ಲೋಕ ಕಲ್ಯಾಣ ಶಾಲೆಯಲ್ಲಿ – ಶಿಕ್ಷಕರ ದಿನಾಚರಣೆ ಆಚರಣೆ.
ವಿಜಯಪುರ ಸೆ.06


ದಿನಾಂಕ 05-09-2026 ರಂದು ವಿಜಯಪುರ ನಗರದ ಡಾಲರ್ಸ್ ಕಾಲೋನಿಯ ಲೋಕ ಕಲ್ಯಾಣ ಇಂಗ್ಲೀಷ್ ಮಾಧ್ಯಮ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಯುತ ದಾನಪ್ಪ ಸೂರಗೊಂಡರವರು ಅಧ್ಯಕ್ಷರು ಲೋಕಕಲ್ಯಾಣ ಶಾಲೆ, ಮುಖ್ಯ ಅತಿಥಿಗಳಾಗಿ ಶ್ರೀಯುತ ಶ್ರೀಕಾಂತ್ ಕುಬಸದರವರು ಕಾರ್ಯಕ್ರಮವನ್ನು ಉದ್ದೇಶಿಸಿ, “ಶಿಕ್ಷಕರು ಮಕ್ಕಳ ಭಾವಿ ಜೀವನದ ರಕ್ಷಕರು” ಅದರಂತೆ ಸರ್ವಪಲ್ಲಿ ರಾಧಾಕೃಷ್ಣನನ್ ರವರು ಒಬ್ಬ ಒಳ್ಳೆಯ ತತ್ವಜ್ಞಾನಿ ಉಪರಾಷ್ಟ್ರಪತಿ ಹಾಗೂ ರಾಷ್ಟ್ರಪತಿಯಾಗಿದ್ದರು. ಅವರ ಜೀವನ ಮತ್ತು ಕಾರ್ಯಗಳ ಬಗ್ಗೆ ವಿವರಿಸಿದರು.
ಶಾಲೆಯ ಆಡಳಿತ ಅಧಿಕಾರಿಗಳಾದ ಶ್ರೀಯುತ ಪ್ರಭು ಕೋಟ್ಯಾಳ ಸರವರು ರಾಧಾಕೃಷ್ಣನನ್ ರವರ ಸಂಕ್ಷಿಪ್ತ ಜೀವನದ ಬಗ್ಗೆ ವಿವರಿಸಿದರು. ಮುದ್ದು ಮಕ್ಕಳಿಂದ ಕಾರ್ಯಕ್ರಮ ನಿರೂಪಣೆ ನಡೆಯಿತು.
ಅತಿಥಿಗಳಾಗಿ ಶ್ರೀಶೈಲ್ ತೇಲಿ, ರವರು ಕಿರಣ್ ಪಾಟೀಲ ಅವರು ತ್ರಿಲೋಕ ಮಾಳಿರವರು, ಪನ್ನಾ ಲಾಲಾ ಪ್ರಜಾಪತರವರು ಗಣ್ಯ ವ್ಯಾಪಾರಸ್ಥರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಯುತ ದಯಾಸಾಗರ್ ಸುರಗೊಂಡ ರವರು, ಮತ್ತು ಯೋಗ ಮತ್ತು ಕರಾಟೆ ಶಿಕ್ಷಕರಾದ ಶ್ರೀ ಬಸವರಾಜ ನಂ ಬಾಗೇವಾಡಿ ಸಾ ಉತ್ನಾಳ ರವರು ಶಾಲೆಯ ಎಲ್ಲಾ ಗುರುಗಳು, ಗುರು ಮಾತೆಯರು, ಮನರಂಜನೆ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

