರಿಯಲ್ಲಿ ಸಾಗಲು ಸರ್ಕಾರಕ್ಕೆ ಅವಕಾಶ ಮಾಡಿ ಕೊಟ್ಟಿದ್ದಾರೆ ಸಾರ್ವಜನಿಕರು ತಮ್ಮ ಕೆಲಸಗಳಿಗಾಗಿ ಸರಕಾರಿ ಕಚೇರಿಗಳು ಹಾಗೂ ಅಧಿಕಾರಿಗಳ ಬಳಿ ಅಲೆಯುವ ಕಾಲ ಈಗ ಮುಗಿದಿದೆ ಸರ್ಕಾರದ ಆಡಳಿತವೇ ನೇರವಾಗಿ ಜನರ ಮನೆ ಬಾಗಿಲಿಗೆ ತಲುಪಬೇಕು ಎನ್ನುವ ಉದ್ದೇಶದಿಂದ ಈ ಕಾರ್ಯಕ್ರಮ ರೂಪಿಸಲಾಗಿದೆ ಎಂದು ಅವರು ವಿವರಿಸಿದರು.
ವಿಧಾನ ಸೌಧ ಡಿಸಿ ಕಛೇರಿ ಅಥವಾ ತಾಲೂಕು ಕಛೇರಿ, ಜನರಿಂದ ದೂರವಿದ್ದು ಆಡಳಿತ ನಡೆಸುವುದು ಸರಿಯಲ್ಲ ಪ್ರತಿಯೊಬ್ಬ ನಾಗರಿಕರಿಗೂ ಸಚಿವರು ಶಾಸಕರು ಅಥವಾ ಅಧಿಕಾರಿಗಳನ್ನು ನೇರವಾಗಿ ಭೇಟಿ ಮಾಡಲು ಸಾಧ್ಯವಾಗುವುದಿಲ್ಲ ಹೀಗಾಗಿ ಜನರ ಸಮಸ್ಯೆಗಳನ್ನು ಆಲಿಸಿ ಸ್ಥಳದಲ್ಲೇ ನೇರ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಪ್ರಜಾ ಸೇವೆಯ ಇಲಾಖೆ ಕಾರ್ಯನಿರ್ವಹಿಸಲಿದೆ ಎಂದು ಹೇಳಿದರು ಇದು ಕೇವಲ ಒಂದು ಸರಕಾರಿ ಇಲಾಖೆ ಆಗದೆ ಜನರ ಬದುಕಿನಲ್ಲಿ ಸಕಾರಾತ್ಮಕ ಬದಲಾವಣೆ ತರುವ ಜನರ ಪರ ವ್ಯವಸ್ಥೆಯಾಗಿ ಹೊರ ಬಲಿದೆ ಎಂದು ಅವರು ಭರವಸೆ ನೀಡಿದರು.
ಜನರ ಬಳಿಗೆ ಅಧಿಕಾರಿಗಳು ಜನ ಸಾಮಾನ್ಯರು ಶಾಸಕರು ಮಂತ್ರಿಗಳು ಅಥವಾ ತಾಲೂಕು ಅಧಿಕಾರಿಗಳು ಹುಡುಕಿಕೊಂಡು ಬರುವುದು ತಪ್ಪಬೇಕು ಅಧಿಕಾರಿಗಳೇ ನೇರವಾಗಿ ಜನರ ಬಳಿಗೆ ತೆರಳಿ ಅವರ ಕುಂದು ಕೊರತೆಗಳನ್ನು ಆಲಿಸಿ ಬಗೆಹರಿಸಬೇಕು ಎಂಬ ಉದ್ದೇಶದಿಂದ ಪ್ರಜೆ ಸೇವಾ ಇಲಾಖೆ ಚಾಲನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ತಿಳಿಸಿದರು.
