ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಮಾಜಿ ಪ್ರಧಾನಮಂತ್ರಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ – ಜಯಂತಿಯನ್ನು ಗೌರವ ಪೂರ್ವಕವಾಗಿ ಆಚರಿಸಲಾಯಿತು.
ಮಾನ್ವಿ ಅ 02


ಜನತಾ ದಳ (ಜಾತ್ಯತೀತ) ಪಕ್ಷದ ಕಾರ್ಯಾಲಯದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಮಾಜಿ ಪ್ರಧಾನಮಂತ್ರಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿಯನ್ನು ಗೌರವ ಪೂರ್ವಕವಾಗಿ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಭಾವ ಚಿತ್ರಗಳಿಗೆ ಪುಷ್ಪ ನಮನ ಸಲ್ಲಿಸಿ, ಅವರ ದೇಶ ಸೇವೆ, ತ್ಯಾಗ, ಸರಳತೆ ಹಾಗೂ ಆದರ್ಶಗಳನ್ನು ಸ್ಮರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಜೆಡಿಎಸ್ ಪಕ್ಷದ ಯುವ ಘಟಕದ ರಾಜ್ಯ ಉಪಾಧ್ಯಕ್ಷರಾದ ಶ್ರೀ ರಾಜಾ ರಾಮಚಂದ್ರ ನಾಯಕ ದೊರೆ, ಮಹಾತ್ಮ ಗಾಂಧೀಜಿ ಅವರ ಸತ್ಯ ಮತ್ತು ಅಹಿಂಸೆಯ ಮಾರ್ಗ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಸರಳತೆ, ಪ್ರಾಮಾಣಿಕತೆ ಮತ್ತು ದೇಶಭಕ್ತಿಯ ಆದರ್ಶಗಳನ್ನು ಸ್ಮರಿಸಿದರು. ಇಬ್ಬರು ಮಹಾನ್ ನಾಯಕರ ಜೀವನ ಹಾಗೂ ದೇಶಸೇವೆಯ ಮೌಲ್ಯಗಳು ಇಂದಿನ ಪೀಳಿಗೆಗೂ ಸದಾ ಪ್ರೇರಣೆಯಾಗಿವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪಕ್ಷದ ತಾಲೂಕು ಅಧ್ಯಕ್ಷರಾದ ಶ್ರೀ ಈರಣ್ಣ ಮರ್ಲಟ್ಟಿ, ನಗರ ಘಟಕದ ಅಧ್ಯಕ್ಷರಾದ ಶ್ರೀ ಹೆಚ್. ಮೌನೇಶ್ ಗೌಡ, ರೈತ ಘಟಕದ ಅಧ್ಯಕ್ಷ ಶರಣಪ್ಪ ಗೌಡ ಮದ್ಲಾಪೂರ, ಪುರಸಭೆ ಸದಸ್ಯರಾದ ಶ್ರೀ ಬಾಷಾ ಸಾಬ್, ಶ್ರೀ ಶರಣಪ್ಪ ಮೇದಾ, ಮುಖಂಡರಾದ ಶೌಕತ್ ಅಲಿ, ಸೇತುರಾಮ್ ಶೆಟ್ಟಿ, ಬಸವರಾಜ್ ಸ್ವಾಮಿ, ಶಿವಕುಮಾರ್ ಸಾಹುಕಾರ, ಎಂ.ಡಿ. ಉಸ್ಮಾನ್, ಸಂತೋಷ್ ಹೂಗಾರ್, ವಿಜಯ ನಾಯಕ ಕೊಟ್ನೆಕಲ್, ಜಯಕುಮಾರ್, ವೀರೇಶ್ ವಿಶ್ವಕರ್ಮ, ಹನುಮನಗೌಡ ನಾಯಕ, ಸಂಗಮೇಶ ಹೀರಾ ಸೇರಿದಂತೆ ಪಕ್ಷದ ಮುಖಂಡರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್ ಭಾಷಾ ನಕ್ಕುಂದಿ ಮಾನ್ವಿ