ರಾಜ್ಯದ ಎಲ್ಲ 224 ಕ್ಷೇತ್ರಗಳಲ್ಲಿಯೂ ಈ ಪ್ರಜಾಸೇವೆ ವ್ಯವಸ್ಥೆಯ ಅನುಷ್ಠಾನಗೊಳ್ಳಲಿದೆ ಪ್ರತಿ ತಿಂಗಳ ಮೊದಲನೇ ಮತ್ತು ಮೂರನೇ ಶನಿವಾರದಂದು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಜನರ ಮಧ್ಯದಲ್ಲಿದ್ದು ಕೆಲಸ ಮಾಡಬೇಕೆಂದು ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ ಸಚಿವರು ತಾಲೂಕು ಹೋಬಳಿ ಮಟ್ಟದ ಹಾಗೂ ಶಾಸಕರು ಪಂಚಾಯಿತಿ ಮಟ್ಟದಲ್ಲಿ ಈ ಕಾರ್ಯಕ್ರಮವನ್ನು ಮುನ್ನಡೆಸಲಿದ್ದಾರೆ ಶಾಸಕರು ಉಪಸ್ಥಿತರಿಲ್ಲದಿದ್ದರೆ ಅಧಿಕಾರಿಗಳೇ ಖುದ್ದಾಗಿ ಪಂಚಾಯಿತಿ ಕೇಂದ್ರಗಳಿಗೆ ತೆರಳಿ ಸಣ್ಣ ಸಭೆಗಳನ್ನು ನಡೆಸಿ ಸಾರ್ವಜನಿಕರಿಂದ ಬಂದ ಹವಾಲುಗಳನ್ನು ಸ್ವೀಕರಿಸಿ ಪರಿಹರಿಸಬೇಕು ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನಿರ್ದೇಶನ ನೀಡಿದರು ಇದೇ ವೇಳೆ ಕೂಡ್ಲಿಗಿಯಲ್ಲಿರುವ ಗಾಂಧೀಜಿ ಚಿತಾಬಸ್ಮ ಪವಿತ್ರ ಸ್ಥಳಕ್ಕೆ ಭೇಟಿ ನೀಡಿ ನಮನ ಸಲ್ಲಿಸಿದರು ಅವರು.
ಶುಕ್ರವಾರ ಬಸವಣ್ಣನವರ ಐಕ್ಯ ಸ್ಥಳಕ್ಕೆ ಭೇಟಿ ನೀಡಿದ್ದು ಬರಗಾಲ ಪ್ರದೇಶ ವೀಕ್ಷಣೆ ನಡೆಸುತ್ತಿದ್ದು ಹೆಲಿಕ್ಯಾಪ್ಟರ್ ಪ್ರೋತ್ಸಾಹದ ಕುರಿತು ಬರುವ ಟೀಕೆಗಳಿಗೆ ಟಿಪ್ಪಣಿಗೆ ತಲೆಕೆಡಿಸಿಕೊಳ್ಳುವುದಿಲ್ಲ ಟೀಕೆಗಳು ಸಾಯುತ್ತವೆ ಆದರೆ ನಾವು ಮಾಡಿದ ಕೆಲಸಗಳು ಮಾತ್ರ ಉಳಿಯುತ್ತವೆ ಎಂದು ಅವರು ಪ್ರತಿಪಾದಿಸಿದರು ಜನರ ಹತ್ತಿರಕ್ಕೆ ಆಡಳಿತವನ್ನು ಒಯ್ಯುವುದೇ ಸರಕಾರದ ಮೂಲ ಉದ್ದೇಶವಾಗಿದೆ.
ಜನರ ಮುಖದಲ್ಲಿ ನಗು ಕಾಣದೆ ಸರಕಾರದ ಯಶಸ್ಸು:-
ಸಾರ್ವಜನಿಕರು ಅರ್ಜಿಗಳು ಕೇವಲ ಸುಳ್ಳು ಭರವಸೆ ನೀಡುವುದು ಮುಖ್ಯವಲ್ಲ ಅವರಿಗೆ ಸೂಕ್ತ ಪರಿಹಾರ ತಲುಪಿಸಿದಾಗ ಮಾತ್ರ ಯೋಜನೆಯ ನೈಜ ಯಶಸ್ಸು ಸಾಧ್ಯ ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ತಿಳಿಸಿದರು ವಿಜಯನಗರದ ಪವಿತ್ರ ಭೂಮಿಯಲ್ಲಿ ಈ ಜನಪರ ಯೋಜನೆಗೆ ಚಾಲನೆ ನೀಡಲಾಗಿದೆ ಸರಕಾರದ ಯೋಜನೆಗಳು ಹಾಗೂ ಸೌಲಭ್ಯಗಳು ಪ್ರತಿಯೊಬ್ಬರಿಗೂ ತಲುಪಬೇಕು ಎಂಬುದನ್ನು ನಮ್ಮ ಮುಖ್ಯ ಉದ್ದೇಶವಾಗಿದೆ ತಿಂಗಳಿಗೆ ಎರಡು ದಿನ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸುತ್ತಿದ್ದಾರೆ ಪಿಂಚಣಿ ಭೂಮಿ ವಾಣಿಜ್ಯ ಸರಕಾರದ ಸೌಲಭ್ಯಗಳು ಖಾತೆ ಬದಲಾವಣೆ ಗ್ಯಾರಂಟಿ ಯೋಜನೆಗಳ ಆಗುವ ಮನೆ ನಿವೇಶನಕ್ಕೆ ಸಂಬಂಧಿಸಿದ ಅರ್ಜಿಗಳನ್ನು ಪರಿಶೀಲಿಸಿ ಪರಿಹಾರ ಒದಗಿಸಲಾಗುವುದು ಬಡವರ ಹಾಗೂ ಶೋಷಿತರಿಗೆ ತಹಸೀಲ್ದಾರ್ ಎ.ಸಿ ಅಥವಾ ಡಿ.ಸಿ ಮಟ್ಟದ ವ್ಯಾಜ್ಯಗಳ ಹೋರಾಡಲು ಉಚಿತವಾಗಿ ವಕೀಲರ ಸೇವೆ ಒದಗಿಸಿ ಕಾನೂನು ನೆರವು ನೀಡಲಾಗುವುದು ಅರ್ಜಿ ತಿರಸ್ಕೃತ ಗೊಂಡರೆ ಅದಕ್ಕೆ ಕಾರಣವನ್ನು ಸ್ಪಷ್ಟ ಪಡಿಸಲಾಗುವುದು ಅರ್ಜಿದಾರರಿಗೆ ಸಂಪೂರ್ಣ ಪರಿಹಾರ ಸಿಗುವವರೆಗೂ ಸರಕಾರ ಅವರ ಬೆನ್ನಿಗೆ ನಿಲ್ಲಲಿದೆ ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಭರವಸೆ ನೀಡಿದರು.
ಸಮಾಜದ ಪ್ರತಿಯೊಂದು ವರ್ಗಕ್ಕೂ ಅಂಬೇಡ್ಕರ್ ಅವರ ಚಿಂತನೆ ಅಂತ ಸಮಾನ ಗೌರವ ಸಿಗಬೇಕು ಎಂಬುದು ಸರಕಾರ ಆಸೆಯ ಸರಕಾರ ನೀಡಿದ ಐದು ಗ್ಯಾರಂಟಿ ಯೋಜನೆಗಳನ್ನು ಟೀಕಿಸಿದ್ದ ವಿರೋಧ ಪಕ್ಷಗಳು ಅದನ್ನು ಕಾರ್ಯರೂಪಕ್ಕೆ ತಂದು ತೋರಿಸಿದ್ದೇವೆ ಇಡೀ ದೇಶಕ್ಕೆ ಮಾದರಿಯಾಗಲಿದೆ ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.
ಶಿಕ್ಷಕರಿಗೆ ಟಿ.ಆರ್ ಗೌರವ:-

ದೇಶದ ಅಭಿವೃದ್ಧಿಗೆ ಸೈನಿಕ ಕಾರ್ಮಿಕ ಹಾಗೂ ಕೃಷಿಕ ರಸ್ತೆ ಶಿಕ್ಷಕರ ಕೊಡುಗೆಯೂ ಪ್ರಮುಖವಾಗಿದೆ ಆದ್ದರಿಂದ ಮುಂಬರುವ ದಿನಗಳಲ್ಲಿ ಶಿಕ್ಷಕರ ಹೆಸರಿನ ಮುಂದೆ ಟಿ ಆರ್ ಎಂದು ಸೇರಿಸಿ ಗೌರವಿಸುವ ಸಂಪ್ರದಾಯವನ್ನು ಪ್ರತಿಯೊಬ್ಬರೂ ಮಾಡಬೇಕು ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ತಿಳಿಸಿದರು ಶಿಕ್ಷಕರ ದಿನಾಚರಣೆ ಮಹತ್ವವನ್ನು ಸ್ಮರಿಸಿದೆ ರಾಜ್ಯದಲ್ಲಿ ನಾಲ್ಕುವರೆ ಲಕ್ಷಕ್ಕೂ ಹೆಚ್ಚು ಶಿಕ್ಷಕರಿದ್ದಾರೆ ಜನ್ಮ ನೀಡಿದ ತಾಯಿ ಮತ್ತು ಅಕ್ಷರ ಕಲಿಸಿದ ಶಿಕ್ಷಕನೊಬ್ಬರು ನಮಗೆ ದೇವರು ಇದ್ದಂತೆ ವೈದ್ಯರು ಇಂಜಿನಿಯರ್ಗಳಿಗೂ ಸಿಗುವ ಶಿಕ್ಷಕರಿಗೂ ಗೌರವ ನೀಡಲು ಅವರ ಹೆಸರಿನ ಮುಂದೆ ಟೀಚರ್ ಎಂಬ ಬಿರುದು ಬಳಸುವ ಕುರಿತು ಸಂಪುಟ ಸಭೆಯಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಮನೆ ಬಾಗಿಲಿಗೆ ಈ ಖಾತೆ ದಾಖಲೆ:-
ಪ್ರತಿಯೊಬ್ಬರ ಆಸ್ತಿಗೆ ಸೂಕ್ತ ಭದ್ರತೆ ಕಲ್ಪಿಸುವುದು ಸರಕಾರದ ಕರ್ತವ್ಯ ಭೂಮಿ ಗ್ಯಾರಂಟಿ ಯೋಜನೆ ಅಡಿ ತಾಲೂಕಿಗೆ ಈಗಾಗಲೇ 25. 276 ಜನರಿಗೆ ಹಕ್ಕುಪತ್ರ ನೀಡಲಾಗಿದೆ ಆಸ್ತಿಗಳ ಅಳತೆ ಮಾಡಿ ಮಾಲೀಕರ ಭಾವಚಿತ್ರದೊಂದಿಗೆ ಖಾತೆ ದಾಖಲೆಗಳನ್ನು ನೇರವಾಗಿ ಮನೆ ಬಾಗಿಲಿಗೆ ತಲುಪಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಬಾಗಿಲಿಗೆ ಬಂದಿದ್ದ ನಿಮ್ಮ ಸರಕಾರ ಸೇವೆಗೆ ಇರಲಿ ನಿಮ್ಮ ಸಹಕಾರ ಎಂಬ ಧ್ಯೇಯ ವಾಕ್ಯದೊಂದಿಗೆ ಈ ಅಭಿಯಾನವನ್ನು ಪ್ರಾರಂಭಿಸಲಾಗಿದೆ ಬಡವರು ಮತ್ತು ಶಕ್ತಿ ಇಲ್ಲದವರಿಗೆ ನೆರವಾಗಲು ಉಚಿತ ಸರಕಾರಿ ವಕೀಲರ ಸೌಲಭ್ಯ ಸೇರಿದಂತೆ ಕಾನೂನು ನೆರವು ನೀಡುವ ತೀರ್ಮಾನ ಸರಕಾರ ಕೈಗೊಂಡಿದೆ ಎಂದು ಡಿಕೆ ಶಿವಕುಮಾರ್ ತಿಳಿಸಿದರು.
ಈ ಸಂದರ್ಭದಲ್ಲಿ ಸ್ಥಳಿಯ ಶಾಸಕರಾದ ಎನ್ ಟಿ ಶ್ರೀನಿವಾಸ್ ರವರು ಮಾತನಾಡಿ ನಮ್ಮ ಹುಣಿಸೇ ನಾಡು ಓನಕೆ ಓಬವ್ವನ ತವರೂರು ಎಂದು ಖ್ಯಾತಿ ಪಡೆದಿರುವ ನಮ್ಮ ಕೂಡ್ಲಿಗಿ ತಾಲೂಕು ಈ ಈ ವರ್ಷ ಮಳೆ ಕೊರತೆಯಿಂದ ನಮ್ಮ ತಾಲೂಕು ಬರ ಪೀಡಿತ ಪ್ರದೇಶವಾಗಿದೆ ಹಾಗಾಗಿ ಸನ್ಮಾನ್ಯ ಮುಖ್ಯಮಂತ್ರಿಗಳು ನಮ್ಮ ಕೂಡ್ಲಿಗಿ ತಾಲೂಕು ಬರ ಪೀಡಿತ ತಾಲೂಕು ಎಂದು ಪರಿಗಣಿಸ ಬೇಕೆಂದು ಅಧಿಕಾರಿಗಳಿಗೆ ಪೊಲೀಸ್ ಇಲಾಖೆಗೆ ಕೃತಜ್ಞತೆ ಸಲ್ಲಿಸಿ ಪ್ರಾಸ್ತವಿಕವಾಗಿ ಮಾತನಾಡಿದರು.
ಮುಖ್ಯಮಂತ್ರಿಗಳು ಭರವಸೆ ನೀಡಿದರು ಅತಿ ಶೀಘ್ರದಲ್ಲೇ ಎರಡನೇ ಹಂತದ ಬರ ಪೀಡಿತ ತಾಲೂಕುಗಳನ್ನು ಘೋಷಣೆ ರಾಜ್ಯದ ಬರ ಪೀಡಿದ ತಾಲೂಕುಗಳು ಘೋಷಣೆಗೆ ಸಂಬಂಧಿಸಿದ ಕೇಂದ್ರ ಮಾರ್ಗದಸೂಚಿ ಮತ್ತು ನಿಯಮಗಳ ಚೌಕಟ್ಟಿನಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳ ಲಾಗುವುದು ಈಗಾಗಲೇ ರಾಜ್ಯದ ಬರ ಪರಿಸ್ಥಿತಿಯ ಕುರಿತು ಎರಡನೇ ಹಂತದ ವರದಿ ಲಭ್ಯವಾಗಿದ್ದು ಇನ್ನೂ ಐವತ್ತು ಹೆಚ್ಚು ತಾಲೂಕುಗಳಲ್ಲಿ ಸಮೀಕ್ಷೆ ಎಲ್ಲಿದೆ ನಿಯಮಗಳ ಪ್ರಕಾರ 21 ದಿನಗಳ ಮಳೆ ಪ್ರಮಾಣ ಹಾಗೂ ನಿಗದಿತ ಮಾನದಂಡಗಳ ಪರಿಶೀಲಿಸಿ ಈ ತಿಂಗಳ ಅಂತ್ಯದ ವೇಳೆಗೆ ಅಭಾವ ಎದುರಿಸುತ್ತಿರುವ ಎಲ್ಲಾ ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಿಸಲಾಗುವುದು ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ತಿಳಿಸಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ವಿಧಾನಸಭಾ ಉಪಾಸಭಾಧ್ಯಕ್ಷ ಮಂಕಾಳು ವೈದ್ಯ, ಮುಜರಾಯಿ ಮೀನುಗಾರಿಕೆ ಹಾಗೂ ಒಳನಾಡು ಜಲ ಸಾರಿಗೆ ಸಚಿವರು ಮತ್ತು ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಕೆ ಎಸ್ ಬಸವಂತಪ್ಪ .ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಉಪಾಧ್ಯಕ್ಷ ಪಿಟಿ ಪರಮೇಶ್ವರ್ ನಾಯಕ್. ಬಳ್ಳಾರಿ ಲೋಕಸಭಾ ಕ್ಷೇತ್ರ ಸಂಸದ ಈ ತುಕಾರಾಂ. ದಾವಣಗೆರೆ ಲೋಕಸಭಾ ಕ್ಷೇತ್ರ ಸಂಸದ ಡಾ, ಪ್ರಭಾ ಮಲ್ಲಿಕಾರ್ಜುನ. ವಿಜಯನಗರ ಕ್ಷೇತ್ರದ ಶಾಸಕ ಎಚ್ ಆರ್ ಗವಿಯಪ್ಪ. ಹಗರಿಬೊಮ್ಮನಹಳ್ಳಿ ಶಾಸಕ ಕೆ ನೇಮರಾಜ ನಾಯಕ್. ಹಡಗಲಿ ಶಾಸಕ ಎಲ್ ಕೃಷ್ಣನಾಯಕ ಹರಪನಹಳ್ಳಿ ಶಾಸಕಿ ಲತಾ ಮಲ್ಲಿಕಾರ್ಜುನ್ .ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರು ಕುರಿ ಶಿವಮೂರ್ತಿ. ಸರಕಾರದ ಮುಖ್ಯ ಕಾರ್ಯದರ್ಶಿ ಡಾ, ಶಾಲಿನಿ ರಜನೀಶ್. ಇಂಧನ ಇಲಾಖೆ ಸರಕಾರದ ಅಪಾರ ಮುಖ್ಯ ಕಾರ್ಯದರ್ಶಿ ಗೌರವ ಗುಪ್ತ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಪ್ರಧಾನ ಕಾರ್ಯದರ್ಶಿ, ಪಂಕಜ ಕುಮಾರ್ ಪಾಂಡೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾಕ್ಟರ್ ಕೆ ಜಿ ಜಗದೀಶ್. ಆರ್ಥಿಕ ಇಲಾಖೆ ಸರಕಾರದ ಕಾರ್ಯದರ್ಶಿಗಳು ರೇಖಾ ಎನ್ ಟಿ ಆರ್ ಬಿ ರಾಮ್ ಜಿ ಶಂಕರ್ ರಾಜೇಶ ಆಯುಕ್ತ ಬಳ್ಳಾರಿ ವಲಯ ಪೊಲೀಸ್ ಮಹಾ ನಿರೀಕ್ಷಕರು ಡಾ, ಬಿ ಎಸ್ ಹರ್ಷ ಜಿಲ್ಲಾ ಪಂಚಾಯತಿ ಸಿ ಮಹಮದ್ ಅಲಿ ಅಕ್ರಂಶ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಎಸ್ ಜಾಹ್ನವಿ, ಸೇರಿದಂತೆ ಮತ್ತು ಉಪಸ್ಥಿತರಿದ್ದರು.
ಜಿಲ್ಲಾಧಿಕಾರಿಗಳು ಕವಿತಾ ಮನಿಕೇರಿ ಸ್ವಾಗತಿಸಿದರು. ಸ್ಥಳೀಯ ಶಾಸಕರು ಹಾಗೂ ಕಾಂಗ್ರೆಸ್ ಮುಖಂಡರು ಮಹಿಳೆಯರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿ ಗೊಳಿಸಿದರು.
ಹೋಬಳಿ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಕೆ.ಎಸ್ ವೀರೇಶ್ ಕೆ ಹೊಸಹಳ್ಳಿ

